IPL 2020: ಡ್ರೀಮ್ 11 ಪಾಲಾದ ಟೈಟಲ್ ಪ್ರಾಯೋಜಕತ್ವ

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸಕ್ತ ಸಾಲಿನ ಟೈಟಲ್ ಪ್ರಾಯೋಜಕತ್ವದ ಹಕ್ಕು ಡ್ರೀಮ್ ಇಲೆವೆನ್ ಪಾಲಾಗಿದೆ. ಬರೋಬ್ಬರಿ 222 ಕೋಟಿಗೆ ಪ್ರಾಯೋಜಿಕತ್ವದ ಹಕ್ಕು ಸೇಲ್ ಆಗಿದೆ.

2018 ರಿಂದಲೂ ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು ವಿವೋ ಸಂಸ್ಥೆ ವಹಿಸಿಕೊಂಡಿತ್ತು. ಆದರೆ ಭಾರತ-ಚೀನಾ ನಡುವಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಐಪಿಎಲ್ ಪ್ರಾಯೋಜಕತ್ವವನ್ನು ಕೈಬಿಟ್ಟು ಸ್ವಯಂ ವಿವೋ ಸಂಸ್ಥೆ ಹಿಂದೆ ಸರಿದಿತ್ತು.


ಈ ಹಿನ್ನೆಲೆಯಲ್ಲಿ ಐಪಿಎಲ್ ಸ್ಪಾನ್ಸರ್ಶಿಪ್ಗಾಗಿ ಪತಂಜಲಿ, ಜಿಯೋ, ಅಮೇಜಾನ್, ಟಾಟಾ ಗ್ರೂಪ್, ಡ್ರೀಮ್ 11 ಹಾಗೂ ಬೈಜುಸ್ ಕಂಪೆನಿಗಳ ನಡುವೆ ಪೈಪೋಟಿ ನಡೆದಿತ್ತು. ಆದರೆ ಅಂತಿಮವಾಗಿ 222 ಕೋಟಿ ರೂಪಾಯಿಗೆ ಡ್ರೀಮ್ 11 ಐಪಿಎಲ್ 13ನೇ ಆವೃತ್ತಿಯ ಪ್ರಾಯೋಜಕತ್ವ ಪಡೆದಿದೆ ಎಂದು ಐಪಿಎಲ್‍ ಚೇರ್ಮನ್‍ ಬ್ರಿಜೇಶ್‍ ಪಟೇಲ್ ತಿಳಿಸಿದ್ದಾರೆ.

Exit mobile version