IPL 2024: ಟ್ರೋಫಿ ಗೆದ್ದವ್ರಿಗೆ ಸಿಕ್ಕಿದ್ದೆಷ್ಟು? ಟಾಫ್ ಆಟಗಾರರಿಗೆ ಸಿಕ್ಕ ಹಣವೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Chennai: ತೀವ್ರ ಕುತೂಹಲ ಕೆರಳಿದ್ದ ಐಪಿಎಲ್ 2024 ಕ್ರಿಕೆಟ್ ಟೂರ್ನಿಗೆ ನಿನ್ನೆ ಅಂತಿಮ ತೆರೆಬಿದ್ದಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ (Kolkata Knight Riders Champion) ತಂಡವಾಗಿ ಹೊರಹೊಮ್ಮಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ (Sunrises Hyderbad) ತಂಡವನ್ನು ವಿರುದ್ದ ಶ್ರೇಯಸ್ ಅಯ್ಯರ್ ನೇತೃತ್ವ ಕೆಕೆಆರ್ ಭರ್ಜರಿ ಗೆಲುವು ಸಾಧಿಸಿದೆ.

IPL 2024

ಇನ್ನು ವಿಜೇತ ತಂಡಕ್ಕೆ 20 ಕೋಟಿ ರೂಪಾಯಿ ಹಾಗೂ ರನ್ನರ್ ಅಪ್ ಸನ್ರೈಸರ್ಸ್ ಹೈದ್ರಾಬಾದ್ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ (Emerging Player Of The Season) ಮುಂತಾದ ಹಲವು ಪ್ರಶಸ್ತಿಗಳಿಗೆ ಭರ್ಜರಿ ನಗದು ಬಹುಮಾನ ಘೋಷಿಸಲಾಗಿದೆ.

ಸ್ಟಾರ್ ಆಲ್ರೌಂಡರ್ ನಿತೀಶ್ ರೆಡ್ಡಿಗೆ (Nithish Reddy) ಉದಯೋನ್ಮುಖ ಆಟಗಾರನೆಂದು, ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ್ದಕ್ಕಾಗಿ ಅಭಿಷೇಕ್ ಶರ್ಮಾ ಅವರನ್ನು ಸೂಪರ್ ಸಿಕ್ಸರ್ ಆಟಗಾರನೆಂದು, ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಡೆಲ್ಲಿ ಕ್ಯಾಪಿಟಲ್ಸ್ನ ಜೇಕ್ ಫ್ರೇಸರ್ ಮೆಕ್ಗರ್ಕ್ಗೆ, ಇನ್ನು ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿ (Orange Cap Virat Kohli) ಮತ್ತು ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಎಲ್ಲ ಆಟಗಾರರಿಗೂ 10 ಲಕ್ಷ ರೂ.ಗಳನ್ನು ನೀಡಲಾಗಿದೆ.

IPL 2024 ಪ್ರಶಸ್ತಿಗಳ ಸಂಪೂರ್ಣ ಪಟ್ಟಿ
• ಕೋಲ್ಕತ್ತಾ ನೈಟ್ ರೈಡರ್ಸ್ (ಚಾಂಪಿಯನ್ಸ್) – 20 ಕೋಟಿ
• ಸನ್ ರೈಸರ್ಸ್ ಹೈದರಾಬಾದ್ (ರನ್ನರ್ ಅಪ್) – 12.5 ಕೋಟಿ
• ಹರ್ಷಲ್ ಪಟೇಲ್ (24 ವಿಕೆಟ್)- 10 ಲಕ್ಷ ರೂ. ಮತ್ತು ಪರ್ಪಲ್ ಕ್ಯಾಪ್
• ವಿರಾಟ್ ಕೊಹ್ಲಿ (741 ರನ್) – 10 ಲಕ್ಷ ರೂ. ಮತ್ತು ಆರೆಂಜ್ ಕ್ಯಾಪ್

• ಸುನಿಲ್ ನಾರಾಯಣ್ (Sunil Narayan) (ಅತ್ಯಂತ ಮೌಲ್ಯಯುತ ಆಟಗಾರ)- 10 ಲಕ್ಷ
• ರಮಣದೀಪ್ ಸಿಂಗ್ (ಪರಿಪೂರ್ಣ ಕ್ಯಾಚ್)- 10 ಲಕ್ಷ
• ನಿತೀಶ್ ರೆಡ್ಡಿ (Nithish Reddy) (ಉದಯೋನ್ಮುಖ ಆಟಗಾರ)- 10 ಲಕ್ಷ
• ಸನ್ರೈಸರ್ಸ್ ಹೈದರಾಬಾದ್ ( ಫೇರ್ಪ್ಲೇ ಪ್ರಶಸ್ತಿ) – 10 ಲಕ್ಷ

• ವೆಂಕಟೇಶ್ ಅಯ್ಯರ್ (ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಸೀಸನ್)- 10 ಲಕ್ಷ
• ಹರ್ಷಲ್ ಪಟೇಲ್ (Dream11 ಗೇಮ್ ಚೇಂಜರ್ ಆಫ್ ದಿ ಸೀಸನ್)- 10 ಲಕ್ಷ
• ಅಭಿಷೇಕ್ ಶರ್ಮಾ (ಸೀಸನ್ನ ಸೂಪರ್ ಸಿಕ್ಸರ್)- 10 ಲಕ್ಷ

• ಜೇಕ್ ಫ್ರೇಸರ್ ಮೆಕ್ಗರ್ಕ್ (ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್)- 10 ಲಕ್ಷ
• ಪಿಚ್ ಮತ್ತು ಗ್ರೌಂಡ್ ಅವಾರ್ಡ್ – ರಾಜೀವ್ ಗಾಂಧಿ ಸ್ಟೇಡಿಯಂ ಹೈದರಾಬಾದ್- 50 ಲಕ್ಷ

Exit mobile version