ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು (Bengaluru) ಅಭಿವೃದ್ಧಿ ಪ್ರಾಧಿಕಾರದಲ್ಲಿ ಸ್ಟೆನೋಗ್ರಾಫರ್ (Stenographer) ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ PUC ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವ ಬೆರಳಚ್ಚುಗಾರ ಮತ್ತು ಶೀಘ್ರಲಿಪಿಗಾರರ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ (Notification) ಬಿಡುಗಡೆ ಮಾಡಲಾಗಿದೆ. ಬ್ಯಾಕ್ಲಾಗ್ ಹುದ್ದೆಗಳು ಇವಾಗಿದ್ದು, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ :
ಸ್ಟೆನೋಗ್ರಾಫರ್ : 01
ಟೈಪಿಸ್ಟ್ : 01

ಶೈಕ್ಷಣಿಕ ವಿದ್ಯಾರ್ಹತೆ : ಮಾನ್ಯತೆ ಹೊಂದಿರುವ ಮಂಡಳಿಯಿಂದ PUC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಸೀನಿಯರ್ ಗ್ರೇಡ್ ಟೈಪ್ರೈಟಿಂಗ್ (English Senior Grade Typewriting) ಪರೀಕ್ಷೆಯನ್ನು ಪಾಸ್ ಮಾಡಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ ಹಾಗೂ 40 ವರ್ಷ ವಯಸ್ಸು ಮೀರಿರಬಾರದು. ಮಾಜಿ ಸೈನಿಕರು, ಅಂಗವಿಕಲರು / ವಿಧವೆಯರಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ವೇತನ ಶ್ರೇಣಿ :
ಬೆರಳಚ್ಚುಗಾರ : 21400-42000.
ಶೀಘ್ರಲಿಪಿಗಾರರ : 27650-52650.

ಅರ್ಜಿ ಸಲ್ಲಿಸುವ ವಿಳಾಸ : ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಆಯುಕ್ತರು, ಬೆಂಗಳೂರು (Bengaluru) ಅಭಿವೃದ್ಧಿ ಪ್ರಾಧಿಕಾರ, ಟಿ.ಚೌಡಯ್ಯ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-560020 ಇವರಿಗೆ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 09-11-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 08-12-2023

ನೇಮಕಾತಿ ವಿಧಾನ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಶೇಕಡವಾರು ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಸೂಚನೆ :
ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರು ಹುದ್ದೆಗಳಿಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು.
ಒಂದು ಬಾರಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿನ ವಿವರಗಳನ್ನು ತಿದ್ದುಪಡಿ ಮಾಡುವಂತೆ ಸಲ್ಲಿಸುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ದಾಖಲೆಗಳು :
SSLC, PUC, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜಾತಿ ದೃಢೀಕರಣ ಪತ್ರ ಲಗತ್ತಿಸಬೇಕು

Exit mobile version