ದೇಶದ ಪ್ರತಿಷ್ಠಿತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ITI ಪಾಸಾದವರಿಗೆ ಅನೇಕ ವಿಭಾಗಗಳಲ್ಲಿ ಹುದ್ದೆಗಳಿದ್ದು, ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಕಂಪ್ಯೂಟರ್ ಆಪರೇಟಿಂಗ್ (Computer Operating), ಇಲೆಕ್ಟ್ರಿಕಲ್, ಫಿಟ್ಟರ್, ಪೇಂಟರ್, ಪ್ರೋಗ್ರಾಮಿಂಗ್ ಅಸಿಸ್ಟಂಟ್ ಹೀಗೆ ಹಲವು ವಿಭಾಗಗಳಲ್ಲಿ ಹುದ್ದೆಗಳಿವೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಹುದ್ದೆಗಳ ವಿವರ
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್: 60
ಬುಕ್ ಬೈಂಡರ್ : 01
ಫಿಟ್ಟರ್ : 20
ವೆಲ್ಡರ್ : 04
ಇಲೆಕ್ಟ್ರೀಷಿಯನ್ : 12
ಇಲೆಕ್ಟ್ರಾನಿಕ್ಸ್ : 04
ಟರ್ನರ್ : 08
ಮಷಿನಿಸ್ಟ್ : 16
ಕಾರ್ಪೆಂಟರ್ : 02
ಉದ್ಯೋಗ ಅವಧಿ : ಒಂದು ವರ್ಷ
ಉದ್ಯೋಗ ಸ್ಥಳ : ಹೈದರಾಬಾದ್.
ಮಾಸಿಕ ಸಂಭಾವನೆ : ರೂ.8000-9000
ಅರ್ಜಿ ಸಲ್ಲಿಸಲು ವಿದ್ಯಾರ್ಹತೆ : ITI ಜೊತೆಗೆ NCVT ಅಥವಾ SCVT ಪ್ರಮಾಣ ಪತ್ರಗಳನ್ನು ಪಡೆದಿರಬೇಕು.
ಆಯ್ಕೆ ವಿಧಾನ : ITIನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ (Short List) ಮಾಡಿ, ಆಯ್ಕೆ ಮಾಡಲಾಗುತ್ತದೆ.
ಅಧಿಕೃತ ನೋಟಿಫಿಕೇಶನ್ : https://www.drdo.gov.in/drdo/sites/default/files/career-vacancy-documents/advtDMRL30042024.pdf
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 31-05-2024
ಅರ್ಜಿ ಸಲ್ಲಿಸಬೇಕಾದ ವೆಬ್ವಿಳಾಸ : https://portal.mhrdnats.gov.in