ಭ್ರಷ್ಟಾಚಾರ ಪ್ರಕರಣದಲ್ಲಿ ತಮಿಳುನಾಡು ಸಚಿವ ಕೆ ಪೊನ್ಮುಡಿ ದೋಷಿ : ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

Chennai: ಮಹತ್ವದ ಬೆಳವಣಿಗೆಯಲ್ಲಿ ಭ್ರಷ್ಟಾಚಾರ ಪ್ರಕರಣದ ಆರೋಪ ಎದುರಿಸುತ್ತಿದ್ದ ತಮಿಳುನಾಡು (K Ponmudi in Corruption Case) ಸಚಿವ ಕೆ ಪೊನ್ಮುಡಿ ಅವರನ್ನು ಮದ್ರಾಸ್

ಹೈಕೋರ್ಟ್ ದೋಷಿ ಎಂದು ಘೋಷಿಸಿದ್ದು, ಅವರ (K Ponmudi in Corruption Case) ಖುಲಾಸೆಯನ್ನು ರದ್ದುಗೊಳಿಸಿದೆ.

ಈ ಹಿಂದೆ ಜೂನ್ 28 ರಂದು, ತಮಿಳುನಾಡಿನ (Tamilnadu) ವೆಲ್ಲೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯವು ಪೊನ್ಮುಡಿ ಮತ್ತು ಅವರ ಪತ್ನಿಯನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು.

ಪ್ರಾಸಿಕ್ಯೂಷನ್ ಸಾಕಷ್ಟು ಸಾಕ್ಷ್ಯಗಳನ್ನು ನೀಡಲು ವಿಫಲವಾಗಿದೆ ಎಂದು ವೆಲ್ಲೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯವು ಹೇಳಿತ್ತು. ಆದರೆ ಮದ್ರಾಸ್ ಹೈಕೋರ್ಟ್ (Madras High court) ಇದೀಗ

ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ತಮಿಳುನಾಡು ಸಚಿವ ಕೆ ಪೊನ್ಮುಡಿ ಮತ್ತು ಅವರ ಪತ್ನಿಯನ್ನು ದೋಷಿ ಎಂದು ಘೋಷಿಸಿದ್ದು, ವಾರದ ನಂತರ ಶಿಕ್ಷೆಯನ್ನು

ಪ್ರಕಟಿಸಲಾಗುವುದು ಎಂದು ಹೇಳಿದೆ.

ಇನ್ನು ವೆಲ್ಲೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶೆ, ಎನ್ ವಸಂತಲೀಲಾ (N Vasanthaleela) ಅವರು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಮತ್ತು ಹಿರಿಯ ಡಿಎಂಕೆ ನಾಯಕ ಕೆ ಪೊನ್ಮುಡಿ ಮತ್ತು ಅವರ

ಪತ್ನಿಯನ್ನು ವಿಜಿಲೆನ್ಸ್ (Vigilance) ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ದಾಖಲಿಸಿದ ಅಕ್ರಮ ಆಸ್ತಿ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ತಮಿಳುನಾಡು ಸಚಿವ ಕೆ ಪೊನ್ಮುಡಿ ಮತ್ತು ಅವರ ಪತ್ನಿಯನ್ನು

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೂನ್ನಲ್ಲಿ ವೆಲ್ಲೂರಿನ ನ್ಯಾಯಾಲಯವು ಖುಲಾಸೆಗೊಳಿಸಿದ ನಂತರ ಅವರ ಖುಲಾಸೆಯ ಪರಿಷ್ಕರಣೆಯನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಳ್ಳಲು ಮದ್ರಾಸ್ ಹೈಕೋರ್ಟ್

ಆಗಸ್ಟ್ನಲ್ಲಿ (August) ನಿರ್ಧರಿಸಿತು.

1996-2001ರ ಅವಧಿಯಲ್ಲಿ ಆಗಿನ ಎಐಎಡಿಎಂಕೆ (AIADMK) ಸರ್ಕಾರ ಅಧಿಕಾರದಲ್ಲಿದ್ದಾಗ 2002ರಲ್ಲಿ ಪೊನ್ಮುಡಿ ಮತ್ತು ಅವರ ಪತ್ನಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಪ್ರಕರಣ

ದಾಖಲಿಸಲಾಗಿತ್ತು. ಪೊನ್ಮುಡಿ ಅವರು 1996-2001ರ ಅವಧಿಯಲ್ಲಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಅಕ್ರಮ ಸಂಪತ್ತು ಸಂಗ್ರಹಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ಆರೋಪಿಸಿತ್ತು.

ಸುದಿರ್ಘ ವಿಚಾರಣೆಯ ನಂತರ ಇದೀಗ ಮಾಜಿ ಸಚಿವನನ್ನು ದೋಷಿ ಎಂದು ನಿರ್ಧರಿಸಲಾಗಿದೆ. ಇನ್ನೊಂದೆಡೆ ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಕೆ ಪೊನ್ಮುಡಿ

ನಿರ್ಧರಿಸಿದ್ದಾರೆ.

ಇದನ್ನು ಓದಿ: ಈ ದೇಶದ ಯುವಕರು ಹೇಗೆ ಪ್ರತಿಭಟಿಸಬೇಕು: ನಟ ಕಿಶೋರ್ ಕುಮಾರ್ ಹುಲಿ ಪ್ರಶ್ನೆ

Exit mobile version