ಬೆಂಗಳೂರಿನಲ್ಲಿ ಗಣೇಶನಿಗೆ ಎರಡುವರೆ ಕೋಟಿ ರೂಪಾಯಿ ನೋಟು 56 ಲಕ್ಷ ನಾಣ್ಯಗಳಿಂದ ಅಲಂಕಾರ

Bengaluru: ವಿಘ್ನ ನಿವಾರಕ ಗಣಪತಿಗೆ (Ganapathi) ಎಲ್ಲೆಲ್ಲೂ ಅದ್ದೂರಿ ಪೂಜೆ ಪುರಸ್ಕಾರ ಮತ್ತು ಅಲಂಕಾರ ಮಾಡುವುದು ದೊಡ್ಡ ಟ್ರೆಂಡ್ ಆಗಿದೆ. ಜನರು ಅಲಂಕಾರ ಮಾಡಿದ ಗಣಪತಿಯನ್ನು ನೋಡಲು ಮುಗಿಬಿದ್ದು ಬರುತ್ತಾರೆ. ಆದರೆ ಬೆಂಗಳೂರಿನ ಜೆ.ಪಿ ನಗರದಲ್ಲಿ @BLRjpnagar ನೋಟು ನಾಣ್ಯಗಳಿಂದ ಅಲಂಕರಿಸಿದ ಗಣೇಶ ಉತ್ಸವ ದೇಶದಲ್ಲಿ ಎಲ್ಲೆಡೆ ಫೇಮಸ್ ಆಗಿದೆ.

ಗಣೇಶ ಚತುರ್ಥಿಗೆ ವಿಭಿನ್ನ ರೀತಿಯ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಲಾಗುತ್ತದೆ. ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿ #Puttenahalli ಯಲ್ಲಿರುವ ಸತ್ಯ ಗಣಪತಿ ದೇವಸ್ಥಾನ ಇಡೀ ಭಾರತದಲ್ಲಿ ಮೊದಲ ಬಾರಿಗೆ ಕೋಟಿ ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳನ್ನು ದೇವಸ್ಥಾನವನ್ನು ಅಲಂಕರಿಸಿ ಭಾರತದಲ್ಲಿ ಎಲ್ಲೆಡೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೊಸ ಅನುಭವದಲ್ಲಿ ಭಕ್ತರಿಗೆ ಹೊಸ ರೀತಿಯಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ಉದ್ದೇಶಿಸಿರಿ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ನವರು (Satya Ganapathi Shiradi Sai Trust) ವಿಭಿನ್ನವಾಗಿ ಅಲಂಕಾರವನ್ನು ಮಾಡಿದ್ದಾರೆ. ಈ ಬಾರಿಯ ಗಣೇಶ ಚತುರ್ಥಿಗೆ ಸುಮಾರು 56 ಲಕ್ಷ ಮೌಲ್ಯದ 5,10 ಮತ್ತು 20 ರೂಪಾಯಿ ನಾಣ್ಯಗಳನ್ನು ಬಳಸಿ, 10, 20, 50,100,200 ಮತ್ತು 500 ರೂಪಾಯಿ ನೋಟು ಬಳಸಿಕೊಂಡು ಹೂವಿನಂತೆ ಮಾಲೆಗಳನ್ನು ಮಾಡುವ ಮೂಲಕ ಅಲಂಕರಿಸಲಾಗಿದೆ.

ಅದೇ ವೇಳೆಯಲ್ಲಿ ನಾಣ್ಯಗಳಿಂದಲೇ ಗಣೇಶನ ಫೋಟೋ (Ganesha Photo), ಜೈ ಕರ್ನಾಟಕ, ನೇಶನ್ ಫಸ್ಟ್, ವಿಕ್ರಮ ಲ್ಯಾಂಡರ್, ಚಂದ್ರಯಾನದ (Chandrayaan) ಚಿತ್ರಗಳು ಮತ್ತು ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನು ನಿರ್ಮಿಸಲಾಗಿದೆ. ಈ ಅಲಂಕಾರ ನೋಡಿ ಭಕ್ತರು ಬಹಳ ಸಂತಸ ಗೊಂಡರು. ಅಲಂಕಾರ ಇನ್ನು ಒಂದು ವಾರಗಳ ಕಾಲ ಇರುತ್ತದೆ ಭಕ್ತಾದಿಗಳು ದರ್ಶನ ಪಡೆಯಬಹುದಾಗಿದೆ ಎಂದು ಟ್ರಸ್ಟ್ ಪ್ರಕಟಣೆ ಮಾಡಿದೆ. ಇದರ ವಿಳಾಸ : ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್, ಜೆಪಿ ನಗರ,ಬೆಂಗಳೂರು.

ಅಲ್ಲದೆ ಪ್ರತಿವರ್ಷ ಗುರುಪೂರ್ಣಮಿ ಎಂದು ಶಿರಡಿ ಸಾಯಿಬಾಬರನ್ನು ತೆಂಗಿನ ಕಾಯಿ,ಬಾದಾಮಿ,ಖರ್ಜೂರ ಹಣ್ಣುಗಳಿಂದ ಸಿಂಗರಿಸುವುದರಿಂದ ಈ ದೇವಸ್ಥಾನ ಗಮನ ಸೆಳೆಯುತ್ತದೆ.

Exit mobile version