ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ವಿವಿಗಳಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ (Ayush Department) ಅಡಿಯಲ್ಲಿರುವ ದೇಶದ ವಿವಿಧ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕದ ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ಮತ್ತು ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿ (Bengaluru)ನಲ್ಲಿ ಬೋಧಕ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಹುದ್ದೆಗಳ ವಿವರ :
ಆಯುರ್ವೇದ ಅಸೋಸಿಯೇಟ್ ಪ್ರೊಫೆಸರ್ 06
ಆಯುರ್ವೇದ ಅಸಿಸ್ಟಂಟ್ ಪ್ರೊಫೆಸರ್ 05
ಯುನಾನಿ ಅಸಿಸ್ಟಂಟ್ ಪ್ರೊಫೆಸರ್ 08
ಆಯುರ್ವೇದ ಪ್ರೊಫೆಸರ್ 07
ಯುನಾನಿ ಪ್ರೊಫೆಸರ್ 2
ಯುನಾನಿ ಅಸೋಸಿಯೇಟ್ ಪ್ರೊಫೆಸರ್ 2

ಶೈಕ್ಷಣಿಕ ವಿದ್ಯಾರ್ಹತೆ : ಸಂಬಂಧಪಟ್ಟ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಹೆಚ್ಡಿ ಪದವಿ ಪಡೆದಿರಬೇಕು. NET, SLET ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವೇತನ :
ಸಹಾಯಕ ಪ್ರಾಧ್ಯಾಪಕರು : 40,000.ರೂ.ಗಳು
ಸಹ ಪ್ರಾಧ್ಯಾಪಕರ : 45,000. ರೂ.ಗಳು
ಪ್ರಾಧ್ಯಾಪಕರು : 45,000. ರೂ.ಗಳು

ವಿಶೇಷ ಸೂಚನೆ :
• ಈ ಮೇಲಿನ ಹುದ್ದೆಗಳನ್ನು ಕನ್ಸಲ್ಟಂಟ್ (Consultant) ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
• ಅರ್ಜಿದಾರರು ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರು ಹುದ್ದೆಗೆ ಉನ್ನತ ಮಟ್ಟದ ಬೋಧನೆ ನೀಡಿರುವ ಅನುಭವ ಹೊಂದಿರಬೇಕು.
• ಇದು 11 ತಿಂಗಳ ಅವಧಿಯ ತಾತ್ಕಾಲಿಕ ನೇಮಕಾತಿಯಾಗಿರುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 09-07-2024

ಆಯುಷ್ ಇಲಾಖೆಯ ಅಧಿಕೃತ ವೆಬ್ಸೈಟ್ www.ayush.karnataka.gov.in

ಅಧಿಸೂಚನೆಗಾಗಿ ಕ್ಲಿಕ್ ಮಾಡಿ: https://ayush.karnataka.gov.in/storage/pdf-files/Notifications/Re-Notification_0001.pdf

Exit mobile version