ಜನವರಿಯಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ

ನವದೆಹಲಿ, ಡಿ. 28: ಟೋಲ್‍ಗಳಲ್ಲಿ ಕ್ಯಾಶ್‍ಲೆಸ್‌ ಆಗಿ, ಫಾಸ್ಟ್ಯಾಗ್ ಲೇನ್‍ ಮೂಲಕ ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಇದು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿಯನ್ನು ನಿವಾರಿಸಲು ಬಂದಿರುವ ಡಿಜಿಟಲೀಕರಣದ ನಗದು ರಹಿತ ವ್ಯವಹಾರವನ್ನು ಬಲಿಷ್ಠಗೊಳಿಸಲು ಈಗಾಗಲೇ ಕೇಂದ್ರ ಸರ್ಕಾರ ಫಾಸ್ಟ್ಯಾಗ್‌ನ್ನು ಜಾರಿಗೊಳಿಸಿದೆ. 2021ರ ಜನವರಿ 1ರಿಂದ ಕಾರು, ಲಾರಿ ಇನ್ನಿತರ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದೆ ಮತ್ತು ಕರ್ನಾಟಕದಲ್ಲಿ 36 ಟೋಲ್‍ಗಳು ಅದರ ಜೊತೆ ದೇಶಾದ್ಯಂತ 593 ಟೋಲ್‍ಗಳು ಫಾಸ್ಟ್ಯಾಗ್ ಲೇನ್‍ಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಟೋಲ್‍‍ಗಳಲ್ಲಿ ನಗದು ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ರದ್ದು ಮಾಡಲಾಗುತ್ತಿದ್ದು,ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ವಾಹನ ದಟ್ಟಣೆ ಕಡಿಮೆ ಮಾಡುವುದು ಫಾಸ್ಟ್ಯಾಗ್ ಕ್ಯಾಶ್‌ಲೆಸ್‌ ವ್ಯವಹಾರದ ಮುಖ್ಯ ಉದ್ದೇಶವಾಗಿದೆ.

Exit mobile version