• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಈ ವಾರ ತೆರೆಗೆ ‘ಕಲಿವೀರ’

Sharadhi by Sharadhi
in ಮನರಂಜನೆ
ಈ ವಾರ ತೆರೆಗೆ ‘ಕಲಿವೀರ’
0
SHARES
0
VIEWS
Share on FacebookShare on Twitter

ಟ್ರೇಲರ್ ಮೂಲಕ ಸುದ್ದಿಯಾಗಿದ್ದ ಸಿನಿಮಾ ‘ಕಲಿವೀರ’ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರ ತಂಡ ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಂಡ ವಿವರಗಳು ಇಲ್ಲಿವೆ.

“ಸಾಲು ಸಾಲು ಚಿತ್ರಗಳ ನಡುವೆ ತಡವಾಗಿ ಬಂದರೆ ಕುರಿಯಂತೆ ಕಳೆದು ಹೋಗುವ ಸಾಧ್ಯತೆ ಇದೆ. ಹಾಗಾಗಿ ಅನಿಶ್ಚಿತತೆಯ ನಡುವೆ ಮೊದಲು ರಂಗಕ್ಕೆ ಇಳಿಯುವವನೇ ಧೈರ್ಯವಂತ. ಆ ಧೈರ್ಯವನ್ನು ನಾವು ಮಾಡಿದ್ದೇವೆ” ಎಂದರು ಚಿತ್ರದ ನಿರ್ದೇಶಕ ಅವಿ. ಕಲಿವೀರವನ್ನು ರಚಿಸಿ, ನಿರ್ದೇಶಿಸಿರುವ ಅವರಿಗೆ ಕೋವಿಡ್ ಕಾಲಘಟ್ಟದಿಂದಾಗಿ ಹೆಚ್ಚು ಕಾಯುವುದು ಇನ್ನಷ್ಟು ಅಪಾಯಕಾರಿಯಾದೀತು ಎನ್ನುವ ಆತಂಕ ಮೂಡಿಸಿದೆ. ಮಾತ್ರವಲ್ಲ ಒಟಿಟಿಯವರು ಕೂಡ ನಿರೀಕ್ಷಿತ ಮೊತ್ತಕ್ಕೆ ಒಪ್ಪದೇ ಇರುವುದು ಕೂಡ ಅವರಿಗೆ ಚಿತ್ರವನ್ನು ಥಿಯೇಟರಲ್ಲಿಯೇ ತರಬೇಕೆನ್ನುವ ಹಠ ಮೂಡಿಸಿದೆ ಎಂದರು.

“ಇದು ನನ್ನ ಮೊದಲ ಸಿನಿಮಾ. ಇಂಥ ದೊಡ್ಡ ಕ್ಷೇತ್ರ, ಸಿನಿಮಾ ನಾಯಕನ ಪಾತ್ರ ನನಗೆ ಸಿಗಬಹುದೆನ್ನುವ ನಿರೀಕ್ಷೆ ನಮಗೆ ಇರಲಿಲ್ಲ. ಆದರೆ ಎಲ್ಲವೂ ದೊರಕಿದೆ. ಚಿತ್ರ ನೋಡಿ ಪ್ರೇಕ್ಷಕರೂ ಮೆಚ್ಚುವಂತಾದರೆ ತುಂಬಾನೇ ಖುಷಿಯಾಗುತ್ತದೆ. ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಇದೊಂದು‌ ಪ್ರಯೋಗದ ಹಾಗೆ ಅನಿಸುತ್ತಿದೆ. ಈ ಪ್ರಯೋಗ ಯಶಸ್ವಿಯಾಗಲು ಕರ್ನಾಟಕದ ಜನರ ಪ್ರೀತಿ ಬೇಕಾಗಿದೆ” ಎಂದರು ಚಿತ್ರದ ನಾಯಕ ಏಕಲವ್ಯ. ಚಿತ್ರದಲ್ಲಿ ಏಕಲವ್ಯ ಅವರು ಆದಿವಾಸಿ ಜನಾಂಗದ ಯುವಕನ ಪಾತ್ರ ಮಾಡಿದ್ದಾರೆ. ತನ್ನ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ತಿರುಗಿ ನಿಂತು ಹೋರಾಡುವ ಯುವಕನ ಕತೆ ಈ ಚಿತ್ರದ್ದು. ಆ ಯುವಕನ ವರ್ತನೆ, ಸಾಹಸ ಮತ್ತು ಚಿತ್ರೀಕರಿಸಿರುವ ರೀತಿಗಳೇ ‘ಕಲಿವೀರ’ದ ಹೈಲೈಟ್.

ಚಿತ್ರದಲ್ಲಿ ಕಲಿವೀರನ‌ ಜೋಡಿಯಾಗಿ ಕಾಣಿಸಿರುವ ಚಿರಶ್ರೀ ಅಂಚನ್ ಮಾತನಾಡಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವಂತೆ ಕೇಳಿಕೊಂಡರು.
“ಒಳ್ಳೆಯ ಸಿನಿಮಾ ಬಂದಾಗ ಜನ ಖಂಡಿತ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಚಿತ್ರವನ್ನು ಕೂಡ ಮೆಚ್ಚಿ ಬರುತ್ತಾರೆ ಎಂದು ಚಿತ್ರ ಯಶಸ್ವಿಯಾಗುವ ಭರವಸೆಯನ್ನು ಚಿತ್ರದ ನಾಯಕಿ ಪಾವನಾ ಗೌಡ ವ್ಯಕ್ತಪಡಿಸಿದರು.

ಅತಿಥಿಯಾಗಿ ಆಗಮಿಸಿದ್ದ ಚಿತ್ರತಂಡದ ಹಿತೈಷಿ ಹಾಗೂ ವಾಣಿಜ್ಯ ಮಂಡಳಿಯ ಕಾರ್ಯದರ್ಶಿಯೂ ಆಗಿರುವ ಉಮೇಶ್ ಬಣಕಾರ್ ಸೇರಿದಂತೆ ಚಿತ್ರದ ಹಂಚಿಕೆದಾರ ವಿಜಯ್ ಶ್ರೀನಿವಾಸ್ ಕೂಡ ‘ಚಿತ್ರವನ್ನು ಈಗ ಬಿಡುಗಡೆಗೊಳಿಸುವುದು ರಿಸ್ಕ್’ ಎಂದು‌ ಸೂಚಿಸಿದರೂ ನಿರ್ಮಾಪಕ ಶ್ರೀನಿವಾಸ್ ಕೆಎಂಪಿಯವರು ಚಿತ್ರ ಬಿಡುಗಡೆಗೊಳಿಸುವುದೇ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ
ಹಂಚಿಕೆದಾರ ವಿಜಯ್ ಶ್ರೀನಿವಾಸ್ ,
ನಿರ್ಮಾಪಕ ರಾಜು ಪೂಜಾರ್,
ಬಸಪ್ಪಣ್ಣ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

ಸಾಕಷ್ಟು ಸಾಹಸ ದೃಶ್ಯಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ಟಿ.ಎಸ್ ನಾಗಾಭರಣ, ನೀನಾಸಂ ಅಶ್ವಥ್, ರಾಕ್ಲೈನ್ ಸುಧಾಕರ್, ರಮೇಶ್ ಪಂಡಿತ್, ಮೋಹನ್ ಜುನೇಜಾ, ಅನಿತಾ ಭಟ್, ಡ್ಯಾನಿ‌ ಕುಟ್ಟಪ್ಪ, ಮುನಿ, ಸುರೇಶ್ ಚಂದ್ರ ಮೊದಲಾದವರು ನಟಿಸಿರುವುದು ಗಮನಾರ್ಹ. ಇದೇ ಶುಕ್ರವಾರ ಆಗಸ್ಟ್ 6ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

Related News

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ
Vijaya Time

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

May 30, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 30, 2023
ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Sports

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

May 26, 2023
ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​
ಪ್ರಮುಖ ಸುದ್ದಿ

ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​

May 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.