ಬ್ಯಾಂಕ್ ಆಫ್ ಇಂಡಿಯಾದಿಂದ 143 ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ದೇಶದ ಪ್ರತಿಷ್ಠಿತ ಬ್ಯಾಂಕ್ ಆಫ್ ಇಂಡಿಯಾವು (Bank of India) 143 ಆಫೀಸರ್ ಹುದ್ದೆಗಳನ್ನು ರೆಗ್ಯುಲರ್ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಬ್ಯಾಂಕ್ ಹೆಸರು : ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಗಳ ಹೆಸರು : ವಿವಿಧ ಅಧಿಕಾರಿಗಳು
ಒಟ್ಟು ಹುದ್ದೆಗಳ ಸಂಖ್ಯೆ : 143

ಶೈಕ್ಷಣಿಕ ಅರ್ಹತೆ : ಹುದ್ದೆಗಳಿಗೆ ಅನುಗುಣವಾಗಿ CA/ ICWA / CS / ಯಾವುದೇ ಪದವಿ / MBA / PGDBM / / PGDBA / ಮಾರ್ಕೆಟಿಂಗ್ / ಫೈನಾನ್ಸ್ / MCA/ BE / ಬಿ.ಟೆಕ್ / ಬಿಎಸ್ಸಿ / ಎಂಎಸ್ಸಿ / ಇತರೆ ಶೈಕ್ಷಣಿಕ ಅರ್ಹತೆಗಳನ್ನು ಪಡೆದಿರಬೇಕು.

ಹುದ್ದೆಗಳ ಪದನಾಮಗಳು :
ಕ್ರೆಡಿಟ್ ಆಫೀಸರ್, ಸೀನಿಯರ್ ಮ್ಯಾನೇಜರ್ ಐಟಿ ಡಾಟಾ ಅನಾಲಿಸ್ಟ್ (Senior Manager IT Data Analyst), ಚೀಫ್ ಮ್ಯಾನೇಜರ್ – ಐಟಿ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ / ಐಟಿ ಕ್ಲೌಡ್ ಆಪರೇಷನ್ಸ್, ಚೀಫ್ ಮ್ಯಾನೇಜರ್ – ಐಟಿ ನೆಟ್ವರ್ಕ್ಎಕನಾಮಿಸ್ಟ್, ಡಾಟಾ ಸೈಂಟಿಸ್ಟ್, ಫುಲ್ ಸ್ಟಾಕ್ ಡೆವಲಪರ್, ಡಾಟಾಬೇಸ್ ಅಡ್ಮಿನಿಸ್ಟ್ರೇಟರ್, ಪ್ಲಾಟ್ಫಾರ್ಮ್ ಇಂಜಿನಿಯರಿಂಗ್ ಎಕ್ಸ್ಪರ್ಟ್, ಲಿನಕ್ಸ್ ಅಡ್ಮಿನಿಸ್ಟ್ರೇಟರ್, ಒರಾಕಲ್ ಎಕ್ಸಡಾಟಾ ಅಡ್ಮಿನಿಸ್ಟ್ರೇಷನ್, ಸ್ಟ್ಯಾಟಿಸ್ಟೀಷಿಯನ್, ಸೀನಿಯರ್ ಮ್ಯಾನೇಜರ್ ಐಟಿ, ಚೀಫ್ ವೆಲ್ತ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಐಟಿ ಸಿಸ್ಟಮ್ (Chief manager IT System), ಚೀಫ್ ಮ್ಯಾನೇಜರ್ ಐಟಿ ಇನ್ಫ್ರಾ, ಸೀನಿಯರ್ ಮ್ಯಾನೇಜರ್ – ಐಟಿ ಡಾಟಾಬೇಸ್, ಸೀನಿಯರ್ ಮ್ಯಾನೇಜರ್ – ಐಟಿ ಕ್ಲೌಡ್ ಆಪರೇಷನ್ಸ್/ ಸೆಕ್ಯೂರಿಟಿ ಅನಾಲಿಸ್ಟ್, ಡಾಟಾ ಅನಾಲಿಸ್ಟ್, ಟೆಕ್ನಿಕಲ್ ಅನಾಲಿಸ್ಟ್, ಕಾನೂನು ಅಧಿಕಾರಿ ಪಾಯಿಂಟ್ ಸೆಕ್ಯೂರಿಟಿ ಮ್ಯಾನೇಜರ್ ಫಾರ್ ಟೂಲ್ ಮ್ಯಾನೇಜ್ಮೆಂ̧ಟ್ ಡಾಟಾ ಕ್ವಾಲಿಟಿ ಡೆವಲಪರ್, ಡಾಟಾ ಗರ್ವರ್ನೆನ್ಸ್ ಎಕ್ಸ್ಪರ್ಟ್

ಅರ್ಜಿ ಶುಲ್ಕ ವಿವರ : GM ವರ್ಗದವರು 850 ರೂ, SC / ST / PWD ಅಭ್ಯರ್ಥಿಗಳು ರೂ.175 ರೂಪಾಯಿ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿ ಮಾಡಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 27-03-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 10-04-2024

ಅಧಿಕೃತ ವೆಬ್ಸೈಟ್ ವಿಳಾಸ : https://ibpsonline.ibps.in/boiomarc24/

Exit mobile version