ಫ್ರೀ ಮುಗಿತು ಇನ್ನು ಮುಂದೆ 999 ಸಬ್ಸ್ಕ್ರೈಪ್ಷನ್ ಚಾರ್ಜ್ ಶುರು ಅಂತಿದೆ ಜಿಯೋ ಸಿನಿಮಾ

ರಿಲಯನ್ಸ್ ಜಿಯೋ ಕಂಪನಿಯು ಜಿಯೋ ಮೊಬೈಲ್ ಫೋನ್‌ನಂತಹ ಉಚಿತ ಸೇವೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಸುತ್ತಿರುವುದು ಈಗಾಗಲೇ ತಿಳಿದಿರುವ ವಿಚಾರ. ಈ ಹಿಂದೆ ಜಿಯೋ ಟೆಲಿಕಾಂ ಸಂಸ್ಥೆ (Jio Telecom) ಲಾಂಚ್ ಆದ ಸಂದರ್ಭದಲ್ಲಿಯೂ ದಿನಕ್ಕೆ ಎರಡು ಜಿಬಿ ಡೇಟಾವನ್ನು (Jio Cinema app) ಉಚಿತವಾಗಿ ಕೊಡುತ್ತ ಬಂದಿತ್ತು.

ನಂತರ ಹಂತ ಹಂತವಾಗಿ ರೀಚಾರ್ಜ್ ದರ ನಿಧಾನವಾಗಿ ಏರಿಕೆ ಮಾಡಿಕೊಂಡರೂ ಕೂಡ ನಂಬರ್ ಒನ್ ಟೆಲಿಕಾಂ ಆಗಿ ಈಗಲೂ ನಿಂತುಕೊಂಡಿದೆ.

ಪ್ರಸ್ತುತ ನಡೆಯುತ್ತಿರುವ 2023 ಐಪಿಎಲ್ (IPL 2023) ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡುತ್ತಿದೆ ಈ ಮೂಲಕ ಬಳಕೆದಾರರ (Jio Cinema app) ಸಂಖ್ಯೆಯನ್ನು ಕಂಪನಿಯು ಗಣನೀಯವಾಗಿ ಹೆಚ್ಚಿಸಿಕೊಂಡಿದೆ.

ಈವರೆಗೆ ದಾಖಲಾದ ಡೇಟಾ ಪ್ರಕಾರ, ಪ್ಲೇ ಸ್ಟೋರ್‌ನಲ್ಲಿ ಇಲ್ಲಿಯವರೆಗೆ ಜಿಯೋ ಸಿನಿಮಾ ಅಪ್ಲಿಕೇಶನ್ ಅನ್ನು 100 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ.

ಐಪಿಎಲ್‌ನ ಡಿಜಿಟಲ್ ಹಕ್ಕುಗಳಿಗಾಗಿ Viacom18 23,758 ಕೋಟಿ ರೂ ಹಣವನ್ನು ಕೊಡಲಾಗಿತ್ತು. ಈಗಲೂ ಜಿಯೋ ಸಿನಿಮಾದಲ್ಲಿಐಪಿಎಲ್ ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡಲಾಗುತ್ತಿದೆ.

ಇದನ್ನೂ ಓದಿ : https://vijayatimes.com/muslim-mla-kaneez-fatima/

ಈ ಮೂಲಕ ಕಂಪನಿಯು ತನ್ನ ಗ್ರಾಹಕರನ್ನು ಗಟ್ಟಿಗೊಳಿಸಿಕೊಂಡಿದೆ. ಕಂಪನಿಯು ಈಗ ಪ್ರೀಮಿಯಂ ಹೆಸರಿನಲ್ಲಿ ಚಂದಾದಾರಿಕೆ ಹಾದಿ ಹಿಡಿದಿದೆ.

ಹೌದು,ಇನ್ನು ಮುಂದೆ ರೂ 999ರ ದರದಲ್ಲಿ ಚಂದಾದಾರಿಕೆ ಕಟ್ಟಬೇಕಾಗಿದೆ.

ಬಳಕೆದಾರರು ಈ ಯೋಜನೆಯಡಿಯಲ್ಲಿ ತಮ್ಮ ಖಾತೆಯಿಂದ ಏಕಕಾಲದಲ್ಲಿ ನಾಲ್ಕು ಡೆವೈಸ್‌ಗಳಲ್ಲಿ ಲಾಗಿನ್ ಮಾಡಿಕೊಳ್ಳಬಹುದಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಹಾಟ್‌ಸ್ಟಾರ್‌ಗೆ ಸ್ಪರ್ಧೆಗೆ ತಯಾರಾಗಿದೆ ಜಿಯೋ ಸಿನಿಮಾ :

Viacom18 ನೆಟ್‌ವರ್ಕ್ ರಿಲಯನ್ಸ್ ಇಂಡಸ್ಟ್ರೀಸ್‌ನ (Viacom18 Network Reliance Industries) ಅಂಗಸಂಸ್ಥೆಯಾಗಿದೆ.

ಶೀಘ್ರದಲ್ಲೇ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಹ್ಯಾರಿ ಪಾಟರ್,ಸಕ್ಸೆಶನ್ ಮತ್ತು ಡಿಸ್ಕವರಿ, ಗೇಮ್ ಆಫ್ ಥೋನ್ಸ್ (Game of Thrones), ಮೊದಲಾದ ಸಿನಿಮಾ ಮತ್ತು ಮನರಂಜನಾ ಕಾರ್ಯಕ್ರಮಗಳು ಲಭ್ಯವಿರುತ್ತವೆ ಎಂದು ಕಂಪನಿ ತಿಳಿಸಿವೆ.

ಜಿಯೋ ಕಂಪನಿಯು ಹಾಲಿವುಡ್‌ನ ಪ್ರಸಿದ್ಧ ನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್‌ನೊಂದಿಗೆ ಕಂಪನಿ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ನಂತರ, ಸಿನಿಮಾ ವೆಬ್ ಸಿರೀಸ್ ಮತ್ತು ಮತ್ತಿತರೆ ಕಾರ್ಯಕ್ರಮಗಳನ್ನು ವಿವಿಧ ಭಾಷೆಗಳಲ್ಲಿ ಪ್ರಸಾರ ಮಾಡಲು ಜಿಯೋ ಸಿನಿಮಾ ತಯಾರಾಗಿದೆ.

Exit mobile version