Bengaluru : ಅಗ್ಗದ ಸಂಚಾರಗಳಲ್ಲಿ ರೈಲು ಪ್ರಯಾಣ ಕೂಡ ಒಂದು. ಮದ್ಯಮ ವರ್ಗದ ಜನರಿಗಂತೂ (Indian Railway New Rules) ರೈಲು ಪ್ರಯಾಣ ಹೇಳಿ ಮಾಡಿಸಿದಂತದ್ದು. ಬಹಳ
ಆರಾಮದಾಯಕ ಹಾಗೂ ಬಜೆಟ್ ಫ್ರೆಂಡ್ಲಿ ಆಗಿದ್ದರೂ ಕೂಡ ಹಲವಾರು ಜನ ಟಿಕೇಟ್ ಪಡೆಯದೇ ಸಂಚರಿಸುತ್ತಾರೆ. ರೈಲ್ವೇ ಇಲಾಖೆಯ ನಿಯಮಗಳ ಪ್ರಾಕಾರ ಟಿಕೇಟ್ (Ticket) ಪಡೆಯದೇ
ಸಂಚರಿಸುವುದು ಅಕ್ಷಮ್ಯ ಅಪರಾಧ ಒಂದು ವೇಳೆ ಸಿಕ್ಕಿ ಬಿದ್ದರೆ ಜೈಲು ಕೂಡಾ ಸೇರಬಹುದು . ಹಾಗಾಗಿ ಟಿಕೇಟ್ ಇಲ್ಲದೇ ಪ್ರಯಾಣಿಸುವವರಿಗಾಗಿ ಏಪ್ರಿಲ್ (April) 1 ರಿಂದ ಹೊಸ ನಿಯಮವೊಂದು
ಜಾರಿಗೆ ಬರಲಿದ್ದು ಮುಂಬರುವ ದಿನಗಳಲ್ಲಿ ಇದರಿಂದಾಗಿ ಉಚಿತ ಪ್ರಯಾಣ ಮಾಡುವವರು ಸಿಕ್ಕಿ ಬೀಳುತ್ತಾರೆ ಎಂದು ರೈಲ್ವೇ ಇಲಾಖೆ ಹೇಳಿದೆ.
ಭಾರತೀಯ ರೈಲ್ವೇ (Indian Railway) ಪ್ರಯಾಣಿಕರಿಗೆ (General Passenger) ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಈ ಸಾಮಾನ್ಯ ಪ್ರಯಾಣಿಕರೂ ಟಿಕೆಟ್ (General Ticket Booking)
ಪಡೆಯುವಾಗ ನಗದು ಪಾವತಿ (cash payment) ಜೊತೆಗೆ ಆನ್ಲೈನ್ ಪಾವತಿಯನ್ನೂ (Online payment) ಮಾಡಬಹುದು. ಅಂದರೆ ಯುಪಿಐ ಪೇಮೆಂಟ್ (UPI Payment) ವ್ಯವಸ್ಥೆಯನ್ನು
ಸಹಾ ಕಲ್ಪಿಸಲು (Indian Railway New Rules) ಇಲಾಖೆ ಮುಂದಾಗಿದೆ.
ಭಾರತೀಯ ರೈಲ್ವೆಯಲ್ಲಿ ಎಸಿ ಕೋಚ್, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಟಿಕೆಟ್ ಬುಕ್ಕಿಂಗ್ ಅನ್ನು ಆನ್ಲೈನ್ ಮೂಲಕ ಮಾಡುವ ಅವಕಾಶವಿದೆ. ಸಾಮಾನ್ಯ ಪ್ರಯಾಣಿಕರು (General Ticket Booking)
ಟಿಕೆಟ್ ಅನ್ನು ಕೌಂಟರ್ನಲ್ಲಿ ನಗದು ಹಣ ನೀಡಿ ಪಡೆಯಬೇಕಿತ್ತು. ಮುಂದಿನ ವರ್ಷದಿಂದ ಈ ಸಾಮಾನ್ಯ ಟಿಕೆಟ್ನ ನಿಯಮದಲ್ಲಿ ಕೆಲವು ಬದಲಾವಣೆ ತರಲಾಗುತ್ತದೆ. ಯುಪಿಐ ಪೇಮೆಂಟ್ ಮಾಡಬಹುದು.
ಒಂದುವೇಳೆ ಟಿಕೆಟ್ ಪಡೆಯದೇ ಪ್ರಯಾಣಿಸಿದರೆ ಇಲ್ಲವೇ ಪ್ರಮಾಣಕ್ಕೂ ಮುನ್ನ ಟಿಕೇಟ್ ತರಲು ಮರೆತರೂ ಕೂಡಾ ಡಿಜಿಟಲ್ ಪಾವತಿ (Digital Payment) ಮಾಡುವ ಮೂಲಕ ಜೈಲು ಪಾಲಾಗುವುದನ್ನು
ತಪ್ಪಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ರೈಲ್ವೇಯು ತಪಾಸಣೆ ಸಿಬ್ಬಂದಿಗೆ ಟರ್ಮಿನಲ್ ಯಂತ್ರಗಳನ್ನು ಒದಗಿಸಲಾಗುತ್ತದೆ.ಡಿಜಿಟಲ್ ಪಾವತಿಯ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಇಲಾಖೆ ಈಗ
ಟಿಕೆಟ್ ಕೌಂಟರ್ನಲ್ಲಿ ಕ್ಯೂಆರ್ ಅನ್ನು ಸ್ಥಾಪಿಸಲಿದೆ.
ಇದಲ್ಲದೇ ಪಾರ್ಕಿಂಗ್ ಮತ್ತು ಫುಡ್ ಕೌಂಟರ್ಗಳಲ್ಲಿ ಸಹ ಕ್ಯೂಆರ್ ಕೋಡ್ (QR Code) ಸೌಲಭ್ಯವನ್ನು ಒದಗಿಸಲಿದೆ. ಟಿಕೆಟ್ ಕೌಂಟರ್ನಲ್ಲಿ ಕ್ಯೂಆರ್ ಸೌಲಭ್ಯದೊಂದಿಗೆ, ಪ್ರಯಾಣಿಕರು ಆನ್ಲೈನ್ನಲ್ಲಿ
ಟಿಕೆಟ್ಗಳಿಗೆ ಪಾವತಿಸಲು ಸಾಧ್ಯವಾಗುತ್ತದೆ. ಇದರಿಂದ ನಗದು ಕೊಂಡೊಯ್ಯದ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.ಇದಲ್ಲದೆ, ಪ್ರಯಾಣಿಕರು ಆಹಾರ, ಶೌಚಾಲಯ ಮತ್ತು ನಿಲ್ದಾಣದಲ್ಲಿ ಪಾರ್ಕಿಂಗ್ಗೆ
ಆನ್ಲೈನ್ ಪಾವತಿ ಮಾಡಲು ಸಾಧ್ಯವಾಗುತ್ತದೆ. ಹಾಗೂ ಪಾರ್ಸೆಲ್ ದಂಡವನ್ನು ಆನ್ಲೈನ್ನಲ್ಲಿ (Online) ಸಹ ಸಂಗ್ರಹಿಸಬಹುದಾಗಿದೆ. ಇನ್ನು ಈ ಹೊಸ ಯೋಜನೆ ಏಪ್ರಿಲ್ 1ರಿಂದ ಜಾರಿಯಾಗಲಿದೆ ಎಂದು
ರೈಲ್ವೇ ಇಲಾಖೆ ತಿಳಿಸಿದೆ.