ಬಾಲಿವುಡ್ ಫಿಲಂ ಮಾಡಲು ನನಗೆ ಆಸಕ್ತಿಯಿಲ್ಲ, ಕನ್ನಡದಲ್ಲಿ ಮಾತ್ರ ನಟಿಸಲು ಬಯಸುತ್ತೀನಿ : ನಟ ರಿಷಬ್ ಶೆಟ್ಟಿ

Bengaluru : ಪ್ರಸ್ತುತ ತಮ್ಮ ಇತ್ತೀಚಿನ ಚಿತ್ರ ಕಾಂತಾರದ(Kantara) ಯಶಸ್ಸನ್ನು ಆನಂದಿಸುತ್ತಿರುವ ನಟ ರಿಷಬ್ ಶೆಟ್ಟಿ(I wont Act In Bollywood), ಚಿತ್ರದ ಜನಪ್ರಿಯತೆಯ ಹಿನ್ನೆಲೆಯಲ್ಲಿ ತಮಗೆ ಬರುತ್ತಿರುವ ಆಫರ್‌ಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದರು.

ಕಾಂತಾರ ಚಿತ್ರದಲ್ಲಿನ ನಟನೆಗಾಗಿ ವಿಮರ್ಶಕರು(I wont Act In Bollywood) ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವ ರಿಷಬ್, ಬಾಲಿವುಡ್ ಚಿತ್ರಗಳನ್ನು ಮಾಡಲು ನನಗೆ ಆಸಕ್ತಿಯಿಲ್ಲ,

ಬದಲಿಗೆ ಕನ್ನಡ ಚಲನಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
Mashableಗೆ ನೀಡಿದ ಸಂದರ್ಶನದಲ್ಲಿ,

“ನನಗೆ ಪ್ರೊಡಕ್ಷನ್ ಹೌಸ್‌ಗಳು ಮತ್ತು ಇತರರಿಂದ ಸಹಯೋಗಕ್ಕಾಗಿ ಕರೆಗಳು ಬಂದಿವೆ, ಆದರೆ ನಾನು ಕನ್ನಡದಲ್ಲಿ ಮಾತ್ರ ಚಲನಚಿತ್ರಗಳನ್ನು ಮಾಡಲು ಬಯಸುತ್ತೇನೆ” ಎಂದು ರಿಷಬ್ ಹೇಳಿದ್ದಾರೆ.

ರಿಷಬ್ ಶೆಟ್ಟಿ, ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಯಶಸ್ಸು ಪಡೆಯುವ ಮುನ್ನ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/nirmala-sitharaman-about-economy/

ಸ್ಪಾಟ್ ಬಾಯ್‌ನಿಂದ ಹಿಡಿದು ರೆಸ್ಟೋರೆಂಟ್ ಪ್ರಾರಂಭಿಸುವುದು ಮತ್ತು ಸಿವಿಲ್ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ಎಲ್ಲವನ್ನೂ ಮಾಡಿದರು.

“ನಾನು ಬಿ ಕಾಮ್ ಮುಗಿಸಿದ ನಂತರ ಎರಡು ಬಾರಿ ಎಂಬಿಎ ಪಾಸ್ ಮಾಡಲು ಪ್ರಯತ್ನಿಸಿದೆ, ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸೈನೈಡ್ ಚಿತ್ರ ನಿರ್ದೇಶನಕ್ಕೆ ಸಹಾಯ ಮಾಡಿದೆ, ನಾನು ಕ್ಲಾಪ್ ಬಾಯ್ ಕೂಡ ಆಗಿರಲಿಲ್ಲ!

ಕೇವಲ ಕಲಾವಿದರನ್ನು ಕರೆಯಲಷ್ಟೇ ನನ್ನನ್ನು ಇಟ್ಟಕೊಂಡಿದ್ದರು” ಎಂದು ಅವರು ಹೇಳಿದರು.

https://youtu.be/c-fK_yfBAok

ರಿಷಬ್, ನಂತರದ ಏಳು ಚಲನಚಿತ್ರಳಿಗೆ ಮುಖ್ಯ ಪಾತ್ರಕ್ಕೆ ಹೇಗೆ ಆಯ್ಕೆಯಾದರು ಎಂದು ನೆನಪಿಸಿಕೊಂಡರು, ಆದರೆ ಅವುಗಳಲ್ಲಿ ಯಾವುದೂ ಬಿಡುಗಡೆಯಾಗಲಿಲ್ಲ ಎನ್ನುವುದನ್ನು ತಿಳಿಸಿ ಬೇಸರ ವ್ಯಕ್ತಪಡಿಸಿದರು.


ಸದ್ಯ, ವರದಿಗಳ ಪ್ರಕಾರ ಕಾಂತಾರ ಸಿನಿಮಾ ಹಿಂದಿಯಲ್ಲಿ ನಾಲ್ಕನೇ ವಾರಕ್ಕೆ 70 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಾಗೆಯೇ, ವಿಶ್ವಾದ್ಯಂತ ಈ ಚಿತ್ರ 360 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಸದ್ಯ ದೇಶದೆಲ್ಲೆಡೆ ಈಗ ಕಾಂತಾರ ಚಿತ್ರದ ಯಶಸ್ಸಿನ ಬಗ್ಗೆಯೇ ಮಾತು-ಕತೆ ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದೇ ಹೇಳಬಹುದು.

Exit mobile version