ಪ್ರತಿ ಗ್ರಾಮದಲ್ಲೂ ಗ್ರಂಥಾಲಯವಿರುವ ಜಿಲ್ಲೆ ಜಮ್ತಾರಾ : ಗ್ರಂಥಾಲಯಗಳ ಸ್ಥಾಪನೆಗೆ ಮುನ್ನುಡಿ ಬರೆದವರು ಇವರೇ ನೋಡಿ

ಎಲ್ಲಾ ಗ್ರಾಮ ಪಂಚಾಯಿತಿಗಳು(Grama Panchayathi) ಸಮುದಾಯ ಗ್ರಂಥಾಲಯಗಳನ್ನು(Library) ಹೊಂದಿರುವ ದೇಶದ ಏಕೈಕ ಜಿಲ್ಲೆ ಜಾರ್ಖಂಡ್‌ನ(Jharkhand) ಜಮ್ತಾರಾ(Jamtara) ಜಿಲ್ಲೆ. ಸುಮಾರು ಎಂಟು ಲಕ್ಷ ಜನಸಂಖ್ಯೆ ಹೊಂದಿರುವ ಈ ಜಿಲ್ಲೆಯಲ್ಲಿ ಒಟ್ಟು 118 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಪಂಚಾಯಿತಿಗೂ ಸುಸಜ್ಜಿತ ಗ್ರಂಥಾಲಯವಿದೆ. ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಸಮಾಲೋಚನೆ ಅವಧಿಗಳು ಮತ್ತು ಪ್ರೇರಕ ತರಗತಿಗಳನ್ನು ಉಚಿತವಾಗಿ ನೀಡಲಾಗುತ್ತದೆ.

ದೇಶದಲ್ಲೇ ಮೊದಲ ಬಾರಿಗೆ ಎಲ್ಲಾ 118 ಪಂಚಾಯಿತಿಗಳಲ್ಲಿ ಗ್ರಂಥಾಲಯ ಹೊಂದಿದ ಜಿಲ್ಲೆ ಎನ್ನುವ ಕೀರ್ತಿಗೆ ಜಾರ್ಖಂಡ್ ರಾಜ್ಯದ ಜಮ್ತಾರ ಜಿಲ್ಲೆ ಪಾತ್ರವಾಗಿದೆ. ಇದಕ್ಕೆ ಕಾರಣಕರ್ತರು ಜಮ್ತಾರ ಡೆಪ್ಯುಟಿ ಕಮೀಷನರ್(Dy Commissioner) ಫೈಜ್ ಅಹಮದ್ ಮುಮ್ತಾಜ್(Faiz Ahmed Mumutaz) ಅವರು. ನಿರುಪಯುಕ್ತವಾಗಿ ಬಿದ್ದಿದ್ದ ಹಳೆಯ ಸರ್ಕಾರಿ ಕಟ್ಟಡಗಳನ್ನು ನವೀಕರಿಸಿ ಅದಕ್ಕೆ ಗ್ರಂಥಾಲಯದ ಸ್ವರೂಪ ಕೊಡುವ ಮೂಲಕ ಶಿಕ್ಷಣ ಕ್ರಾಂತಿಗೆ ಅವರು ಮುನ್ನುಡಿ ಬರೆದಿದ್ದಾರೆ. ಈ ಹಿಂದೆ ಗ್ರಾಮಸ್ಥರೊಬ್ಬರು ಅವರ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣಕ್ಕಾಗಿ ಅಹವಾಲು ಸಲ್ಲಿಸಲು ಬಂದಿದ್ದರು.

ಗ್ರಾಮದ ಯುವಕರು ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಪಕ್ಕದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿಯಿದೆ. ನಮ್ಮಲ್ಲೇ ಗ್ರಂಥಾಲಯ ನಿರ್ಮಾಣವಾದರೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದ್ದರು. ಆಗ ಡೆಪ್ಯುಟಿ ಕಮೀಷನರ್ ಅವರಿಗೆ ಎಲ್ಲಾ ಪಂಚಾಯಿತಿಗಳಲ್ಲೂ ಗ್ರಂಥಾಲಯ ನಿರ್ಮಿಸುವ ಉಪಾಯ ಹೊಳೆದಿತ್ತು, ಅಷ್ಟೇ ಶೀಘ್ರವಾಗಿ ಅದನ್ನು ಕಾರ್ಯರೂಪಕ್ಕೆ ತಂದರು. ಕೆಲ ಪಂಚಾಯಿತಿಗಳಲ್ಲಿ ಗ್ರಂಥಾಲಯ ಕಟ್ಟಡಗಳು ಶಿಥಿಲಗೊಂಡಿದ್ದವು, ಅಲ್ಲದೆ ಪೀಠೋಪಕರಣಗಳು, ಪುಸ್ತಕಗಳು, ವೃತ್ತಪತ್ರಿಕೆಗಳ ವ್ಯವಸ್ಥೆ ಸರಿಯಾಗಿರಲ್ಲಿಲ್ಲ.

ಅಂಥ ಕಡೆಗಳಲ್ಲಿ ಅಗತ್ಯ ನೆರವನ್ನು ನೀಡಿ, ಸೌಲಭ್ಯಗಳನ್ನು ಒದಗಿಸಿ ಗ್ರಂಥಾಲಯ ಕಾರ್ಯ ಚಾಲನೆಗೆ ವ್ಯವಸ್ಥೆ ಮಾಡಲಾಗಿದೆ.

Exit mobile version