ಕಾಮನ್‌ ವೆಲ್ತ್‌ ಗೇಮ್ಸ್‌ ಮುಕ್ತಾಯ : 61 ಪದಕ ಗೆದ್ದ ಭಾರತಕ್ಕೆ 4 ನೇ ಸ್ಥಾನ

India

ಲಂಡನ್ : ಇಂಗ್ಲೆಂಡಿನ(England) ಬರ್ಮಿಂಗ್ಹ್ಯಾಮ್ನಲ್ಲಿ(Burminghyam) ನಡೆದ ಕಾಮನ್ವೆಲ್ತ್ ಗೇಮ್ಸ್(Commonwealth Games 2022) ಮುಕ್ತಾಯಗೊಂಡಿದೆ.

ಭಾರತ(India) ತಂಡ ಈ ಬಾರಿ ಒಟ್ಟು 61 ಪದಕಗಳನ್ನು ಗೆಲ್ಲುವ ಮೂಲಕ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಈ ಬಾರಿಯೂ ಆಸ್ಟ್ರೇಲಿಯಾ ಎಂದಿನಂತೆ ಪ್ರಾಬಲ್ಯ ಸಾಧಿಸಿ, ಪದಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ಈ ಬಾರಿ ಆಸ್ಟ್ರೇಲಿಯಾ 67 ಚಿನ್ನದೊಂದಿಗೆ ಒಟ್ಟು 178 ಪದಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ,

ಕಾಮನ್‌ವೆಲ್ತ್ ಕೂಟ ಆಯೋಜಿಸಿದ್ದ ಇಂಗ್ಲೆಂಡ್, 57 ಚಿನ್ನದೊಂದಿಗೆ 176 ಪದಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಇನ್ನು ಕೆನಡಾ(Canada) 26 ಚಿನ್ನದೊಂದಿಗೆ ಒಟ್ಟು 92 ಪದಕಗಳನ್ನು ಪಡೆದು ಮೂರನೇ ಸ್ಥಾನದಲ್ಲಿದೆ.

ಭಾರತ 22 ಚಿನ್ನ ಗೆಲ್ಲುವ ಮೂಲಕ 4ನೇ ಸ್ಥಾನ ಪಡೆದುಕೊಂಡಿದೆ. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಇದು ಭಾರತದ 5ನೇ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಹಿಂದೆ 2010 ರಲ್ಲಿ ಭಾರತದ ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 38 ಚಿನ್ನ ಸೇರಿ 101 ಪದಕಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ, 2ನೇ ಸ್ಥಾನ ಪಡೆದಿತ್ತು.

ಅದಾದ ನಂತರ ಇಂಗ್ಲೆಂಡಿನ ಮ್ಯಾಂಚೆಸ್ಟರ್- 2002 ರಲ್ಲಿ 69 ಪದಕ, ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್- 2018 ರಲ್ಲಿ 66 ಪದಕ ಹಾಗೂ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋ- 2014 ರಲ್ಲಿ 64 ಪದಕಗಳನ್ನು ಭಾರತ ಪಡೆದಿತ್ತು.

ಇನ್ನು ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಅತಿಹೆಚ್ಚು ಪದಕಗಳನ್ನು ಕುಸ್ತಿಯಲ್ಲಿ ಗೆದ್ದಿದೆ. ಕುಸ್ತಿಯಲ್ಲಿ ಒಟ್ಟು 12 ಪದಕಗಳನ್ನು ಭಾರತ ಗೆದ್ದಿದೆ. ಅದೇ ರೀತಿ ವೇಟ್ಲಿಫ್ಟಿಂಗ್ನಲ್ಲಿ 10 ಪದಕಗಳು ಮತ್ತು ಟೇಬಲ್ ಟೆನ್ನಿಸ್ನಲ್ಲಿ 7 ಪದಕಗಳು ಭಾರತದ ಪಾಲಾಗಿದೆ.

ಇನ್ನು ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಶೂಟಿಂಗ್ ಅನ್ನು ಕೈಬಿಡಲಾಗಿದೆ. ಈ ಹಿಂದೆ ಭಾರತ ಶೂಟಿಂಗ್‌ನಲ್ಲಿ ಅತಿಹೆಚ್ಚು ಪದಕಗಳನ್ನು ಗೆಲ್ಲುತ್ತಿತ್ತು. ಆದರೂ ಭಾರತ ಇತರ ಕ್ರೀಡೆಗಳಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ಅಗ್ರ 5ರೊಳಗೆ ಸ್ಥಾನ ಪಡೆಯಲು ಸಾಧ್ಯವಾಗಿದೆ.

ಭಾರತದ ಒಟ್ಟು ಪದಕಗಳು : ಹಾಕಿಯಲ್ಲಿ 1 ಬೆಳ್ಳಿ, 1 ಕಂಚು. ಕ್ರಿಕೆಟ್ನಲ್ಲಿ 1 ಬೆಳ್ಳಿ. ಸ್ಕ್ವಾಷ್ನಲ್ಲಿ 2 ಕಂಚು. ಕುಸ್ತಿಯಲ್ಲಿ 6 ಚಿನ್ನ, 1 ಬೆಳ್ಳಿ, 5 ಕಂಚು. ಟೇಬಲ್ ಟೆನ್ನಿಸ್ನಲ್ಲಿ 4 ಚಿನ್ನ, 1 ಬೆಳ್ಳಿ, 2 ಕಂಚು. ಬ್ಯಾಡ್ಮಿಂಟನ್ನಲ್ಲಿ 3 ಚಿನ್ನ, 1 ಬೆಳ್ಳಿ, 2 ಕಂಚು. ಅಥ್ಲೆಟಿಕ್ಸ್ನಲ್ಲಿ 1 ಚಿನ್ನ, 4 ಬೆಳ್ಳಿ, 3 ಕಂಚು. ಲಾನ್ ಬೌಲ್ಸ್ನಲ್ಲಿ 1 ಚಿನ್ನ, 1 ಬೆಳ್ಳಿ. ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ 1 ಚಿನ್ನ. ಜುಡೋದಲ್ಲಿ 2 ಬೆಳ್ಳಿ, 1 ಕಂಚು. ವೈಟ್ಲಿಫ್ಟಿಂಗ್ನಲ್ಲಿ 3 ಚಿನ್ನ, 3 ಬೆಳ್ಳಿ, 4 ಕಂಚು. ಬಾಕ್ಸಿಂಗ್ನಲ್ಲಿ 3 ಚಿನ್ನ, 1 ಬೆಳ್ಳಿ, 3 ಕಂಚು. ಒಟ್ಟು 61 ಪದಕಗಳು.

Exit mobile version