ಏಕಕಾಲಕ್ಕೆ 17 ಮೊಮ್ಮಕ್ಕಳಿಗೂ ಮದುವೆ ಮಾಡಿಸಿದ ಅಜ್ಜ

Rajasthan: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಮಾತಿದೆ. ಈಗಿನ ದಿನಮಾನದಲ್ಲಿ ಮದುವೆ ಎಂಬುದು ಬಲು ದುಬಾರಿ ಕಾರ್ಯಕ್ರಮ. ಇದಕ್ಕಾಗಿ ಮನೆಯಲ್ಲಿ ಸಹೋದರರ ವಿವಾಹವನ್ನು (Marriage) ಒಟ್ಟಿಗೆ ಮಾಡಿಸುತ್ತಾರೆ. ಆದರೆ, ಇಲ್ಲೊಬ್ಬ ಅಜ್ಜ ತನ್ನ ಎಲ್ಲ ಮೊಮ್ಮಕ್ಕಳ ವಿವಾಹವನ್ನು ಏಕಕಾಲಕ್ಕೆ ಮಾಡಿ ಮುಗಿಸಿದ್ದಾರೆ. ಅಸಲಿಗೆ ಹಸೆಮಣೆ ಏರಿದ ಜೋಡಿಯ ಸಂಖ್ಯೆಯ ಕೇಳಿದ್ರೆ ಆಶ್ಚರ್ಯ ಪಡ್ತಿರಿ. ಹೌದು ಈ ಅಜ್ಜ ಬರೋಬ್ಬರಿ 17 ಮೊಮ್ಮಕ್ಕಳ ಮದುವೆಯನ್ನು ಒಟ್ಟಾಗಿ ಮಾಡಿದ್ದಾರೆ.

ಅಷ್ಟಕ್ಕೂ ಇದು ಯಾವುದೋ ಸಿನೆಮಾ ಕಥೆಯಲ್ಲ . ನಿಜವಾಗಿಯೂ ಇದು ನಡೆದಿದ್ದು ರಾಜಸ್ಥಾನದ (Rajasthan) ಬಿಕಾನೇರ್​ನಲ್ಲಿ 17 ಜೋಡಿಗಳ ಮದುವೆ ಕಾರ್ಯಕ್ರಮ ನಡೆದಿದೆ. ನೂರಾರು ಬಂಧುಗಳು ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಬಿಕಾನೇರ್ (Bikaner)​ ಜಿಲ್ಲೆಯ ನೋಖಾ ಮಂಡಲದ ಲಾಲ್ಮದೇಸರ್ ಗ್ರಾಮದ ಸುರ್ಜಾರಾಮ್ ಗೋದಾರ್​ ಮೊಮ್ಮಕ್ಕಳ (Grand Children) ಮದುವೆ ಮಾಡಿಸಿ ಎಲ್ಲೆಡೆ ಸುದ್ದಿಯಾಗಿದ್ದಾರೆ ಇಲ್ಲಿನ ಅಜ್ಜ.ಈತ ಆ ಗ್ರಾಮದ ಮುಖ್ಯಸ್ಥ ಕೂಡ ಹೌದು .

ಅವಿಭಕ್ತ ಕುಟುಂಬವಾದ ಸುರ್ಜಾರಾಮ್ (Surjaram) ಅವರು ಕೂಡುಕುಟುಂಬದಲ್ಲಿ ಒಂದೇ ಬಾರಿಗೆ ವಿವಾಹ ಮಾಡಿಸುವ ಯೋಜನೆ ರೂಪಿಸಿದ್ದಾರೆ.ತನ್ನ 17 ಮೊಮ್ಮಕ್ಕಳ ವಿವಾಹವನ್ನು ಒಂದೇ ಬಾರಿಗೆ ಮಾಡಿ ಮುಗಿಸಲು ನಿರ್ಧರಿಸಿದ್ದರು. ಯೋಜಿಸಿದಂತೆ ಎಲ್ಲರ ಮದುವೆಗಾಗಿ ಒಂದೇ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿ ಬಳಿಕ ಬಂಧುಗಳಿಗೆ ಅದನ್ನು ನೀಡಿ ,ಏಪ್ರಿಲ್ (April) 1 ಐವರು ಮೊಮ್ಮಕ್ಕಳ ಮದುವೆ ಮಾಡಿಸಿದ್ದಾರೆ. ಮರುದಿನ ಏಪ್ರಿಲ್​ 2 ರಂದು ಉಳಿದ 12 ಮೊಮ್ಮಕ್ಕಳ ವಿವಾಹ ಕಾರ್ಯಕ್ರಮ ಮುಗಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ಗಮನ ಸೆಳೆದಿದೆ. ಒಂದೇ ಮನೆಯಲ್ಲಿ ಸಾಮೂಹಿಕ ವಿವಾಹ ನಡೆಯುತ್ತಿರುವುದು ಇದೇ ಭಾಗದಲ್ಲಿ ಇದೇ ಮೊದಲು ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

Exit mobile version