ದೇಶದಾದ್ಯಂತ ಬಹುನಿರೀಕ್ಷಿತ ಐಕ್ಯೂ 12 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟಿರಬಹುದು?

ಬಹುನಿರೀಕ್ಷಿತ ಸ್ಮಾರ್ಟ್​ಫೋನ್ (Smartphone) ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಬಿಡುಗಡೆಗು ಮೊದಲು ಐಕ್ಯೂ ಕಂಪನಿ (IQOO12 5G Phone Launch-India) ಐಕ್ಯೂ 12 ಅನ್ನು

ಪ್ರಿ-ಬುಕಿಂಗ್ ಆರ್ಡರ್‌ (Free Booking Order) ಪ್ರಾರಂಭಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದು, ಕಳೆದ ತಿಂಗಳು ಚೀನಾದಲ್ಲಿ ಐಕ್ಯೂ 12 ಪ್ರೊ ಜೊತೆಗೆ ಐಕ್ಯೂ 12 (IQ 12) ಅನ್ನು

ಪರಿಚಯಿಸಲಾಗಿತ್ತು.

ಐಕ್ಯೂ 12 5G ಸ್ಮಾರ್ಟ್​ಫೋನ್ 6.78-ಇಂಚಿನ 1.5K LTPO OLED ಡಿಸ್ ಪ್ಲೇಯೊಂದಿಗೆ ಬರುತ್ತದೆ, ಇದು ಹೆಚ್ಚಿನ 144Hz ರಿಫ್ರೆಶ್ ದರ ಮತ್ತು 3000 nits ನ ಗರಿಷ್ಠ ಬ್ರೈಟ್​ನೆಸ್ ಹೊಂದಿದೆ.

ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 SoC ನಿಂದ ಚಾಲಿತವಾಗಿದೆ, ಇದು ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಆಗಿದೆ.

ಕ್ಯಾಮೆರಾ (Camera) ವಿಭಾಗದಲ್ಲಿ, ಐಕ್ಯೂ 12 5G OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 64MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು

3x ಆಪ್ಟಿಕಲ್ ಜೂಮ್ ಮತ್ತು 100x ಡಿಜಿಟಲ್ ಜೂಮ್ ಹೊಂದಿದೆ. ಸೆಲ್ಫಿಗಾಗಿ, ಐಕ್ಯೂ 12 5G 16MP ಮುಂಭಾಗದ (IQOO12 5G Phone Launch-India) ಕ್ಯಾಮೆರಾವನ್ನು ಹೊಂದಿದೆ.

ಇದು ಕಸ್ಟಮೈಸ್ ಮಾಡಿದ OriginOS 4.0 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗುತ್ತದೆ. ಈ ಫೋನ್ 16GB RAM ಮತ್ತು 1TB ಸಂಗ್ರಹಣೆಯೊಂದಿಗೆ ಸಾಕಷ್ಟು ಶೇಖರಣಾ ಆಯ್ಕೆಗಳನ್ನು

ನೀಡುತ್ತದೆ. ಐಕ್ಯೂ 12 5G 120W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

ಇತ್ತೀಚಿನ ವರದಿಯ ಪ್ರಕಾರ ಮುಂಬರುವ ಐಕ್ಯೂ 12 5G ಭಾರತದಲ್ಲಿ ರೂ. 60,000ಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆಯಂತೆ. ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದ್ದು,

ಐಕ್ಯೂ 12 5G ಸ್ಮಾರ್ಟ್​ಫೋನ್​ನ ನಿಖರವಾದ ಬೆಲೆ ತಿಳಿದಿಲ್ಲ. ಆದಾಗ್ಯೂ, 256GB ಸಂಗ್ರಹಣೆಯೊಂದಿಗೆ 12GB RAM ಮತ್ತು 512GB ಸಂಗ್ರಹಣೆಯೊಂದಿಗೆ 16GB RAM ನೊಂದಿಗೆ ಬರುತ್ತದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸುವ ಹುಕ್ಕಾ‌ ಬಾರ್‌ಗಳಿಗೆ ಕ್ರಮ ಗ್ಯಾರಂಟಿ: ಡಾ ಜಿ ಪರಮೇಶ್ವರ ಎಚ್ಚರಿಕೆ

ಭವ್ಯಶ್ರೀ ಆರ್ ಜೆ

Exit mobile version