ಅನುದಾನ ನೀಡದಿದ್ದರೆ ನನ್ನ ದಾರಿ ನನಗೆ – ಎಂ.ಪಿ. ಕುಮಾರಸ್ವಾಮಿ

ಮೂಡಿಗೆರೆ, ಆ. 13: ನಿನ್ನೆಯಷ್ಟೆ ಸರ್ಕಾರದ ವಿರುದ್ದವೇ ತಿರುಗಿಬಿದ್ದು ಸುದ್ದಿಯಾಗಿದ್ದ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಇಂದು ಪುನಃ ಸರ್ಕಾರ ವಿರುದ್ದ ತಿರುಗಿ ಬಿದ್ದಿದ್ದು, ಕ್ಷೇತ್ರಕ್ಕೆ ಅನುದಾನ ನೀಡದಿದ್ದಲ್ಲಿ ನನ್ನದಾರಿ ನನಗೆ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಮೂಡಿಗೆರೆ ಕ್ಷೇತ್ರವನ್ನು ಎನ್ ಡಿ ಆರ್ ಎಫ್ ಪಟ್ಟಿಯಿಂದ ಕೈಬಿಟ್ಟಿದ್ದರ ಕುರಿತು ಆಸಮಾಧನಗೊಂಡಿದ್ದ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧ ಎದುರು ಪ್ರತಿಭಟನೆ ಕೂಡ ನಡೆಸಿದ್ದರು ಆ ಸಮಯದಲ್ಲಿ ಆರ್. ಅಶೋಕ್ ಮಧ್ಯ ಪ್ರವೇಶಿಸಿ ಪ್ರತಿಭಟನೆ  ಹಿಂದೆಗೆದುಕೊಳ್ಳುವಂತೆ ಮನವೊಲಿಸಿದ್ದರು. ಆದರೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಕ್ಷೇತ್ರಕ್ಕಾಗಿ ಹೋರಾಟ ಮಾಡುತ್ತಿದ್ದೇನೆ.

ಮುಖ್ಯಮಂತ್ರಿಗಳು ಅನುದಾನ ಕೊಡುತ್ತೇನೆಂದು ಹೇಳಿದ್ದಾರೆ. ಅವರು ಅನುದಾನ ಕೊಡದಿದ್ದರೆ ನಾನು ನನ್ನ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದರು. ಕಳೆದ ವರ್ಷ ಪ್ರವಾಹದಿಂದಾಗಿ ನನ್ನ ಕ್ಷೇತ್ರದಲ್ಲಿ 6 ಜನ ಕೊಚ್ಚಿಹೋಗಿದ್ದರು. ಜೊತೆಗ ಮನೆಗಳಿಗೂ ಕೂಡ ಹಾನಿಯಾಗಿತ್ತು ಅದರೆ ನಮ್ಮ ಕ್ಷೇತ್ರಕ್ಕೆ ಮುಖ್ಯಂತ್ರಿಗಳು ಆರ್ ಅಶೋಕ್ ಕೂಡ ಬಂದಿದ್ದರು ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಶುಭಕೋರಿರುವ ಕುರಿತು ಮಾತನಾಡಿದ ಅವರು ಸಿದ್ದರಾಮಯ್ಯ ಒಬ್ಬ ಅಹಿಂದನಾಯಕ ಅವರು ಎಂದರೆ ನನಗೆ ಇಷ್ಟ ಅದಕ್ಕಾಗಿ ಶುಭಕೋರಲು ಹೊಗಿದ್ದೆ ಎಂದು ಹೇಳಿದರು.

ಕಾಂಗ್ರಸ್ ನತ್ತ ಮುಖಮಾಡಿರುವ ಎಂ.ಪಿ. ಕುಮಾರಸ್ವಾಮಿ ?

ಪ್ರಸ್ತುತ ಸರ್ಕಾರದ ವಿರುದ್ದವೇ ತಿರುಗಿ ಬಿದ್ದಿರುವ ಎಂ.ಪಿ. ಕುಮಾರಸ್ವಾಮಿ ಮುಂದಿನ ಬಾರಿಯ ವಿಧಾನಸಭಾ ಚುನಾವಣೆಗೆ ಕಾಂಗ್ರಸ್ ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಕ್ಷೇತ್ರದ ಕೆಲವು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು ಇದು ಚರ್ಚೆಗೆ ಕಾರಣವಾಗಿದೆ.

Exit mobile version