ಅಪ್ಪು ಎಲ್ಲೂ ಹೋಗಿಲ್ಲ ನಮ್ಮ ಹೃದಯದಲ್ಲಿದ್ದಾರೆ : ಗೆಳೆಯ ಜೂ. ಎನ್.ಟಿಆರ್!

junior NTR

ಗುರುವಾರ(Thursday) ಅದ್ಧೂರಿಯಾಗಿ ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(Puneeth Rajkumar) ಅವರು ಅಭಿನಯದ ಜೇಮ್ಸ್(James) ಸಿನಿಮಾ(Cinema) ಭರ್ಜರಿಯಾಗಿ ಬಿಡುಗಡೆಗೊಂಡಿತು. ಪವರ್ ಸ್ಟಾರ್ ಜೇಮ್ಸ್ ಸಿನಿಮಾವನ್ನು ಹಬ್ಬದಂತೆ ಆಚರಿಸಿದ ಅಭಿಮಾನಿಗಳು, ಅದನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ. ಸದ್ಯ ಜೇಮ್ಸ್ ಸಿನಿಮಾ ಕುರಿತು ಮಾತನಾಡಿದ ನಟ ಜೂನಿಯರ್ ಎನ್.ಟಿ.ಆರ್(Junior NTR), ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಸಿನಿಮಾ ನೋಡಿದ್ರಾ ಸರ್? ಎಂದು ಪ್ರಶ್ನಿಸಿದಾಗ, ಉತ್ತರಿಸಿದ ಜೂ. ಎನ್.ಟಿ.ಆರ್, ಇಲ್ಲ ಜೇಮ್ಸ್ ಸಿನಿಮಾವನ್ನು ಇನ್ನೂ ನೋಡಿಲ್ಲ ಎಂದು ಹೇಳಿದರು. ಇದೇ ಮಾರ್ಚ್ 25 ರಂದು ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಆರ್.ಆರ್.ಆರ್ ಸಿನಿಮಾ ಪ್ರಮೋಷನ್‍ಗೆ ಬೆಂಗಳೂರಿಗೆ ಬಂದಿದ್ದ ಅವರು, ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಇಲ್ಲ ನಾನು ಜೇಮ್ಸ್ ಸಿನಿಮಾ ನೋಡಲು ಸಮಯ ಸಿಕ್ಕಿಲ್ಲ! ನಾನು ನಮ್ಮ ನಿರ್ದೇಶಕರ ಜೊತೆ ಸಿನಿಮಾ ಪ್ರಮೋಷನ್ ಕಾರಣ ದೆಹಲಿ, ಹೈದ್ರಾಬಾದ್ ಎಂದು ನಿರತರಾಗಿದ್ದೆವು.

ಈ ಕಾರಣದಿಂದ ನಾನು ಇನ್ನೂ ನೋಡಿಲ್ಲ. ಅಪ್ಪು ಅವರ ಸಿನಿಮಾವನ್ನು ನೋಡಬೇಕು ಎಂದ್ರೆ ಆರಾಮಾಗಿ ಖುಷಿಯಿಂದ ನೋಡಬೇಕು ಬಿಟ್ಟರೇ, ಈ ರೀತಿ ಒತ್ತಡದಿಂದಲ್ಲ! ಹೀಗಾಗಿ ನಾನು ಇದನ್ನೆಲ್ಲಾ ಮುಗಿಸಿಕೊಂಡು ಆರಾಮಾಗಿ ನನ್ನ ಗೆಳೆಯ ಪುನೀತ್ ಅವರ ಜೇಮ್ಸ್ ಸಿನಿಮಾವನ್ನು ವಿಜೃಂಭಿಸಿ ನೋಡ್ತೀನಿ ಎಂದು ಹೇಳಿದರು. ಇದರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಎಲ್ಲೂ ಹೋಗಿಲ್ಲ, ಅವರು ನಮ್ಮ ಹೃದಯಗಳಲ್ಲಿ ನೆಲೆಸಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಗೆಳೆಯನನ್ನು ನೆನಪಿಸಿಕೊಂಡರು.

Exit mobile version