ಮುನಿ ಮರ್ಡರ್‌ ಸೀಕ್ರೆಟ್ : ಜೈನ ಮುನಿ ಹಂತಕರಿಗೆದೆಯಾ ಉಗ್ರರ ನಂಟು? 6 ಲಕ್ಷ ಸಾಲವೇ ಸಾವಿಗೆ ಕಾರಣನಾ?

ಜೈನ ಮುನಿ ಹಂತಕರಿಗೆದೆಯಾ ಉಗ್ರರ ನಂಟು? ಬೆಳಗಾವಿಯ ಚಿಕ್ಕೋಡಿಯ ನಂದಿ ಆಶ್ರಮದ ಕಾಮ ಕುಮಾರ ಜೈನ ಮುನಿಯ (jain muni murder secret) ಕೊಲೆ ಬಗ್ಗೆ ಇಂಥಾ ಒಂದು ಗಂಭೀರ ಆರೋಪ

ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣಗಳೇನು? ಮುನಿ ಮರ್ಡರ್‌ ಹಿಂದೆ ನಿಜವಾಗ್ಲೂ ಉಗ್ರರ ಕೈವಾಡ ಇದೆಯಾ? ಅಥವಾ ಈ ಕೊಲೆ 6 ಲಕ್ಷ ಸಾಲದ ವಿಚಾರವಾಗಿ ನಡೆಯಿತಾ? ಜೈನ ಮುನಿಗೆ ಶಾಕ್ ಕೊಟ್ಟು,

ತುಂಡರಿಸಿದ್ದು ಒಬ್ಬನಲ್ಲ ಇನ್ನೂ ಅನೇಕರಿದ್ದಾರೆಯಾ? ಈ ಎಲ್ಲಾ ಪ್ರಶ್ನೆಗಳು ಒಂದು ಕರುನಾಡಿನ ಜನತೆಯನ್ನು ಕಾಡುತ್ತಿದೆ. ಹಾಗಾದ್ರೆ ಬನ್ನಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ.

ವಿದ್ಯುತ್‌ ಹರಿಸಿ ಮುನಿಯ ಮರ್ಡರ್‌?


ಹೌದು ಬೆಳಗಾವಿಯ ಚಿಕ್ಕೋಡಿಯ (Chikkodi) ನಂದಿ ಆಶ್ರಮದ ಕಾಮ ಕುಮಾರ ಜೈನ ಮುನಿಯ ಕೊಲೆಗೆ ದೇಶವೇ ಬೆಚ್ಚಿಬಿದ್ದಿದೆ. ಜುಲೈ ೫ ರ ಬೆಳಗಿನ ಜಾವ ಕಣ್ಮರೆಯಾಗಿದ್ದ ಜೈನ ಮುನಿಯವರನ್ನ ವಿದ್ಯುತ್ ತಂತಿಯ

ಮೂಲಕ ಶಾಕ್‌ ಕೊಟ್ಟು ಕೊಲ್ಲಲಾಯಿತು. ಕೊಂದ ನಂತರ ಅವರ ದೇಹವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಯೊಳಗೆ (jain muni murder secret) ತುಂಬಲಾಗಿತ್ತು.


ದೇಹ ಹುಡುಕಿದ್ದವನೇ ಸಿಕ್ಕಿ ಬಿದ್ದ !


ಮೃತ ದೇಹಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಈ ಶೋಧ ಕಾರ್ಯಾದಲ್ಲಿ ಭಾಗಿ ಯಾಗಿದ್ದ ವ್ಯಕ್ತಿಯೊಬ್ಬನ ಚಲನ ವಲನ ಅನುಮಾನದಾಯಕವಾಗಿತ್ತು. ಆತನ ಮೇಲೆ ಸಂದೇಹ ಬಂದು ಪೊಲೀಸರು

ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯ ಹೊರಬಿತ್ತು. ಈ ಆರೋಪಿಗಳು ಮೃತ ದೇಹ ಅವಿತಿಟ್ಟ ಸ್ಥಳದ ಬಗ್ಗೆ ಮಾಹಿತಿ ನೀಡಿದ್ರು. ಆರೋಪಿಗಳು ಜೈನ ಮುನಿಯ ದೇಹವನ್ನು ಆಶ್ರಮದ ಪಕ್ಕದ

ಇದನ್ನು ಓದಿ: ಆಶಾ ಕಾರ್ಯಕರ್ತೆಯರ ವೇತನ 8 ಸಾವಿರ ಹೆಚ್ಚಿಸ್ತೇವೆ ಎಂದು ಘೋಷಣೆ ಮಾಡಿದ್ರು ಪ್ರಿಯಾಂಕಾ ಗಾಂಧಿ ; ಆದ್ರೆ ಈಗ ಏನಾಯ್ತು..?!

ಗದ್ದೆಯಲ್ಲಿದ್ದ ಕೊಳವೆ ಭಾವಿಯಲ್ಲಿ ತುಂಬಿಸಿಟ್ಟಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ನಾರಾಯಣ ಮಾಳಿ, ಚಿಕ್ಕೋಡಿಯ

ಹಸನ್‌ ಡಲಾಯತ್‌ ಎಂದು ಗುರುತಿಸಲಾಗಿದೆ.


6 ಲಕ್ಷ ಸಾಲವೇ ಕಾರಣವಾಯ್ತಾ?


ಬೆಳಗಾವಿ ಜಿಲ್ಲೆಯ ನಂದಿಪರ್ವತ ಆಶ್ರಮದಲ್ಲಿ ಜುಲೈ 5ರ ರಾತ್ರಿ ಇದ್ದ ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು, ಮಾರನೇ ದಿನ ಜುಲೈ 6 ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು.

ಸುಮಾರು 15 ವರ್ಷಗಳಿಂದ ಆಶ್ರಮದಲ್ಲಿ ವಾಸವಿದ್ದ ಜೈನ ಮುನಿಯವರು ಗ್ರಾಮಸ್ಥರ ವಿಶ್ವಾಸಕ್ಕೆ ಪಾತ್ರರಾಗಿದ್ರು. ಕಷ್ಟ ಎಂದು ಬಂದವರಿಗೆ ತಮ್ಮಿಂದಾದ ಸಹಾಯವನ್ನ ಮಾಡ್ತಿದ್ರು. ಆದ್ರೆ ಅವರ

ಒಳ್ಳೆಯತನವೇ ಅವರ ಪ್ರಾಣಕ್ಕೆ ಕಂಟಕವಾಯಿತು .


ಆಶ್ರಮದ ಕೆಲಸದವರಿಂದಲೇ ಕರಾಳ ಕೃತ್ಯ?


ಜೈನ ಮುನಿ ಕೊಲೆ ಪ್ರಕರಣದಲ್ಲಿ ಈಗ ಬಂಧಿಸಲ್ಪಟ್ಟ ಆರೋಪಿಗಳಿಬ್ಬರು ಆಶ್ರಮದಲ್ಲಿ ಕೆಲಸ ಮಾಡ್ತಿದ್ದವರೇ. ಕಷ್ಟ ಕಾಲ ವೆಂದು ಸುಳ್ಳು ಹೇಳಿ ಜೈನ ಮುನಿಯೊಂದಿಗೆ ಆರು ಲಕ್ಷ ಸಾಲ ಪಡೆದಿದ್ರು.

ನಿಶ್ಚಿತ ಅವಧಿ ಮೀರಿದರೂ ಸಾಲ ಹಿಂತಿರುಗಿಸಿರಲಿಲ್ಲ ಹಾಗಾಗಿ ಜೈನ ಮುನಿ ಸಾಲ ಹಿಂತಿರುಗಿಸಲು ಒತ್ತಾಯಿಸಿದ್ದಾರೆ. ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಇಬ್ಬರು ಸೇರಿ ಜೈನ ಮುನಿಯನ್ನ

ಆಶ್ರಮದಲ್ಲೇ ಶಾಕ್ ಕೊಟ್ಟು ಕೊಂಡು ನಂತರ ದೇಹವನ್ನು ೧೫ ತುಂಡು ಮಾಡಿ ಕೊಳವೆ ಬಾವಿಯಲ್ಲಿ ತುಂಬಿಸಿದ್ರು. ಅಲ್ಲದೆ ಈ ಬಗ್ಗೆ ಯಾರಿಗೂ ಸಂದೇಹ ಬಾರದ ಹಾಗೆ ನೋಡಿಕೊಂಡಿದ್ರು.

ಆದ್ರೆ ಯಾವಾಗ ಜೈನ ಮುನಿಯ ಕಣ್ಮರೆಯ ಸುದ್ದಿ ದೊಡ್ಡದಾಯಿತೋ ಆಗ ಆರೋಪಿಗಳು ಮೃತ ದೇಹ ಹುಡುಕೋ ಕಾರ್ಯಾಚರಣೆಯಲ್ಲಿ ಭಾಗಿ ಯಾಗಿದ್ರು. ಆದ್ರೆ ಆರೋಪಿಗಳ ಚಲವಲನದ ಬಗ್ಗೆ ಅನುಮಾನಗೊಂಡು

ಪೊಲೀಸರು ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಆಶ್ರಮಕ್ಕೆ ಭೇಟಿ ಕೊಟ್ಟ ಎಡಿಜಿಪಿ ಆರ್‌. ಹಿತೇಂದ್ರ ತೀವರ ಪರಿಶೀಲನೆ ನಡೆಸಿದ್ದಾರೆ. ಹಿರೇಕೋಡಿ ಗ್ರಾಮಸ್ಥರನ್ನು

ವಿಶ್ವಾಸಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತೇವೆ ಎಂದು ಎಡಿಜಿಪಿ ಆರ್‌.ಹಿತೇಂದ್ರ ಹೇಳಿದ್ದಾರೆ


ಸುಮಾರು 400 ಅಡಿ ಆಳದ ಕೊಳವೆ ಬಾವಿಯಲ್ಲಿ 25 ಅಡಿ ಆಳದಲ್ಲಿ ರಕ್ತಸಿಕ್ತ ಬಟ್ಟೆಗಳು, ಟವೆಲ್ ಪತ್ತೆಯಾಗಿವೆ. 30 ಅಡಿ ಆಳದಲ್ಲಿ ತಲೆಯ 2 ಭಾಗ, ಕೈ, ಕಾಲು, ತೊಡೆ, ಹೊಟ್ಟೆ ಸೇರಿದಂತೆ 9 ಭಾಗಗಳು ಪತ್ತೆಯಾಗಿದ್ದವು .

ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.


ಜೈನ ಮುನಿಯ ಹಂತಕರಿಗಿತ್ತಾ ಉಗ್ರರ ನಂಟು?


ಬಿಜೆಪಿಯ (BJP) ಶಾಸಕ ಸಿದ್ದು ಸವದಿ ಅವರು ಈ ಹತ್ಯೆಯ ಹಿಂದೆ ಉಗ್ರರ ಕೈವಾಡ ಇದೆ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕ ಸಿದ್ದು ಸವದಿ ಜೈನ ಮುನಿ ಆರೋಪಿಗಳ ಪೈಕಿ ಒಬ್ಬರ ಹೆಸರನ್ನ ಮಾತ್ರ ಉಲ್ಲೇಖಿಸಿ

ಈ ಹತ್ಯೆಗೂ ಉಗ್ರರಿಗೂ ನಂಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.


ಆದ್ರೆ ಸಿದ್ದು ಸವದಿ ಅವರ ಹೇಳಿಕೆಯಲ್ಲಿ ಹುರುಳಿಲ್ಲ. ಇದು ವೈಯಕ್ತಿಕ ಕಾರಣಗಳಿಗಾಗಿ ನಡೆದ ಹತ್ಯೆ. ಆರು ಲಕ್ಷ ಸಾಲ ಪಡೆದ ವಿಚಾರವಾಗಿ ಮುನಿಯ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ

ತಿಳಿದು ಬಂದಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಸಿದ್ದು ಸವದಿ ಗಾಳಿಯಲ್ಲಿ ಗುಂಡು ಹಾರಿಸ್ತಿದ್ದಾರೆ. ಶವದ ಮೇಲು ರಾಜಕೀಯ ಮಾಡೋದೇ ಬಿಜೆಪಿ ಸಂಸ್ಕೃತಿ ಅಂತ ಎಂದು ಗುಡುಗಿದ್ರು.


ಇನ್ನು ಈ ಸಂಬಂಧ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದು ತನಿಖೆಯಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ ನಿಷ್ಪಕ್ಷಪಾತ ತನಿಖೆ ನಡೆಯುತ್ತೆ ಎಂದು ಭರವಸೆ ನೀಡಿದ್ದಾರೆ. ಆರೋಪಿಗಳಿಗೆ

ನ್ಯಾಯಾಲಯದಲ್ಲಿ ಶಿಕ್ಷೆ ಆಗುವಂತೆ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

Exit mobile version