ತೆರೆಗೆ ಬರಲಿದೆ ಕಿರುಚಿತ್ರ ‘ಜಂಗಮವಾಣಿ’

ಮೊಬೈಲ್ ನ್ನು ಅಗತ್ಯಕ್ಕಿಂತ ಅಧಿಕ ಬಳಸಿದರೆ ಏನೆಲ್ಲಾ ಆಗಬಹುದು ಎನ್ನವುದನ್ನು 14 ನಿಮಿಷಗಳ ‘ಜಂಗಮವಾಣಿ” ಕಿರುಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಮನು ಕಾಟ್.

ಸುದ್ದಿ ಗೋಷ್ಠಿಯಲ್ಲಿ ‘ಜಂಗಮವಾಣಿ’ ಚಿತ್ರದ ವಿಶೇಷ ಪ್ರದರ್ಶನ ನಡೆಸಲಾಯಿತು. ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಇವೆಂಟ್ ಗಳನ್ನು ಆಯೋಜಿಸಿ ಅನುಭವವಿರುವ ಮನು ಈಗ ತಮ್ಮದೇ ಆದ ‘ಚಿರಾಗ್ ಇವೆಂಟ್ಸ್ ಆಂಡ್ ಪ್ರೊಡಕ್ಷನ್ಸ್’ ಮೂಲಕ ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಕೂಡ ಇವರದ್ದೇ ಆಗಿದೆ.
ನನಗೆ ಚಿತ್ರ‌ ನಿರ್ದೇಶಕನಾಗುವ ಹಂಬಲವಿದೆ. ಅದರ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರ ನಿರ್ದೇಶಿಸಿದ್ದೇನೆ. ಈ ಕಿರುಚಿತ್ರ ಬರೀ ಯೂಟ್ಯೂಬ್ ನಲ್ಲಷ್ಟೇ ಅಲ್ಲದೆ, ಆನೇಕಲ್ ನ ಕೆಲವು ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಲಿದೆ. ಕಿರುಚಿತ್ರವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಮನು.

ನಾನು ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೇನೆ. ನನ್ನ ಅಭಿನಯದ ಮೊದಲ ಕಿರುಚಿತ್ರವಿದು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಮೊಬೈಲ್ ಎಲ್ಲರಿಗೂ ಅವಶ್ಯಕ, ಇದರ ಅವಶ್ಯಕತೆ ಇದಷ್ಟು ಮಾತ್ರ ಬಳಸೋಣ ಎಂದರು ಬಾಲನಟಿ ಪ್ರೇರಣ. ಮತ್ತೊಬ್ಬ ಕಲಾವಿದೆ ತನು ಅವರು ಸಹ ಕಿರುಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂತೋಷ್ ವೆಂಕಿ ಮತ್ತು ನಿರಂಜನ್ ದೇಶಪಾಂಡೆ ಕಿರುಚಿತ್ರ ವೀಕ್ಷಿಸಿ, ಶುಭ ಕೋರಿದರು. ಕಿರಣ್ ಛಾಯಾಗ್ರಹಣ, ಜಿತಿನ್ ಸಂಗೀತ ನಿರ್ದೇಶನವಿರುವ ಈ ಕಿರುಚಿತ್ರದಲ್ಲಿ ತನು, ರಾಮಸ್ವಾಮಿ, ಪ್ರೇರಣ, ತೇಜಸ್ ಮುಂತಾದವರು ನಟಿಸಿದ್ದಾರೆ.

Exit mobile version