ಬಿಜೆಪಿಯ ಗೆಲುವಿಗೆ ಲಗಾಮು ಹಾಕುವಲ್ಲಿ ಯಶಸ್ವಿಯಾದ ಇಂಡಿಯಾ ಮೈತ್ರಿಕೂಟ.

Bengaluru: ಎಲ್ಲರಿಗೂ ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ (Lok Sabha Election Result) ಅಂತಿಮವಾಗಿ ಬಿಜೆಪಿ (India Alliance Success) 

‘ಚಾರ್ ಸೋ ಪಾರ್’ ಹೇಳಿಕೆಗೆ ಲಗಾಮು ಹಾಕುವಲ್ಲಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ (INDIA Alliance) ವಿಜಯ ಪತಾಕೆ ಹಾರಿಸಿದೆ.‘ಇಂಡಿಯಾ’ ಕೂಟ ಒಟ್ಟೂ 233 ಸ್ಥಾನಗಳಲ್ಲಿ

ಮುನ್ನಡೆ ಸಾಧಿಸಿದೆ.ಅದರಲ್ಲಿ ಕಾಂಗ್ರೆಸ್ ಪಕ್ಷವೂ 100 ಸ್ಥಾನಗಳಲ್ಲಿ ಗೆದ್ದಿದ್ದು, ಕೈ ನಾಯಕರ ಉತ್ಸಾಹವನ್ನು ದುಪ್ಪಟ್ಟಾಗಿದೆ.

India Alliance Success

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಗಳ ಇಂಡಿಯಾ ಕೂಟದ ಯಶಸ್ಸಿಗೆ ಕಾರಣವಾಗಿದೆ. ಇದರೊಂದಿಗೆ ಉತ್ತರಪ್ರದೇಶದಲ್ಲಿ

ಯಾದವ, ಮುಸ್ಲಿಮರ ಮತಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಎಸ್​​ಪಿ ಮುಖಂಡ ಅಖಿಲೇಶ್, 4 ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಅಷ್ಟೇ ಅಲ್ಲದೇ

ಬಿಎಸ್​​ಪಿ (BSP) ಪಾಲಾಗುತ್ತಿದ್ದ ಮತಗಳು ಈ ಬಾರಿ ಎಸ್​​ಪಿ, ಕಾಂಗ್ರೆಸ್​​​ಗೆ (India Alliance Success) ದೊರೆತಿವೆ ಎನ್ನಲಾಗುತ್ತಿದೆ.

ಬಿಜೆಪಿ (BJP) ನಾಯಕರ ಸಂವಿಧಾನ ಬದಲಾವಣೆ ಹೇಳಿಕೆಗಳು ಇಂಡಿಯಾ ಮಿತ್ರಕೂಟಕ್ಕೆ ಪ್ರಭಲ ಅಸ್ತ್ರಗಳಾಗಿತ್ತು. ಪಂಜಾಬ್, ಉತ್ತರ ಪ್ರದೇಶ (Panjab, Uttara Pradesh) ದಲ್ಲಿ ರೈತರ

ಹೋರಾಟಗಳು ಸರ್ಕಾರ ಅವರ ವಿರುದ್ಧ ನೀಡಿದ ಹೇಳಿಕೆಗಳು ಕೂಡಾ ಇಂಡಿಯಾ ಮೈತ್ರಿಕೂಟ ಮುನ್ನಡೆಗೆ ಕಾರಣವಾಯಿತು . ಇದರ ಜೊತೆ ಜೊತೆಗೆ ದೇಶಾದ್ಯಂತ ಬಡ ಜನರಿಗೆ ಮಹಿಳೆಯರಿಗೆ

ನೀಡಿರುವ ಗ್ಯಾರಂಟಿ ಯೋಜನೆಗಳು ಕೂಡ ಇಂಡಿಯಾ ಬಣಕ್ಕೆ ಗೆಲುವಿಗೆ ಪ್ರಮುಖ ಕಾರಣವಾಯಿತು.

ರಾಹುಲ್, ಪ್ರಿಯಾಂಕಾ ಜೋಡಿ ಪ್ರಚಾರ ಕಳೆದ ನಾಲ್ಕು ತಿಂಗಳಿಂದ ವಿಶ್ರಾಂತಿ ಪಡೆಯದೆ ಅಖಿಲೇಶ್ ಯಾದವ್ (Akhilesh Yadav) ಹಾಗೂ ಅವರ ತಂಡದ ಸತತ ಪ್ರಚಾರ ಕೂಡ ಇಂಡಿಯಾ

ಕೂಟಕ್ಕೆ ಮುನ್ನಡೆ ತಂದಿದೆ. ಶಿವಸೇನೆ, ಎನ್​ಸಿಪಿ ಇಬ್ಭಾಗದಿಂದ ಉದ್ಧವ್ ಠಾಕ್ರೆ, ಶರದ್ ಪವಾರ್ (Sharad Pawar) ಜನರ ಅನುಕಂಪ ಪಡೆದುಕೊಂಡರು.ಜೊತೆಗೆ ತಮಿಳುನಾಡಲ್ಲಿ ಕಾಂಗ್ರೆಸ್,

ಡಿಎಂಕೆ ಜಂಟಿಯಾಗಿ ಹೋರಾಡಿದ್ದು ಕೂಡ ಇಂಡಿಯಾ ಕೂಟಕ್ಕೆ ಗೆಲುವಿನ ಹಾದಿಯನ್ನು ಸುಲಭ ಮಾಡಿತು.

ಇದನ್ನು ಓದಿ: ಪ್ರಕೃತಿಯ ಮಕರಂದ, ಹಚ್ಚ ಹಸಿರಾಗಿರಲು ದೇಶವೇ ಚಂದ: ಏನಂತೀರಾ?

Exit mobile version