ಜಲಫಿರಂಗಿ ಪರಿಣಾಮ ಮೃತನಾದ ರೈತ, ಈ ಸಾವಿಗೆ ಹೊಣೆ ಯಾರು?

ಹರಿಯಾಣ, ಡಿ. 02: ಲೂಧಿಯಾನದ 55 ವರ್ಷದ ರೈತ ಗಜ್ಜಾನ್‌ ಸಿಂಗ್‌ ರೈತರ ಪ್ರತಿಭಟನೆ ವೇಳೆ ಮೃತನಾಗರುವ ಹರಿಯಾಣದಲ್ಲಿ ನಡೆದಿದೆ. ಈ ಅನಾಹುತಕ್ಕೆ ಸರ್ಕಾರವೇ ಕಾರಣವೆಂದು ಆರೋಪಿಸಲಾಗಿದೆ.

ರೈತನ ಕುಟುಂಬ ಮತ್ತು ರೈತ ಮುಂಖಡರು ಆರೋಪ ಮಾಡಿದ್ದು, ಪೋಲೀಸರು ಬಳಸಿದ್ದ ಜಲಫಿರಂಗಿ ಪರಿಣಾಮ ಆತ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ಜಲಫಿರಂಗಿ ಕಾರನ ಸಿಂಗ್‌ ಆರೋಗ್ಯ ಹದಗೆಟ್ಟಿದ ಪರಿಣಾಮ ನಿಧನರಾಗಿದ್ದಾರೆ ಎಂದು ಅನೇಕ ಸಂಘಟನೆಗಳು ಆರೋಪಿಸಿವೆ. ರೈತರ ಪಾರ್ಥಿವ ಶರೀರವನ್ನು ಪಡೆಯಲು ಹಿಂದೇಟು ಹಾಕಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಪಟ್ಟು ಹಿಡಿದರು.

ಭಾನುವಾರ ಸಂಜೆ ಆರೋಗ್ಯದ ಏರುಪೇರಿನಿಂದಾಗಿ ನೆಲಕ್ಕೆ ಕುಸಿದ ಮೃತ ರೈತ ಸಿಂಗ್‌ರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.

ದೆಹಲಿ ಚಲೋ ರೈತರ ಪ್ರತಿಭಟನೆಯಲ್ಲಿ ಸಿಂಗ್‌ ಸೇರಿದಂತೆ ಮೂವರು ರೈತರು ಮೃತಪಟ್ಟ ಘಟನೆ ನಡೆದಿದೆ. ಧನ್ನಾಸಿಂಗ್‌ ರಸ್ತೆ ಅಪಘಾತದಲ್ಲಿ ಮರತಪಟ್ಟರೆ, ಜನಕ್‌ರಾಜ್‌ಸಿಂಗ್‌ ರಾತ್ರಿ ಕಾರಿನಲ್ಲಿ ನಿದ್ರೆಗೆ ಜಾರಿರುವಾಗ ಮೃತಪಟ್ಟ ಘಟನೆ ನಡೆದಿದೆ. ಈ ಸಾವಿಗೆ ಹೊಣೆ ಯಾರು ಎಂಬುದು ಪ್ರಶ್ನಾತೀತವಾಗಿ ಉಳಿದಿದೆ.

Exit mobile version