ರಾಜ ರಾಜ ಚೋಳನ ಕಾಲದಲ್ಲಿ ‘ಹಿಂದೂ’ ಎಂಬ ಪದವೇ ಇರಲಿಲ್ಲ ; ವಿವಾದ ಸೃಷ್ಟಿಸಿದ ಕಮಲ್ ಹಾಸನ್ ಹೇಳಿಕೆ!

Chola

Chennai : ಸೆಪ್ಟೆಂಬರ್ 30ರಂದು ‘ಪೊನ್ನಿಯಿನ್ ಸೆಲ್ವನ್’ (Ponniyan Selvan) ಸಿನಿಮಾ (Cinema) ಬಿಡುಗಡೆಯಾಗಿದೆ, ಈ ಚಿತ್ರವನ್ನು ಮಣಿರತ್ನಂ (Manirathnam) ನಿರ್ದೇಶನ ಮಾಡಿದ್ದಾರೆ.

ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ತ್ರಿಷಾ, ಜಯಂ ರವಿ, ಕಾರ್ತಿ ಮುಂತಾದವರು ನಟಿಸಿದ್ದಾರೆ.

ಚೋಳರ ಇತಿಹಾಸವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ.

ಆದರೆ, ಚಿತ್ರ ಬಿಡುಗಡೆಯಾದ ಕೇವಲ ಒಂದು (Kamal Hassan Controversial Statement) ದಿನದ ನಂತರ ವೇಟ್ರಿಮಾರನ್‌ ಅವರ ಹೇಳಿಕೆಯೊಂದು ವಿವಾದ ಸೃಷ್ಟಿಸಿದೆ.

ಹೌದು, ಚಿತ್ರ ಬಿಡುಗಡೆ ಆದ ಬಳಿಕ ವೆಟ್ರಿಮಾರನ್ ಅವರು ಹೀಗೆ ಹೇಳಿಕೆ ನೀಡಿದ್ದು, ಪರ-ವಿರೋಧದ ಚರ್ಚೆಗೆ ಕಾರಣ ಆಗಿದೆ.


ಅಷ್ಟಕ್ಕೂ ಅವರು ನೀಡಿದ ಹೇಳಿಕೆ ಹೀಗಿದೆ, “ನಿರಂತರವಾಗಿ, ನಮ್ಮ ಚಿಹ್ನೆಗಳನ್ನು ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ತಿರುವಳ್ಳುವರನ್ನು ಕೇಸರಿಕರಣ ಮಾಡುವುದು ಅಥವಾ ರಾಜ ರಾಜ ಚೋಳನನ್ನು ಹಿಂದೂ ರಾಜ ಎಂದು ಕರೆಯುವುದು ನಿರಂತರವಾಗಿ ನಡೆಯುತ್ತಿದೆ.

ಇದನ್ನೂ ಓದಿ : https://vijayatimes.com/dk-shivkumar-appeared-to-ed/

ಸಿನಿಮಾ ಸಾಮಾನ್ಯರ ಮಾಧ್ಯಮವಾಗಿರುವುದರಿಂದ ಪ್ರಾತಿನಿಧ್ಯವನ್ನು ರಕ್ಷಿಸಲು ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ,” ಎಂದು ನಿರ್ದೇಶಕ ವೆಟ್ರಿಮಾರನ್ ಎಚ್ಚರಿಸಿದ್ದರು. ಇದೀಗ, ಈ ಚರ್ಚೆಯಲ್ಲಿ ನಟ ಕಮಲ್ ಹಾಸನ್(Kamal Hassan) ಅವರ ಎಂಟ್ರಿ ಕೂಡ ಆಗಿದೆ.

ವೆಟ್ರಿಮಾರನ್ ಹೇಳಿಕೆಯನ್ನು ಕಮಲ್ ಬೆಂಬಲಿಸಿದ್ದಾರೆ. “ರಾಜ ರಾಜ ಚೋಳನ ಕಾಲದಲ್ಲಿ ಹಿಂದೂ ಎಂಬ ಪದವೇ (Kamal Hassan Controversial Statement) ಇರಲಿಲ್ಲ.

ಹಿಂದೂ ಅಂತ ಕರೆದಿದ್ದು ಬ್ರಿಟಿಷರು” ಎಂದಿರುವ ಕಮಲ್ ಹಾಸನ್ ಅವರು, “8ನೇ ಶತಮಾನದಲ್ಲಿ ಹಲವು ಧರ್ಮಗಳು ಇದ್ದವು, ರಾಜ ರಾಜ ಚೋಳನ ಕಾಲದಲ್ಲಿ ‘ಹಿಂದೂ ಧರ್ಮ’ ಎಂಬ ಹೆಸರಿರಲಿಲ್ಲ.

ವೈಣವಂ, ಶಿವಂ ಮತ್ತು ಸಮಾನಂಗಳಿದ್ದವು. ಈ ಪದಗಳನ್ನು ಬಳಸುವುದು ಹೇಗೆಂದು ತಿಳಿಯದೆ ಅವರು ಹಿಂದೂ ಎಂದರು.

ಅವರು ತುತ್ತುಕುಡಿಯನ್ನು ಟುಟಿಕೋರಿನ್(Tuticorn) ಆಗಿ ಬದಲಾಯಿಸಿದಂತೆಯೇ ಇದನ್ನೂ ಬದಲಾಯಿಸಿದ್ದಾರೆ” ಎಂದು ಕಮಲ್ ಹಾಸನ್ ಹೇಳಿದ್ದಾರೆ. ಬ್ರಿಟಿಷರೇ ‘ಹಿಂದೂ’ ಎಂಬ ಪದವನ್ನು ಸೃಷ್ಟಿಸಿದರು ಎಂದಿದ್ದಾರೆ.

https://fb.watch/f-wTqE-Zvk/ ಬೋನಿಗೆ ಬಿದ್ದ ಚಿರತೆ!


ತಾರಾಗಣ ಮತ್ತು ಸಿಬ್ಬಂದಿಯೊಂದಿಗೆ ಪೊನ್ನಿಯಿನ್ ಸೆಲ್ವನ್ ವೀಕ್ಷಿಸಿದ ಕಮಲ್ ಹಾಸನ್, “ಇತಿಹಾಸವನ್ನು ಆಧರಿಸಿದ ಕಾಲ್ಪನಿಕ ಕಥೆಯನ್ನು ಆಚರಿಸಲು ಈ ಕ್ಷಣವನ್ನು ಬಳಸಿಕೊಳ್ಳಿ” ಎಂದು ವಿನಂತಿಸಿದ್ದಾರೆ.

“ಇತಿಹಾಸವನ್ನು ಉತ್ಪ್ರೇಕ್ಷಿಸಬೇಡಿ ಅಥವಾ ತಿರುಚಬೇಡಿ ಅಥವಾ ಭಾಷೆಯ ಸಮಸ್ಯೆಗಳನ್ನು ಇದರಲ್ಲಿ ತರಬೇಡಿ” ಎಂದು ಕಮಲ್ ಹಾಸನ್ ಹೇಳಿದ್ದಾರೆ.
Exit mobile version