ಜಂಕಾರ್ ಮ್ಯೂಸಿಕ್‌ನಿಂದ ‘ರಾಣಿ ಜೇನು’ ವಿಡಿಯೋ ಆಲ್ಬಂ ಬಿಡುಗಡೆ

ಜಂಕಾರ್ ಮ್ಯೂಸಿಕ್ ಸಂಗೀತ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡುವುದರ ಜತೆಗೆ ಅನೇಕ ವಿಡಿಯೋ ಆಲ್ಬಂಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಸೋನಿ ಆಚಾರ್ಯ ಅವರ ಸಾರಥ್ಯದಲ್ಲಿ ರಾಣಿ ಜೇನು ಎಂಬ ರೊಮ್ಯಾಂಟಿಕ್ ವಿಡಿಯೋ ಆಲ್ಬಂ ಅನ್ನು ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದೆ.

ಸೋನಿ‌‌ ಆಚಾರ್ಯ ಮತ್ತು ಪೂಜಾ ನಾಣಯ್ಯ ನಟಿಸಿರುವ ಈ ಸುಂದರ ಆಲ್ಬಂನ ಚಿತ್ರೀಕರಣ ಶ್ರೀರಂಗಪಟ್ಟಣ, ಕರಿಫಟ್ಟ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ. ಸೋನಿ ಆಚಾರ್ಯ ಸಾಹಿತ್ಯ ಬರೆದು, ಸಂಗೀತ ನೀಡಿ, ನಟಿಸಿರುವ ಈ ಆಲ್ಬಂಗೆ ರಾಮ್ ಸಂತೋಷ್ ಛಾಯಾಗ್ರಹಣ, ಶಶಾಂಕ್ ಮುರಳೀಧರನ್ ಸಂಕಲನ ಹಾಗೂ ಶ್ರೀಧರ್ ಶ್ರೀ ನೃತ್ಯ ನಿರ್ದೇಶನವಿದೆ.

Exit mobile version