ಹೈದರಾಬಾದ್: 4.0ಯ ತೀವ್ರತೆಯ ಭೂಕಂಪ

ಹೈದರಾಬಾದ್ ಜು 26: ಇಂದು ಬೆಳಗ್ಗೆ 5 ಗಂಟೆಗೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪನದಿಂದ ಹೈದರಾಬಾದ್ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಭೂಕಂಪದ ಕೇಂದ್ರ ಬಿಂದು ಹೈದರಾಬಾದ್‌ನಿಂದ ದಕ್ಷಿಣಕ್ಕೆ 156 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದಲ್ಲಿದೆ. ಭೂಕಂಪದಲ್ಲಿ ಇದುವರೆಗೆ ಯಾವುದೇ ಹಾನಿ ಅಥವಾ ಸಾವುನೋವುಗಳು ವರದಿಯಾಗಿಲ್ಲ ಎಂದು ತಿಳಿಸಿದೆ

Exit mobile version