CBSE, ICSE ಶಾಲೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಬೋಧನೆ ಕಡ್ಡಾಯಗೊಳಿಸಿದ ಸರ್ಕಾರ.

Bengaluru: ಬೆಂಗಳೂರಿನ (Bengaluru) ಕೆಲವು ಖಾಸಗಿ ಶಾಲೆಗಳಲ್ಲಿ ಕನ್ನಡ ತೃತೀಯ ಭಾಷೆಯಾಗಿತ್ತು. ಹಲವಾರು ಮಕ್ಕಳು ಕನ್ನಡ ಕಲಿಯದೆ ತಾತ್ಸಾರ ಮನೋಭಾವ ಬೆಳೆಸಿಕೊಂಡಿದ್ದರು.ಇದರೊಂದಿಗೆ ಕನ್ನಡ ಕಡ್ಡಾಯ ಬೋಧನೆ ಬೇಡ ಎನ್ನುವ ಪಾಲಕರ ದೂರು ಸಹ ಕೇಳಿ ಬಂದಿತ್ತು.ಆದರೆ ಇದೀಗ ರಾಜ್ಯಾದ್ಯಂತ ಈವರೆಗೆ ಕನ್ನಡವನ್ನು ತೃತೀಯ ಭಾಷೆಯಾಗಿ ಬೋಧನೆ ಮಾಡಲು ಅವಕಾಶ ನೀಡಿದ್ದ ನಿಯಮಾವಳಿ ತಿದ್ದುಪಡಿ ಮಾಡಿ ಮೇಲ್ದರ್ಜೇರಿಸಿದ ಸರ್ಕಾರ ಎಲ್ಲ ಸಿಬಿಎಸ್‌ಇ, ಐಸಿಎಸ್‌ಇ (CBSE, ICSE) ಶಾಲೆಗಳನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಕಡ್ಡಾಯ ಬೋಧನೆ ಮಾಡುವಂತೆ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಶಿಕ್ಷಣ ಪ್ರಸಾರ ಮಾಡುತ್ತಿರುವ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಸಿಬಿಎಸ್ ಇ ಶಾಲೆ ಮಕ್ಕಳಿಗೆ ಶಾಲೆ ಮಕ್ಕಳಿಗೆ ‌ಕನ್ನಡ ಭಾಷೆ ಕಡ್ಡಾಯಗೊಳಿಸಲಾಗಿದೆ. ಪ್ರಥಮ, ದ್ವಿತೀಯ ಭಾಷೆಯಾಗಿ ಕನ್ನಡ (Kannada Language) ಬೋಧನೆ  ಕಡ್ಡಾಯಗೊಳಿಸಲಾಗಿದೆ.

ಈ ಕುರಿತು ರಾಜ್ಯದ ಎಲ್ಲ ಶಾಲೆಗಳಿಗೆ #Schools ಸರ್ಕಾರದಿಂದ ರಾಜ್ಯಪತ್ರದ ಮೂಲಕ ಆದೇಶ ಹೊರಡಿಸಲಾಗಿದೆ. ಸಿಬಿಎಸ್‌ಇ, ಐಸಿಎಸ್ಇ ಹಾಗೂ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಗೆ ರಾಜ್ಯ ಪತ್ರ ಹೊರಡಿಸಿದೆ. ಕನ್ನಡವನ್ನ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.

ಇನ್ನು ಬಹಳ ಹಿಂದೆಯೇ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ‌ಕನ್ನಡ ಭಾಷೆ ಬೋಧನೆ ಮಾಡಬೇಕೆಂದು ನಿಯಮವಿದ್ದರೂ, ಅನೇಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ತ್ರಿಭಾಷಾ ಸೂತ್ರ ಅಥವಾ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡು ಪಠ್ಯವನ್ನು ಬೋಧನೆ ಮಾಡಲಾಗುತ್ತಿತ್ತು. ಆದರೆ, ಕನ್ನಡ ಭಾಷೆಯನ್ನು ಬೋಧನಾ ವಿಷಯವನ್ನಾಗಿ ಅಳವಡಿಕೆ ಮಾಡಿಕೊಂಡಿರಲಿಲ್ಲ.

ಇನ್ನು ಸರ್ಕಾರದ ನಿಯಮ ಇತ್ತಾದರೂ ಇದನ್ನ ಯಾರು ಸಹಾ ಪಾಲನೆ ಮಾಡುತ್ತಿರಲಿಲ್ಲ. ಇದೀಗ ಅಧಿಕೃತವಾಗಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿ ಆದೇಶ ಹೊರಡಿಸಿದ್ದು, ಕನ್ನಡ ಭಾಷೆ ಬೋಧನೆ ಮಾಡದ ಶಾಲೆಗಳ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳಬಹುದಾಗಿದೆ.

Exit mobile version