ಇಸ್ರೋದ ನೂತನ ಮುಖ್ಯಸ್ಥರಾಗಿ ಸೋಮನಾಥ್ ನೇಮಕ

indian space research organisation

ನವದೆಹಲಿ ಜ 13 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿ ಪ್ರಸಿದ್ದ ವಿಜ್ಞಾನಿ ಸೋಮನಾಥ್‌ ಅವರು ನೇಮಕವಾಗಲಿದ್ದಾರೆ. ಹಾಲಿ ಮುಖ್ಯಸ್ಥ ಕೆ ಶಿವನ್ ಅವರು ಶುಕ್ರವಾರ ನಿವೃತ್ತರಾಗಲಿದ್ದಾರೆ.

ಪ್ರಸ್ತುತ ಸೋಮನಾಥ್ ಅವರು ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಕೆಟ್ ವಿಜ್ಞಾನದಲ್ಲಿ ನಿಪುಣರಾಗಿ ಇರುವ ಇವರು ಉಡಾವಣ ವಾಹನದ ವಿನ್ಯಾಸ ಮತ್ತು ರಾಕೆಟ್ ಸಮನ್ವಯತೆ ರೂಪಿಸುವಲ್ಲಿ ತಜ್ಞತೆ ಹೊಂದಿದ್ದಾರೆ. ಎರಡು ವರ್ಷಗಳ ಕಾಲ ಲಿಕ್ವಿಡ್ ಪ್ರೋಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ.

ಸೋಮನಾಥ್ ಅವರನ್ನು ಮೂರು ವರ್ಷಗಳ ಅವಧಿಗೆ ಇಸ್ರೋ ಮುಖ್ಯಸ್ಥರನ್ನಾಗಿ ಮತ್ತು ಬಾಹ್ಯಾಕಾಶ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಕೇರಳದ ಎರ್ನಾಕುಲಂನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಇವರು ಕೇರಳ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಐಐಎಸ್‌ಸಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಇವರು ಇಸ್ರೋದಲ್ಲಿ ಕರ್ತವ್ಯವನ್ನು ಆರಂಭಿಸಿದರು.

Exit mobile version