ಪೆ. 12ಕ್ಕೆ ‘ಕನಸು ಮಾರಾಟಕ್ಕಿದೆ’

ಬೆಂಗಳೂರು, ಜ. 29: ಬಿಡುಗಡೆಗೆ ಸಿದ್ಧವಾಗಿದೆ ಸ್ಮಿತೇಶ್ ಎಸ್. ಬಾರ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕನಸು ಮಾರಾಟಕ್ಕಿದೆ’ ಎಂಬ ಚಿತ್ರ. ಈ ಚಿತ್ರದಲ್ಲಿ ಹೊಸಬರ ಪ್ರಯತ್ನವಿದೆ ಹಾಗೂ ಈ ಚಿತ್ರವನ್ನು ಫೆಬ್ರವರಿ 12ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.

ಪ್ರಜ್ಞೇಶ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ, ನವ್ಯ ಪೂಜಾರಿ ಹಾಗೂ ಸ್ವಸ್ತಿಕಾ ಪೂಜಾರಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಕಲಾವಿದರಾದ ಚಿದಂಬರ, ಸೂರ್ಯ, ಗೋವಿಂದೇಗೌಡ ಹಾಗೂ ಧೀರಜ್ ಸೇರಿದಂತೆ ಹಿರಿಯ ಕಲಾವಿದ ಸಿದ್ಲಿಂಗು ಶ್ರೀಧರ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version