ಅವಹೇಳನಕಾರಿ ಹೇಳಿಕೆ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ಗೆ 2 ವರ್ಷ ಜೈಲು ಶಿಕ್ಷೆ

New Delhi: ಖ್ಯಾತ ಸಾಮಾಜಿಕ ಕಾರ್ಯಕರ್ತೆ ಹಾಗೂ ನರ್ಮದಾ ಬಚಾವೋ (Narmada Bachavo) ಆಂದೋಲನದ ರೂವಾರಿ ಮೇಧಾ ಪಾಟ್ಕರ್ ಅವರಿಗೆ ದೆಹಲಿಯ ನ್ಯಾಯಾಲಯ ಮಾನನಷ್ಟ ಮೊಕದ್ದಮೆ ಪ್ರಕರಣವೊಂದರಲ್ಲಿ ದೋಷಿ ಎಂದು ತೀರ್ಪು ನೀಡಿದ್ದು, ಎರಡು ವರ್ಷಗಳ ಜೈಲು (Jail) ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ (Delhi Lieutenant Governor) ವಿಕೆ ಸಕ್ಸೇನಾ ಅವರ ವಿರುದ್ದ ಮೇಧಾ ಪಾಟ್ಕರ್ ಅವರು ಈ ಹಿಂದೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಗುಜರಾತ್ ಮೂಲದ ಸರ್ಕಾರೇತರ ಸಂಸ್ಥೆ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್ ಮುಖ್ಯಸ್ಥರಾಗಿದ್ದ ವೇಳೆ ವಿ.ಕೆ ಸಕ್ಸೆನಾ ಅವರು ನರ್ಮದಾ ಬಚಾವೋ ಆಂದೋಲನ ವಿರುದ್ಧ ಅನೇಕ ಜಾಹೀರಾತುಗಳನ್ನು ಪ್ರಕಟಿಸಿದ್ದರು. ಇದನ್ನು ತೀವ್ರವಾಗಿ ವಿರೋಧಿಸಿದ್ದ ಮೇಧಾ ಪಾಟ್ಕರ್ ಅವರು, ಮಾಧ್ಯಮಗಳಲ್ಲಿ ವಿಕೆ ಸಕ್ಸೇನಾ ವಿರುದ್ದ ಟೀಕೆಗಳನ್ನು ಮಾಡಿದ್ದರು. ಮೇಧಾ ಪಾಟ್ಕರ್ (Medha Patkar) ಅವರು ಹೇಳಿಕೆಗಳ ವಿರುದ್ದ ವಿಕೆ ಸಕ್ಸೆನಾ ಮಾನನಷ್ಟ ಪ್ರಕರಣ ಹೂಡಿದ್ದರು. ವಿಕೆ ಸಕ್ಸೇನಾ ಮತ್ತು ಮೇಧಾ ಪಾಟ್ಕರ್ 2000ನೇ ಇಸ್ವಿಯಿಂದ ಕಾನೂನು ಸಮರ ನಡೆಸುತ್ತಿದ್ದರು.

ಈ ಕುರಿತು ಸುದಿರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ತೀರ್ಪು ನೀಡಿದ್ದು, ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ಘೋಷಿಸಿದೆ. ದೆಹಲಿಯ ಸಾಕೇತ್ ನ್ಯಾಯಾಲಯ ಈ ಆದೇಶ ಪ್ರಕಟಿಸಿದ್ದು, ಆದೇಶದಿಂದಾಗಿ ಎರಡು ವರ್ಷ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ಶಿಕ್ಷೆಯಾಗಿ ವಿಧಿಸುವ ಸಾಧ್ಯತೆಯಿದೆ.

Exit mobile version