ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ BE ಪಾಸಾದವರಿಗೆ ಉದ್ಯೋಗಾವಕಾಶ

ICMRನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ (Job Vacancy in ICMR) ಹೊರಡಿಸಲಾಗಿದೆ. ಹುದ್ದೆಗಳ ವಿವರ, ಅರ್ಹತೆ, ಪ್ರಮುಖ

ದಿನಾಂಕಗಳ ಸೇರಿದಂತೆ (Job Vacancy in ICMR) ಸಂಪೂರ್ಣ ಮಾಹಿತಿ ಇಲ್ಲಿದೆ.

ಇನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ

ಸ್ವಾಯತ್ತ ಸಂಸ್ಥೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿರುವ 27 ಕೇಂದ್ರಗಳು ಮತ್ತು ವಿವಿಧ ಕ್ಷೇತ್ರ ಘಟಕಗಳಲ್ಲಿ ಬಯೋಮೆಡಿಕಲ್ (Biomedical)/ಆರೋಗ್ಯ ಸಂಶೋಧನೆ

ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಸಂಶೋಧನೆಗಳನ್ನು ಮಾಡುತ್ತಿದೆ.

ನೇಮಕಾರಿ ಪ್ರಾಧಿಕಾರ : ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ
ಹುದ್ದೆಗಳ ವಿವರ
ಪ್ರೋಗ್ರಾಮರ್ : 01
ಮೆಕ್ಯಾನಿಕಲ್ ಇಂಜಿನಿಯರಿಂಗ್ (Mechanical Engineering) : 02
ಬಯೋಮೆಡಿಕಲ್ ಇಂಜಿನಿಯರಿಂಗ್: 01
ಇನ್ಫಾರ್ಮೇಷನ್ ಟೆಕ್ನಾಲಜಿ ಇಂಜಿನಿಯರಿಂಗ್ : 01
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇಂಜಿನಿಯರಿಂಗ್ : 01
ಸಿವಿಲ್ ಇಂಜಿನಿಯರಿಂಗ್ : 01
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ : 01

ಶೈಕ್ಷಣಿಕ ವಿದ್ಯಾರ್ಹತೆ : ಮಾನ್ಯತೆ ಹೊಂದಿರುವ ವಿಶ್ವ ವಿದ್ಯಾಲಯದಿಂದ BE ಪದವಿ ಪಾಸ್ ಮಾಡಿರಬೇಕು.

ವಿಶೇಷ ಸೂಚನೆ : ಬಯೋಮೆಡಿಕಲ್ ಇಂಜಿನಿಯರಿಂಗ್ ಹುದ್ದೆಯೂ ತಾಂತ್ರಿಕ ಅಧಿಕಾರಿ-B ಹುದ್ದೆಯಾಗಿದೆ. ಉಳಿದ ಹುದ್ದೆಗಳು ತಾಂತ್ರಿಕ ಅಧಿಕಾರಿ –C ಹುದ್ದೆಗಳಾಗಿವೆ.

ವೇತನ :
ತಾಂತ್ರಿಕ ಅಧಿಕಾರಿ-ಬಿ : ರೂ.56,100- 1,77,500.
ತಾಂತ್ರಿಕ ಅಧಿಕಾರಿ -ಸಿ: ರೂ.67,700-2,08,700.

ವಯೋಮಿತಿ :
ತಾಂತ್ರಿಕ ಅಧಿಕಾರಿ-ಬಿ ಹುದ್ದೆಗೆ 35 ವರ್ಷ ಮೀರಿರಬಾರದು.
ತಾಂತ್ರಿಕ ಅಧಿಕಾರಿ -ಸಿ ಹುದ್ದೆಗೆ 45 ವರ್ಷ ಮೀರಿರಬಾರದು.

ಅರ್ಜಿ ಹಾಕಲು ಕೊನೆಯ ದಿನಾಂಕ : 08ನೇ ಮಾರ್ಚ್, 2024

ಹೆಚ್ಚಿನ ಮಾಹಿತಿಗಾಗಿ ಐಸಿಎಂಆರ್ನ ಜಾಲತಾಣಕ್ಕೆ ಭೇಟಿ ನೀಡಿ : www.icmr.nic.in

ಇದನ್ನು ಓದಿ: ಆರ್ಥಿಕ ಹಿಂಜರಿತದ ಹೊಡೆತ: ಜಪಾನ್ ಕೈ ತಪ್ಪಿದ 3ನೇ ಅತಿದೊಡ್ಡ ಆರ್ಥಿಕತೆ ಪಟ್ಟ

Exit mobile version