English English Kannada Kannada

ಇನ್ನೋವೇಟಿವ್ ಫಿಲಂಸಿಟಿ ಚಿತ್ರರಂಗಕ್ಕೆ ಅರ್ಪಣೆ!

ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಶೀರ್ ಅವರು, ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರು ಈ ಜಾಗವನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಹಾಗೂ ಅನೇಕ ಗ್ಲೋಬಲ್ ಶಾಲೆಗಳನ್ನು ತೆಗೆದುಕೊಂಡು, ವೇಲ್ಸ್ ರವೀಂದ್ರ ಭಾರತಿ ಶಾಲೆ ಎಂದು ನಾಮಕರಣ ಮಾಡಿರುವುದನ್ನು ಮತ್ತು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯನ್ನು ಚೆನ್ನೈನ ಖ್ಯಾತ ನಿರ್ಮಾಪಕ, ನಟ ಹಾಗೂ ಉದ್ಯಮಿ ವೇಲ್ಸ್ ಗ್ರೂಪ್ ನ ಮುಖ್ಯಸ್ಥ ಡಾ.ಐಸಿರಿ ಕೆ ಗಣೇಶ್ ಖರೀದಿಸಿದ್ದಾರೆ‌.
ಇನ್ನು ಮುಂದೆ ವೇಲ್ಸ್‌ ಇನ್ನೋವೇಟಿವ್ ಫಿಲಂ ಸಿಟಿ ಎಂದು ಕರೆಯಲಾಗುವುದೆಂದು ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿಯ ಮ್ಯಾನೇಜರ್ ಬಶೀರ್ ಅಹ್ಮದ್ ತಿಳಿಸಿದ್ದಾರೆ‌.

ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಶೀರ್ ಅವರು, ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರು ಈ ಜಾಗವನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಹಾಗೂ ಅನೇಕ ಗ್ಲೋಬಲ್ ಶಾಲೆಗಳನ್ನು ತೆಗೆದುಕೊಂಡು, ವೇಲ್ಸ್ ರವೀಂದ್ರ ಭಾರತಿ ಶಾಲೆ ಎಂದು ನಾಮಕರಣ ಮಾಡಿರುವುದನ್ನು ಮತ್ತು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ‘ಮೈ ಮೂವೀ ಬಜಾರ್’ ಹಾಗೂ ‘ಶ್ರೇಯಸ್ಸ್ ಮೀಡಿಯಾ’ ಮುಖ್ಯಸ್ಥ ನವರಸನ್ ಅವರು ನಾನು ಚೆನ್ನೈ ಗೆ ಹೋದಾಗಲೆಲ್ಲಾ ಗಣೇಶ್ ಸರ್ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಅವರು ತಮಿಳಿನಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇನ್ನೋವೇಟಿವ್ ಫಿಲಂ ಸಿಟಿಗೆ ನೂತನ ಕಾಯಕಲ್ಪ ನೀಡಲು ಸಜ್ಜಾಗಿದ್ದಾರೆ.
ಸದ್ಯ ಇನ್ನೋವೇಟಿವ್ ಫಿಲಂ ಸಿಟಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ನೀವು ಈ ಫಿಲಂ ಸಿಟಿಯನ್ನು ಹೊಸರೂಪದಲ್ಲಿ ನೋಡಬಹುದು. ಸದ್ಯದಲ್ಲೇ ಇದರ ಕಾರ್ಯ ಆರಂಭವಾಗಲಿದೆ.
ರೈಲ್ವೇ ನಿಲ್ದಾಣ ಸೇರಿದಂತೆ ಹಲವು ಬಗ್ಗೆಯ ಸೆಟ್ ಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ಮುಂದೆ ಕನ್ನಡ ಸಿನಿಮಾ ಚಿತ್ರೀಕರಣಕ್ಕೆ ಬೇರೆ ಊರಿಗೆ ಹೋಗದೆ, ಅಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಈ ಫಿಲಂ ಸಿಟಿಯಲ್ಲಿ ನೀಡುವ ಉದ್ದೇಶವಿದೆ. ಚಿತ್ರದ ಮುಹೂರ್ತ ಸಮಾರಂಭದ ದಿನ ನಿರ್ಮಾಪಕರಿಂದ ಯಾವುದೇ ಹಣ ಪಡೆಯದೆ ಉಚಿತವಾಗಿ ನೀಡಬೇಕೆಂದು ತೀರ್ಮಾನವಾಗಿದೆ. ನಮ್ಮ ಸಂಸ್ಥೆ ವೇಲ್ಸ್ ಫಿಲ್ಮ್ ಸಿಟಿಯೊಂದಿಗೆ ವರ್ಕಿಂಗ್ ಪಾರ್ಟ್ನರ್ ಆಗಿ ಕಾರ್ಯ ನಿರ್ವಹಿಸಲಿದೆ. ಇನ್ನು ನಮ್ಮ ಮೈ ಮೂವೀ ಬಜಾರ್ ಆಪ್ ಸಿದ್ದವಾಗುತ್ತಿದ್ದು, ಇದು ಸಹ ಚಿತ್ರರಂಗದ ಎಲ್ಲಾ ನಿರ್ಮಾಪಕರಿಗೆ ಅನುಕೂಲವಾಗಿರಲಿದೆ. ಈ ಎಲ್ಲಾ ಕಾರ್ಯಗಳಿಗೂ ನಿಮ್ಮ ಬೆಂಬಲವಿರಲಿ ಎಂದಿದ್ದಾರೆ ನವರಸನ್.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article