ಹಿರಿಯರು, ಮಕ್ಕಳಿಗೂ ತಿರುಪತಿ ದರ್ಶನ ಭಾಗ್ಯ

ತಿರುಪತಿ(ಡಿ12): ಕೊರೊನಾ  ಸೋಂಕಿನ ಹಿನ್ನೆಲೆ ಆಂಧ್ರಪ್ರದೇಶ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳಿಗೆ ತಿರುಪತಿ ದೇವಸ್ಥಾನದಲ್ಲಿ ಪ್ರವೇಶ ನಿರ್ಬಂಧಿಸಿದ್ದರು. ಆದರೆ ಈಗ ಕೆಲವೊಂದು ಬದಲಾವಣೆಗಳನ್ನು ಅಲ್ಲಿನ ಸರ್ಕಾರ ಮಾಡಿದೆ.

ಮಾರ್ಚ್ ತಿಂಗಳಿನಲ್ಲಿ ತಿರುಪತಿ ದೇವಸ್ಥಾನವನ್ನು ಮುಚ್ಚಿಹಾಕಲಾಗಿತ್ತು. ಈ ಮಧ್ಯದಲ್ಲಿ ಹಲವು ಕರೆಗಳು ಮಾಡಿ ದೇವಸ್ಥಾನಕ್ಕೆ ಹಿರಿಯರನ್ನು ಮತ್ತು ಮಕ್ಕಳನ್ನು ಸಹ ಪ್ರವೇಶ ಕಲ್ಪಿಸಿ ಕೊಡಬೇಕೆಂದು ಎಂಬ ಬೇಡಿಕೆಯನ್ನು ಸಾರ್ವಜನಿಕರು ಇಟ್ಟಿದ್ದರು. ಈ ಕಾರಣದಿಂದಾಗಿ ಅವಕಾಶವನ್ನು ಕಲ್ಪಿಸಿದೆ, ಆದರೆ ಕೋವಿಡ್‌ ನಿಯಮಗಳನ್ನು ಪಾಲಿಸಿ ದರ್ಶನ ಪಡಡೆಯಬೇಕೆಂದು ದೇವಸ್ಥಾನದ  ಆಡಳಿತ ಮಂಡಳಿ ಹೇಳಿದೆ.

ಲಾಕ್‌ಡೌನ್ ಬಳಿಕ ದೇವಾಲಯವು ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ಸಾವಿರಾರು ಭಕ್ತಾದಿಗಳು ದರ್ಶನಕ್ಕೆ ಆಗಮಿಸುತ್ತಿದ್ದು, ಹಿರಿಯರು ಹಾಗೂ ಮಕ್ಕಳಿಗೆ ದರ್ಶನಕ್ಕೆ ಅವಕಾಶ ನೀಡಿರುವುದು ಭಕ್ತಾದಿಗಳಿಗೆ ಸಂತೋಷವನ್ನು ತಂದುಕೊಟ್ಟಿದೆ.

Exit mobile version