ಕಳೆದ 24ಗಂಟೆಯಲ್ಲಿ 34,457 ಕೋವಿಡ್ ‍ಪ್ರಕರಣ ದಾಖಲು

ನವದೆಹಲಿ, ಆ. 21: ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ 34,457 ಕೋವಿಡ್‌ ‍ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆಯು 3.23 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

375 ಮಂದಿ ಸೋಂಕಿನಿಂದ ಮೃತ‍‍ಪಟ್ಟಿದ್ದು, ಈವರೆಗೆ 4.33 ಲಕ್ಷ ಮಂದಿ ಸಾವಿಗೀಡಾಗಿದ್ಧಾರೆ. ಆದರೆ, ಸಕ್ರಿಯ ಪ್ರಕರಣಗಳ ಸಂಖ್ಯೆಯು 3.61 ಲಕ್ಷಕ್ಕೆ ಇಳಿಕೆಯಾಗಿದೆ. ದೇಶದ ಚೇತರಿಕೆ ‍ಪ್ರಮಾಣವು ಶೇಕಡ 97.54ರಷ್ಟಿದೆ ಎಂದು ಸಚಿವಾಲಯವು ಹೇಳಿದೆ.

ಶುಕ್ರವಾರ 17,21,205 ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ 50.45 ಕೋಟಿ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿ ಒಟ್ಟು 3.15 ಕೋಟಿ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಮರಣ ಪ್ರಮಾಣವು ಶೇಕಡ 1.34ರಷ್ಟಿದೆ. ಭಾರತದಲ್ಲಿ ಒಟ್ಟು 57.61 ಕೋಟಿ ಡೋಸ್‌ ಲಸಿಕೆಯನ್ನು ನೀಡಲಾಗಿದೆ.

Exit mobile version