ನಿನ್ನ ಪ್ರೀತಿಯ ನೆನಪು ನನ್ನ ಕೊನೆ ಉಸಿರಿನವರೆಗೂ ನನ್ನ ಮಾನಸದಲ್ಲಿ ; ಜಗ್ಗೇಶ್

Bengaluru : ಪುನೀತ್ ರಾಜಕುಮಾರ್(Puneeth Rajkumar) ಅವರ ಕುರಿತು ನಟ ಜಗ್ಗೇಶ್(Jaggesh Emotional Note) ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಅತ್ಯಂತ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ನೋಡಿ.

“ಬದುಕಲ್ಲಿ ನೂರಾರು ಮಂದಿ ಸಿಗುತ್ತಾರೆ , ಆದರೆ ಎಲ್ಲರೂ ಆತ್ಮೀಯರಾಗುವುದಿಲ್ಲ.. ನೂರಾರು ಮಂದಿಯಲ್ಲಿ ಕೆಲವರು ಮಾತ್ರ ಹೃದಯಕ್ಕೆ ಹತ್ತಿರವಾಗುತ್ತಾರೆ.. ಹತ್ತಿರವಾದ ಕೆಲ ಆತ್ಮೀಯರಷ್ಟೇ ಹೃದಯದಲ್ಲಿ ಉಳಿಯುತ್ತಾರೆ.

ನನ್ನ ಹೃದಯದಲ್ಲಿ ನನ್ನ ತಂದೆ-ತಾಯಿ, ಹೆಂಡತಿ, ಮಕ್ಕಳು, ಅಕ್ಕಂದಿರು, ತಮ್ಮಂದಿರು ಹಾಗು ಇತ್ತೀಚಿನ ವರ್ಷದಲ್ಲಿ ಮೊಮ್ಮಗ ಅರ್ಜುನ ಬಿಟ್ಟರೆ ರಾಜಣ್ಣ,

ಪುನೀತ ನನ್ನ ಅತ್ಯಂತ ಆತ್ಮೀಯರಾಗಿದ್ದರು. ರಾಜಣ್ಣ ಹೋದಾಗ ನನ್ನ ತಂದೆ ಹೋದಂತೆ ದುಃಖಿಸಿದೆ. ಪುನೀತ ಹೋದ ಮೇಲೆ ನನ್ನಲ್ಲಿದ್ದ ಆಶಾಭಾವವೆ ಕೊನೆಯಾಯಿತು.

ಬದುಕು ನಶ್ವರ ಅನ್ನಿಸಿತು. ಎಲ್ಲಾ ಬಿಟ್ಟು ಹೋಗಬೇಕು ಎಂದು ನಿಶ್ಚಯವಾಯಿತು.. ನನ್ನ ಬದುಕಿಗೆ ಪುನೀತ(Jaggesh Emotional Note) ಬದಲಾವಣೆಯ ಮಾರ್ಗದರ್ಶನದ ಬೆಳಕಾದ.. ನನ್ನಲ್ಲಿದ್ದ ಕೋಪ, ಆವೇಶ ನಿರ್ನಾಮವಾಯಿತು.. ಒಟ್ಟಿನಲ್ಲಿ ಪುನೀತ ನನಗೆ ಗುರುವಾದ.

https://fb.watch/gjmTfwGQy2/

ಅಮೇರಿಕದಿಂದ ಹಿಂದಿರುಗುವ ಟಿಕೆಟ್ಟು ಸಿಗದೆ ಆತನ ಕೊನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲವೆಂದು ವಿಪರೀತ ದುಃಖವಾಯಿತು.

ಅಪ್ಪನ ಹೆಸರಿನ ಗಂಧದಗುಡಿ(Gandadagudi) ಚಿತ್ರ ಮತ್ತೊಮ್ಮೆ ಪುನೀತನಿಂದ ಕೊನೆಯ ಚಿತ್ರವಾಗಿ ಹೊರಬರುತ್ತಿದೆ.

ಆ ಚಿತ್ರಕ್ಕೆ ನನ್ನ ಹೃದಯಪೂರ್ವಕ ಶುಭಕಾಮನೆಗಳು.. ಎಲ್ಲರೂ ಒಂದು ದಿನ ಕಡ್ಡಾಯ ನಿರ್ಗಮಿಸಲೇಬೇಕು.. ಆದರೆ ಕೆಲವರು ಮಾತ್ರ ನಿರ್ಗಮಿಸಿದ ಮೇಲೆಯೂ ಉಳಿಯುತ್ತಾರೆ.

ಆ ಕೆಲವರಲ್ಲಿ ಪುನೀತ ನಮ್ಮಗಳಿಗೆ ದೇವರಾದ. ನಿನ್ನ ಪ್ರೀತಿಯ ನೆನಪು ನನ್ನ ಕೊನೆ ಉಸಿರಿನವರೆಗೂ ನನ್ನ ಮಾನಸದಲ್ಲಿ..

ತಮ್ಮ ಇನ್ನೊಂದು ಬರಹದಲ್ಲಿ ಪತ್ನಿ ಪರಿಮಳಾ ಅವರ ಸಾಹಸದ ವಿಡಿಯೋವನ್ನು ಹಂಚಿಕೊಂಡು, “ಮಡದಿ ಪರಿಮಳ 2,350 ಉದ್ದ 1,200 ಅಡಿ ಎತ್ತರದಲ್ಲಿ ಸಾಹಸ ನೋಡಿ ನಾನೆ ಮೂಕವಿಸ್ಮಿತ… ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲಾ.

ಗಂಡಿನಂತೆ ಹೆಣ್ಣು ಸಾಧಕಳಾಗಬೇಕು.

ಇದನ್ನೂ ಓದಿ : https://vijayatimes.com/owaisi-about-ind-pak-match/

ನಾನು ಲೌಕಿಕವಾಗಿ ಗಂಡನಾದರು ಮಾನಸಿಕವಾಗಿ ಅವಳಿಗೆ ತಂದೆಯಂತೆ. ಮನುಷ್ಯ ಭೂಮಿಗೆ ಮತ್ತೆ ಬರುತ್ತಾನೋ ಇಲ್ಲವೋ ಬಲ್ಲವರಾರು? ಇದ್ದಾಗ ವಿಶ್ವ ಸುತ್ತಿ ಕೋಶ ಓದಿ ಸಾಧಿಸಿ ಮಗುವಂತೆ ಬಾಳಿ ಪ್ರೀತಿ ಗಳಿಸಿ,

ಪ್ರೀತಿ ಹಂಚಿ ಹೋಗಬೇಕು.. ವಯಸ್ಸು ಲೆಕ್ಕಾಚಾರಕ್ಕೆ ಇರಲಿ ಸಾಧನೆ ಕೊನೆವರೆಗು ಇರಲಿ….” ಎಂದು ಬರೆದುಕೊಂಡಿದ್ದಾರೆ.

Exit mobile version