ಇಂಡಿಯನ್ ಆಯಿಲ್‌ನಿಂದ ಗ್ಯಾಸ್‌ ವಿತರಣೆಗೆ ಬೃಹತ್‌ ಹೂಡಿಕೆ

Indian oil

ನವದೆಹಲಿ ಜ 19 : ಇಂಡಿಯನ್ ಆಯಿಲ್ ಸಂಸ್ಥೆಯೂ ಹೊಸದಾಗಿ ಅನಿಲ ವಿತರಣೆಯ ಯೋಜನೆಗಾಗಿ ಭಾರಿ ಮೊತ್ತದ ಹೂಡಿಕೆಯನ್ನು ಮಾಡಲು ಮುಂದಾಗಿರುವ ಸುದ್ದಿಯನ್ನು ಹೊರಬಿಟ್ಟಿದೆ. ಸದ್ಯ ಭಾರತದ ಆಯಿಲ್ ಕಾರ್ಪೋರೇಶನ್ ಗುಣ್ಣಮಟ್ಟದ ಪೈಕಿಯಲ್ಲಿ, ಇಂಡಿಯನ್ ಆಯಿಲ್ ಸಂಸ್ಥೆ ಎಲ್ಲರಿಗಿಂತಲೂ ಮೊದಲಿಗಿದೆ ಎಂಬುದು ವಿಶೇಷ. ಇದೇ ಹಾದಿಯಲ್ಲಿ ಸಾಗುತ್ತಿರುವ ಇಂಡಿಯನ್ ಆಯಿಲ್ ಈ ಬಾರಿ ಗ್ಯಾಸ್ ವಿತರಣೆಯ ಹೊಸ ಯೋಜನೆಗಾಗಿ ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿ ವೆಚ್ಚವನ್ನು ಭರಿಸಲಿದೆ ಎಂಬ ಮಾಹಿತಿಯನ್ನು ಜನಸಾಮಾನ್ಯರ ಮುಂದಿಟ್ಟಿದೆ. ಕಮರ್ಷಿಯಲ್ ಮಟ್ಟದಲ್ಲಿಇಲ್ಲದೆ ಹೋದರೂ, ವಾಹನ ಬಳಕೆ, ಮನೆ ಬಳಕೆ ಮತ್ತು ಚಿಕ್ಕ ಕೈಗಾರಿಕಾ ಕಂಪನಿಗಳಿಗೆ ಗ್ಯಾಸ್ ಮಾರಾಟ ಮಾಡಲು 9 ಪರವಾನಿಗಿಗಳನ್ನು ಪಡೆದುಕೊಂಡಿದೆ ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿದೆ.

ಈ ಮುಖೇನ ರಸ್ತೆ ಬದಿ ವ್ಯಾಪರಿಗಳು, ಸಣ್ಣ ಉದ್ಯೋಗ ಮಾಡುವ ಅಂಗಡಿ, ಮುಗ್ಗಟ್ಟು ವ್ಯಾಪಾರಿಗಳು ಸೇರಿದಂತೆ ಹೊಸ ಪ್ರದೇಶಗಳಿಗೆ ಪೈಪ್ ಲೈನ್ ಹಾಗೂ ಮೂಲಸೌಕರ್ಯವನ್ನು ಒದಗಿಸಿಕೊಡಲು ಈ 7 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ವಿಂಗಡಿಸಲಾಗಿದೆ ಎಂದು ತಿಳಿಸಿದೆ. ಈ ಯೋಜನೆಯ ಮುಖ್ಯ ಗುರಿ ಇದಾಗಿದ್ದು, ಕೆಲವು ರಾಜ್ಯಗಳಲ್ಲಿ ಮಾತ್ರವೇ ಈ ಯೋಜನೆ ಸದ್ಯಕ್ಕೆ ಚಾಲ್ತಿಯಲ್ಲಿ ಬರಲಿದೆ ಎಂಬುದನ್ನು ಖಚಿತಪಡಿಸಿದೆ.  ಸದ್ಯ ಇಂಡಿಯನ್ ಆಯಿಲ್ ಕಂಪನಿಯೂ 20 ಸಾವಿರ ಕೋಟಿ ರೂಪಾಯಿ ಅನಿಲ ಮಾರಾಟದ ಯೋಜನೆ ಭಾಗದಲ್ಲಿ ಕೆಲಸ ನಿರ್ವಹಿಸಲಿದೆ ಎಂಬುದನ್ನು ಇಂಡಿಯನ್‌ ಆಯಿಲ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version