ರಾಕೆಟ್ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್​ಗೆ ಇದೆ: ಅಮೆರಿಕ ಅಧ್ಯಕ್ಷ ಜೊ ಬೈಡನ್

ವಾಷಿಂಗ್ಟನ್, ಮೇ. 13: ಹಮಾಸ್ ಆಡಳಿತದ ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಪ್ಯಾಲೆಸ್ತೀನ್ ರಾಕೆಟ್ ಪಡೆಗಳ ನಡುವೆ ತೀವ್ರ ಘರ್ಷಣೆಯು 2014 ರ ಯುದ್ಧದ ನಂತರ ಈ ಪ್ರದೇಶವನ್ನು ಸೆಳೆದುಕೊಳ್ಳುವ ಅತ್ಯಂತ ಗಂಭೀರವಾದ ಹೋರಾಟವಾಗಿದೆ. ಇದು ಶೀಘ್ರದಲ್ಲೇ ಮುಗಿಯಲಿದೆ ಎಂಬುದು ನನ್ನ ನಿರೀಕ್ಷೆ ಮತ್ತು ಭರವಸೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆದರೆ ತಮ್ಮ ಪ್ರದೇಶಕ್ಕೆ ಸಾವಿರಾರು ರಾಕೆಟ್‌ಗಳು ಹಾರಿದಾಗ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದಿದ್ದಾರೆ ಬೈಡನ್.

ಅಮೆರಿಕ ಈ ಪ್ರದೇಶಕ್ಕೆ ರಾಯಭಾರಿಯನ್ನು ಕಳುಹಿಸಿದೆ. ಇಸ್ರೇಲ್​ನ ವಾಯುದಾಳಿಗಳು ಮತ್ತು ಪ್ಯಾಲೇಸ್ತೀನಿಯನ್ ರಾಕೆಟ್ ದಾಳಿಯಿಂದಾಗಿ ಸಾವಿನ ಸಂಖ್ಯೆ ಏರಿದ್ದು ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಗೆ ಸಹಾಯ ಮಾಡಬೇಕು ಎಂದು ಕೋರಿದ್ದವು. ಸೋಮವಾರ ತಡರಾತ್ರಿ ಹಿಂಸಾಚಾರ ಹಠಾತ್ತನೆ ಸ್ಫೋಟಗೊಂಡಾಗಿನಿಂದ ಗಾಜಾದಲ್ಲಿ 60 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯಾದ ಜನರು ಮತ್ತು ಇಸ್ರೇಲ್‌ನಲ್ಲಿ ಕನಿಷ್ಠ ಆರು ಜನರು ಸಾವಿಗೀಡಾಗಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ಮಹತ್ವದ ತಿರುವು ತರುವಲ್ಲಿ ಈಜಿಪ್ಟಿನ ಪ್ರಯತ್ನಗಳು ವಿಫಲವಾಗಿವೆ ಎಂದು ಹಲವಾರು ಇಸ್ರೇಲಿ ಮತ್ತು ಅರಬ್ ಮಾಧ್ಯಮಗಳು ವರದಿ ಮಾಡಿವೆ.

Exit mobile version