ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Karnataka: ಕರ್ನಾಟಕ ಅರಣ್ಯ ಇಲಾಖೆಯಲ್ಲಿ (Forest Department ) ಖಾಲಿ ಇರುವ 540 ಹುದ್ದೆಗಳ(540 Jobs) ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ(Appication) ಆಹ್ವಾನಿಸಲಾಗಿದೆ. ಇನ್ನು ಡಿಸೆಂಬರ್ 01 ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಲಿದ್ದು, ಡಿಸೆಂಬರ್ 30 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.

ನೇಮಕಾತಿ ಪ್ರಾಧಿಕಾರ : ಕರ್ನಾಟಕ ರಾಜ್ಯ ಅರಣ್ಯ ಇಲಾಖೆ
ಹುದ್ದೆ ಹೆಸರು : ಅರಣ್ಯ ರಕ್ಷಕರು(Forest Guards)
ಒಟ್ಟು ಹುದ್ದೆಗಳ ಸಂಖ್ಯೆ : 540

ಶೈಕ್ಷಣಿಕ ಅರ್ಹತೆ : PUC ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಪಾಸ್ ಮಾಡಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ ಪೂರೈಸಿರಬೇಕು. ಎಸ್ಸಿ / ಎಸ್ಟಿ / ಕೆಟಗೆರಿ-1 ಅಭ್ಯರ್ಥಿಗಳಿಗೆ 32 ವರ್ಷ, OBC ಅಭ್ಯರ್ಥಿಗಳಿಗೆ 30 ವರ್ಷ, GM ಅರ್ಹತೆಯ ಅಭ್ಯರ್ಥಿಗಳಿಗೆ 27 ವರ್ಷ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ : ಶೈಕ್ಷಣಿಕ ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ 1:20 ಅನುಪಾತದಲ್ಲಿ ದೈಹಿಕ ಸಮರ್ಥತೆ ಪರೀಕ್ಷೆಗಳಿಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನಂತರ ಪರೀಕ್ಷೆ ಅಥವಾ ಸಂದರ್ಶನ ಇರುತ್ತದೆ.

ವೇತನ ಶ್ರೇಣಿ : ರೂ.18,600 – 32,600 ವರೆಗೆ ನೀಡಲಾಗುತ್ತದೆ. ಪಿಂಚಣಿ ಮತ್ತು ವಿಶೇಷ ಭತ್ಯೆಗಳನ್ನು ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 01-12-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 30-12-2023
ಅರ್ಜಿ ಸಲ್ಲಿಕೆಗೆ ವೆಬ್ಸೈಟ್ ವಿಳಾಸ : https://kfdrecruitment.in/

Exit mobile version