ಐಪಿಎಲ್ 2021: ಆರ್.ಸಿ.ಬಿ ಆರಂಭಿಕ ಬ್ಯಾಟ್ಸಮನ್ ದೇವದತ್ ಪಡಿಕ್ಕಲ್ ಗೆ ಕೊರೊನಾ ಸೋಂಕು

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಐಪಿಎಲ್ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿಯಿದ್ದು, ಎಲ್ಲಾ ತಂಡಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ.‌ ಈ ನಡುವೆ RCB ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗೆ ಕೊರೊನಾ ಸೋಂಕು ದೃಢವಾಗಿದೆ.

ಸದ್ಯ ದೇವದತ್ ಪಡಿಕ್ಕಲ್ ಹೊಟೇಲ್ ನಲ್ಲೇ ಐಸೋಲೇಷನ್ ಆಗಿದ್ದಾರೆ. ಏಪ್ರಿಲ್ 9 ರಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯ ಆರ್ ಸಿಬಿ ಮತ್ತು ಮುಂಬೈ ನಡುವೆ ನಡೆಯಲಿದೆ. ಆದರೆ ಉದ್ಘಟನಾ ಪಂದ್ಯಕ್ಕೆ ದೇವದತ್ ಪಡಿಕಲ್ ಆರ್ ಸಿಬಿ ತಂಡಕ್ಕೆ ಅಲಭ್ಯವಾಗಲಿದ್ದಾರೆ.

ಕಳೆದ ಸೀಸನ್‌ನಲ್ಲಿ ಐಪಿಎಲ್ ಟೂರ್ನಿಗೆ ಎಂಟ್ರಿ ಪಡೆದಿದ್ದ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೇ ಬೆಂಗಳೂರು ತಂಡದ ಪರ‌ ಅತ್ಯಧಿಕ ರನ್‌ಗಳಿಸಿದ ಹೆಗ್ಗಳಿಕೆ ಪಡೆದಿದ್ದ ಪಡಿಕ್ಕಲ್ ಈ ಬಾರಿ ಸಹ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸುವ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಕೊರೊನಾ ಸೋಂಕಿಗೆ ತುತ್ತಾಗಿರುವ ಪರಿಣಾಮ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಪಡಿಕ್ಕಲ್ ಅಲಭ್ಯರಾಗಲಿದ್ದಾರೆ. ಇದು ತಂಡದ ಇತರೆ ಆಟಗಾರರು ಸೇರಿದಂತೆ ಆರ್ಸಿಬಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು, ದೇವದತ್ ಪಡಿಕ್ಕಲ್ ಶೀಘ್ರವೇ ಗುಣಮುಖರಾಗಲಿದೆ ಎಂದು ಕೋಟ್ಯಾಂತರ ಅಭಿಮಾನಿಗಳು ಹಾರೈಸಿದ್ದಾರೆ.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ ಆಟಗಾರ ಅಕ್ಷರ್ ಪಟೇಲ್ ಗೂ ಕೂಡ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅವರು ಸಹ ಐಸೋಲೇಷನ್ ನಲ್ಲಿದ್ದಾರೆ.

Exit mobile version