ರೇಷ್ಮೆ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

Job Vacancy: ರಾಜ್ಯದ ರೇಷ್ಮೆ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ (Silk and Farmers Service Co-operative Society) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ನೇಮಕಾತಿ ಪ್ರಾಧಿಕಾರ : ರೇಷ್ಮೆ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತ
ಹುದ್ದೆ ಹೆಸರು : ಕಿರಿಯ ಸಹಾಯಕ
ಹುದ್ದೆಗಳ ಸಂಖ್ಯೆ : 5
ವೇತನ : 21400-42000ರೂ.ಗಳು
ಶೈಕ್ಷಣಿಕ ವಿದ್ಯಾರ್ಹತೆ : ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ (Computer) ಜ್ಞಾನ ಇರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ತುಂಬಿರಬೇಕು. GM ವರ್ಗದ ಅಭ್ಯರ್ಥಿಗಳಿಗೆ 35ವರ್ಷ, OBC ವರ್ಗದವರಿಗೆ – 38 ವರ್ಷ, SC / ST ಅಭ್ಯರ್ಥಿಗಳಿಗೆ – 40 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಕೆ ವಿಧಾನ : ರೇಷ್ಮೆ ಹಾಗೂ ರೈತರ ಸೇವಾ ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿ 1000 ಪಾವತಿಸಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದಾಖಲೆಗಳ ನಕಲು ಜೆರಾಕ್ಸ್ಗಳನ್ನು ವಿಳಾಸ – ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ. ಬಸ್ ನಿಲ್ದಾಣದ ಪಕ್ಕ, ಸರ್ಜಾಪುರ (Sarjapura), ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ – 562125‘ ಗೆ ಕಳುಹಿಸಬೇಕು.

ಸೂಚನೆ : ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯೊಂದಿಗೆ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ ದಿನಾಂಕ 28-12-2023ರೊಳಗೆ ತಲುಪುವಂತೆ ಸಲ್ಲಿಸತಕ್ಕದ್ದು.

ಈ ಕೆಳಗಿನ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಲಗತ್ತಿಸಬೇಕು.
ಸ್ವ-ಹಸ್ತಾಕ್ಷರವಿರುವ ಪಾಸ್ಪೋರ್ಟ್ (Passport) ಅಳತೆಯ ಭಾವಚಿತ್ರ
ಆಧಾರ್ ಕಾರ್ಡ್
10ನೇ ತರಗತಿ ಅಂಕಪಟ್ಟಿ
ಪದವಿ ಅಂಕಪಟ್ಟಿ
ಕಂಪ್ಯೂಟರ್ ತರಬೇತಿ ಕುರಿತು ಸರ್ಟಿಫಿಕೇಟ್
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 28-12-2023

Exit mobile version