ತೌಖ್ತೆ ಬೆನ್ನಲ್ಲೇ ಏಳಲು ಸಿದ್ಧವಾಗುತ್ತಿದೆ ಯಾಸ್ ಚಂಡಮಾರುತ

ಬೆಂಗಳೂರು, ಮೇ. 19: ಅರಬ್ಬೀ ಸಮುದ್ರದಲ್ಲಿ ಎದ್ದ ತೌಕ್ತೆ ಚಂಡಮಾರುತದಿಂದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ತೌಕ್ತೆ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಚಂಡಮಾರುತವು ಬಂಗಾಳಕೊಲ್ಲಿ ಸಮುದ್ರ ಭಾಗದಿಂದ ಬರಲಿದೆ ಎನ್ನಲಾಗಿದೆ. ಮೇ 23 ರ ಆಸುಪಾಸಿನಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಯಾಸ್ ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ನಮ್ಮ ವರದಿಗಳ ಪ್ರಕಾರ ಬಂಗಾಳ ಕೊಲ್ಲಿ ಸಮುದ್ರದ ಕೆಲವೆಡೆ ಮುಂದಿನ ವಾರದಲ್ಲಿ ಕಡಿಮೆ ಒತ್ತಡ ಕಾಣಿಸಿಕೊಳ್ಳಲಿದೆ. ಇದು ತೀವ್ರವಾಗುವ ಸಾಧ್ಯತೆಯೂ ಇರುವುದರಿಂದ ಚಂಡಮಾರುತವನ್ನು ನಿರೀಕ್ಷಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಬೆಳವಣಿಗೆಗಳನ್ನು ನೋಡಿ ಅಧಿಕೃತವಾಗಿ ಹೆಚ್ಚಿನ ಮಾಹಿತಿ ಪ್ರಕಟಿಸಲಾಗುವುದು ಎಂದು ಹವಾಮಾನ ಇಲಾಖೆಯ ಚಂಡಮಾರುತ ವಿಭಾಗದ ಅಧಿಕಾರಿ ಸುನಿತಾ ದೇವಿ ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಸದ್ಯದ ಅಂದಾಜಿನ ಪ್ರಕಾರ ಈ ಚಂಡಮಾರುತವು ಮಯನ್ಮಾರ್ ಕಡೆಗೆ ಚಲಿಸುವ ಸಾಧ್ಯತೆ ಇದ್ದು, ಭಾರತಕ್ಕೆ ಅಪ್ಪಳಿಸುವ ಸಂಭವ ಕಡಿಮೆ ಇದೆ ಎನ್ನಲಾಗುತ್ತಿದೆ

Exit mobile version