ಇಂದು ಹುಬ್ಬಳ್ಳಿ-ಧಾರವಾಡ, ಕಲ್ಬುರ್ಗಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ

ಬೆಳಗಾವಿ ಸೆ 3 : ಇಂದು ಹುಬ್ಬಳ್ಳಿ – ಧಾರವಾಡ, ಕಲ್ಬುರ್ಗಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದ್ದು, ಚುನಾವಣೆ ಗೆಲ್ಲಲು ಎಲ್ಲಾ ಪಕ್ಷಗಳು ತೀವ್ರ ಕಸರತ್ತು ನಡೆಸುತ್ತಿವೆ.

29 ತಿಂಗಳ ಬಳಿಕ ಹುಬ್ಬಳ್ಳಿ – ಧಾರವಾಡ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ಈ ಬಾರಿಯೂ ಕೂಡ ಹುಬ್ಬಳ್ಳಿ – ಧಾರವಾಡ ಪಾಲಿಕೆಗಳಲ್ಲಿ ಬಿಜೆಪಿ ಗೆದ್ದು ಹ್ಯಾಟ್ರಿಕ್ ಗೆಲುವು ಪಡೆದುಕೊಳ್ಳುವ ತವಕದಲ್ಲಿದೆ. ಹುಬ್ಬಳ್ಳಿ – ಧಾರವಾಡ ಅವಳಿ ಕ್ಷೇತ್ರಗಳಲ್ಲಿ ಬಿಜೆಪಿ 82, ಕಾಂಗ್ರೆಸ್ 82, ಜೆಡಿಎಸ್‌ 42 ಆಮ್ ಆದ್ಮಿ ಪಾರ್ಟಿ 41 ಮತ್ತು ಎಂಐಎಂ 12 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚುನಾವಣೆಯು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ನಡೆಯಲಿದೆ.

ಇಂದು ನಡೆಯತ್ತಿರುವ ಚುನಾವಣಾ ಕ್ಷೇತ್ರಗಳ ವಿವರ :

ಮಹಾನಗರ ಪಾಲಿಕೆಗಳು: ಬೆಳಗಾವಿ (58 ವಾರ್ಡ್), ಹುಬ್ಬಳ್ಳಿ-ಧಾರವಾಡ (82 ವಾರ್ಡ್) ಮತ್ತು ಕಲಬುರಗಿ (55 ವಾರ್ಡ್). ಮಹಾನಗರ ಪಾಲಿಕೆ ಉಪ ಚುನಾವಣೆ; ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡ್‌ ನಗರ ಸ್ಥಳೀಯ ಸಂಸ್ಥೆಗಳು; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಸಭೆ (1 ರಿಂದ 31ನೇ ವಾರ್ಡ್). ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪುರಸಭೆ (1 ರಿಂದ 23ನೇ ವಾರ್ಡ್). ಬೀದರ್ ಜಿಲ್ಲೆಯ ಬೀದರ್ ನಗರ ಸಭೆ (26 ಮತ್ತು 32ನೇ ವಾರ್ಡ್). ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆ (29ನೇ ವಾರ್ಡ್). ನಗರ ಸ್ಥಳೀಯ ಸಂಸ್ಥೆ ಉಪ ಚುನಾವಣೆ; ಬಾಗಲಕೋಟೆ ಜಿಲ್ಲೆಯ ಮುಧೋಳ ನಗರ ಸಭೆ (18), ಬೀಳಗಿ ಪಟ್ಟಣ ಪಂಚಾಯಿತಿ (14), ಮಹಾಲಿಂಗಪೂರ ಪುರಸಭೆ (3), ತೇರದಾಳ ಪುರಸಭೆ (3). ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣ ಪಂಚಾಯಿತಿ (13), ಸೋಮವಾರಪೇಟೆ ಪಟ್ಟಣ ಪಂಚಾಯಿತಿ (1), ಸೋಮವಾರಪೇಟೆ ಪಟ್ಟಣ ಪಂಚಾಯಿತಿ (3). ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಸಭೆ (11). ಕಲಬುರಗಿಯ ವಾಡಿ ಪುರಸಭೆ (4), ವಾಡಿ ಪುರಸಭೆ (23). ಬೀದರ್ ಜಿಲ್ಲೆಯ ಬಸವ ಕಲ್ಯಾಣ ನಗರಸಭೆ (11), ಬಸವ ಕಲ್ಯಾಣ ನಗರ ಸಭೆ (23). ಕೋಲಾರ ಜಿಲ್ಲೆಯ ಕೆಜಿಎಫ್ ನಗರಸಭೆ (12), ದಾವಣಗೆರೆ ಜಿಲ್ಲೆಯ ಹರಿಹರ ನಗರ ಸಭೆ (14), ಬೆಳಗಾವಿ ಜಿಲ್ಲೆಯ ರಾಯಭಾಗ್ ಪಟ್ಟಣ ಪಂಚಾಯಿತಿ (9). ಕೊಪ್ಪಳ ಜಿಲ್ಲೆಯ ಸವದತ್ತಿ ಪುರಸಭೆ (23), ಕುಷ್ಟಗಿ ಪುರಸಭೆ (16). ಗದಗ ಜಿಲ್ಲೆಯ ಮುಳುಗುಂದ ಪಟ್ಟಣ ಪಂಚಾಯಿತಿ (18), ರಾಮನಗರ ಜಿಲ್ಲೆಯ ರಾಮನಗರ ನಗರಸಭೆ (4), ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪುರಸಭೆ (21) ಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ.

Exit mobile version