132 ದಿನಗಳಲ್ಲಿ ಅತ್ಯಂತ ಕಡಿಮೆ ದೈನಂದಿನ ಕೊರೊನಾ ಪ್ರಕರಣ ದಾಖಲು

ನವದೆಹಲಿ ಜು 27: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 29,689 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 132 ದಿನಗಳ ನಂತರ ದಾಖಲಾಗುತ್ತಿರುವ ಅತ್ಯಂತ ಕಡಿಮೆ ಪ್ರಕರಣಗಳಾಗಿವೆ. ಇದೇ ವೇಳೆ 415 ಸಾವುಗಳು ಸಂಭವಿಸಿವೆ.

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 11,586 ಮತ್ತು 4,877 ಸೋಂಕುಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳು ಪ್ರಸ್ತುತ 3,98,100 ರಷ್ಟಿದ್ದು, ಮಾರ್ಚ್ 24 ರ ನಂತರ ಮೊದಲ ಬಾರಿಗೆ 4 ಲಕ್ಷಕ್ಕಿಂತ ಕಡಿಮೆಯಾಗಿದೆ. ಸೋಮವಾರದ ವೇಳೆಗೆ ದೇಶದಲ್ಲಿ 3.98 ಲಕ್ಷ ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಈವರೆಗೆ 44,19,12,395 ಡೋಸ್ ಕೋವಿಡ್ ಲಸಿಕೆ ನೀಡಲಾಗಿದ್ದು, ದಿನಕ್ಕೆ ಸರಾಸರಿ 38.26 ಲಕ್ಷ ಡೋಸ್ ನೀಡಲಾಗಿದೆ.

Exit mobile version