ಕಾಂತಾರ ಕೃತಿಚೌರ್ಯ ಆರೋಪ ; ಚಿತ್ರ ಬಿಡುಗಡೆಗೂ ಮುನ್ನ ಕ್ರೆಡಿಟ್ಸ್ ಕೊಟ್ಟಿದ್ರೆ ಪರವಾಗಿರಲಿಲ್ಲ

ಹಿಂದೂಸ್ಥಾನ್ ಟೈಮ್ಸ್(Hindustan Times) ಪತ್ರಿಕೆ ನೀಡಿರುವ ವರದಿ ಅನುಸಾರ, ಕನ್ನಡದ ಬ್ಲಾಕ್ ಬಸ್ಟರ್ ಚಲನಚಿತ್ರ ಕಾಂತಾರ(Kantara Song Controversy) ಇದೀಗ ದೇಶದೆಲ್ಲೆಡೆ ವ್ಯಾಪಕ ಬೆಂಬಲ ಪಡೆದು, ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೆ, ಇತ್ತೀಚೆಗೆ ಕೇರಳ ಮೂಲದ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್(Thaikkudum Bridge) ತಂಡ, ಕಾಂತಾರ ಚಿತ್ರತಂಡದ ಮೇಲೆ ತಮ್ಮ ಮ್ಯೂಸಿಕ್ ಟ್ರ್ಯಾಕ್ ಕದ್ದ ಆರೋಪ ವ್ಯಕ್ತಪಡಿಸಿತ್ತು.

ಕಾಂತಾರ ಚಿತ್ರದಲ್ಲಿನ ವರಾಹ ರೂಪಂ ಹಾಡಿನಲ್ಲಿ ಕೇರಳದ(Kantara Song Controversy) ತೈಕ್ಕುಡಂ ಬ್ರಿಡ್ಜ್ ಸಂಸ್ಥೆ ನಮ್ಮ ನವರಸಂ ಹಾಡನ್ನು ಕಾಂತಾರ ಸಿನಿಮಾದ ನಿರ್ಮಾಪಕರು, ಸಂಗೀತ ನಿರ್ದೇಶಕರು ಕೃತಿಚೌರ್ಯ ಮಾಡಿದ್ದಾರೆ ಎಂದು ಆರೋಪಿಸಿ ವಿವಾದವನ್ನು ಹುಟ್ಟುಹಾಕಿತು.

ವಿವಾದ ದಿನೇ ದಿನೇ ಹೆಚ್ಚಿದ ಬೆನ್ನಲ್ಲೇ, ಕೋಝಿಕ್ಕೋಡ್ ಜಿಲ್ಲಾ ಸೆಷನ್ಸ್ ನ್ಯಾಯಾಲಯದ(Kozikhode Court) ಮೊರೆ ಹೋಗಿ, ನ್ಯಾಯಾಲಯ ಮುಖೇನ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿತು.

ತಮ್ಮ ಬ್ಯಾಂಡ್‌ನ ಅನುಮತಿಯಿಲ್ಲದೆ ಸಿನಿಮಾದಲ್ಲಿ ಹಾಗೂ ಇತರೆ ಮ್ಯೂಸಿಕ್ ಆ್ಯಪ್ ನಲ್ಲಿ ಹಾಡನ್ನು ನುಡಿಸುವಂತಿಲ್ಲ,

ನುಡಿಸುವುದಕ್ಕೆ ಕೋಯಿಕೋಡ್ ನ್ಯಾಯಲಯದಿಂದ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ. ಇನ್ನು ಈ ವಿವಾದದ ಕುರಿತು ಸ್ವತಃ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‌ನ ಬೇಸ್ ಗಾಯಕ ವಿಯಾನ್ ಫೆರ್ನಾಂಡಿಸ್ ಮಾತನಾಡಿದ್ದು,

https://youtu.be/7ITwpBTJQm4 ಭ್ರಷ್ಟರ ಬೇಟೆ. ಬಡವರ ಅನ್ನಕ್ಕೆ ಕನ್ನ ಹಾಕೋ ದುಷ್ಟರ ಬೇಟೆ.

“ಈಗ ಅತೀ ಮುಖ್ಯವಾದದು ನ್ಯಾಯಾಲಯದಿಂದ ಆದೇಶವನ್ನು ಸ್ವೀಕರಿಸಿದ ನಂತರ ಕಾಂತಾರ ಚಿತ್ರತಂಡವು ತೆಗೆದುಕೊಳ್ಳುವ ಮುಂದಿನ ಹೆಜ್ಜೆ ಏನು ಎಂಬುದಾಗಿದೆ.

ನಮ್ಮ ಬ್ಯಾಂಡ್‌ನ ಉದ್ದೇಶ ಇಷ್ಟೇ, ನಮಗೆ ದೊರೆಕಬೇಕಾದ ಕ್ರೆಡಿಟ್‌ಗಳು ನಮಗೆ ಕೊಡಬೇಕು, ಅದು ನಮ್ಮ ಹಕ್ಕು! ಅವರು ನಮಗೆ ಕ್ರೆಡಿಟ್ಸ್ ಕೊಟ್ಟು ತದನಂತರ ಅವರ ಸಿನಿಮಾದಲ್ಲಿ ಹಾಡನ್ನು ಬಳಸಿಕೊಳ್ಳಲ್ಲಿ ಎಂದು ಫರ್ನಾಂಡಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ವತಂತ್ರ ಬ್ಯಾಂಡ್ ಆಗಿ ನಿರ್ಮಾಣಗೊಂಡ ನಾವು, ದೊಡ್ಡ ನಿರ್ಮಾಣ ಸಂಸ್ಥೆಯೊಂದಿಗೆ ಹೋರಾಡುತ್ತಿರುವುದು ಇದೇ ಮೊದಲು! ಹೊಂಬಾಳೆ ಫಿಲಂಸ್(Hombale Films) ತಮ್ಮಲ್ಲಿರುವ ಕೈಗೆಟುಕುವಿಕೆ, ಅಧಿಕಾರ ಮತ್ತು ಹಣದಿಂದ ಈ ಆರೋಪದಿಂದ ಪಾರಾಗಬಹುದು ಎಂದು ಭಾವಿಸಿದ್ದಾರೆ.

ಆದ್ರೆ, ನಾವು ಇದನ್ನು ಸಾಮಾನ್ಯ ವಿಷಯವಾಗಿ ಪರಿಗಣಿಸದೇ, ಸೂಕ್ತ ನಿರ್ಧಾರದೊಂದಿಗೆ ಹೆಜ್ಜೆ ಹಾಕಿದ್ದೇವೆ ಎಂಬ ತೃಪ್ತಿ ನಮಗಿದೆ.

ಎರಡು ಹಾಡುಗಳಲ್ಲಿನ ಸಾಮ್ಯತೆಗಳನ್ನು ಕೇಳುಗರು ಈ ಮೊದಲು ಗಮನಿಸಿದ್ದಾರೆ. ಆರಂಭದಲ್ಲಿ, ನಮಗೆ ಇದರ ಬಗ್ಗೆ ಯಾವುದೇ ಅರಿವಿರಲಿಲ್ಲ.

ನಮ್ಮ ತಂಡಕ್ಕಿದ್ದ ಅನುಯಾಯಿಗಳು ಕಾಂತಾರ ಚಿತ್ರದ ಹಾಡನ್ನು ಆಲಿಸಿ, ಸಾಮ್ಯತೆಗಳನ್ನು ಹೊಂದಿರುವ ಬಗ್ಗೆ ಪತ್ತೆಹಚ್ಚಿದ್ದಾರೆ. ಪತ್ತೆಹಚ್ಚಿದ ಬಳಿಕ ಅನೇಕ ಕರೆ ಮತ್ತು ಸಂದೇಶಗಳು ನಮ್ಮ ತಂಡವನ್ನು ಕಾಡತೊಡಗಿತು.

ನಮ್ಮ ತಂಡ ಸಂಯೋಜಿಸಿ ಮಾಡಿದ್ದ ಹಾಡನ್ನು ಕೃತಿಚೌರ್ಯ ಮಾಡಿರುವುದು ತಿಳಿದುಬಂದಿತು.

ಇದನ್ನೂ ಓದಿ : https://vijayatimes.com/rishab-shetty-trolled/

ವಾಸ್ತವವಾಗಿ, ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ವೀಡಿಯೊಗೆ ಬಂದಿದ್ದ ಸಾವಿರಾರು ಕಾಮೆಂಟ್‌ಗಳನ್ನು ಚಿತ್ರತಂಡ ಅಳಿಸಿ ಹಾಕಿದೆ.

ನಾವು ಅನೇಕ ಬಾರಿ ಅವರ ಹಾಡನ್ನು ಆಲಿಸಿದ್ದೇವೆ ಮತ್ತು ಸಾಮ್ಯತೆಗಳನ್ನು ಖಚಿತಪಡಿಸಿಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಸದ್ಯ ನಾವು ಅವರ ತಂಡಕ್ಕೆ ಇನ್ನೂ ಕಾಲಾವಕಾಶ ನೀಡಿದ್ದೇವೆ.

ಕಾನೂನು ಮಾರ್ಗದಲ್ಲಿ ಹೋರಾಟ ಮಾಡುತ್ತಿದ್ದೇವೆ, ಕಾಂತಾದ ಚಿತ್ರದ ಸಂಗೀತ ನಿರ್ದೇಶಕರಾದ ಬಿ.

ಅಜನೀಶ್ ಲೋಕನಾಥ್ ಅವರು ನಮ್ಮ ಬ್ಯಾಂಡ್‌ನ ಸ್ಥಾಪಕ ಸದಸ್ಯರೊಬ್ಬರಲ್ಲಿ ಒಬ್ಬರಾದ ಗೋವಿಂದ್ ವಸಂತ ಅವರನ್ನು ತಲುಪಿ ಮಾತನಾಡಿದ್ದಾರೆ. ನಮ್ಮ ಮ್ಯಾನೇಜ್ ಮೆಂಟ್ ಈಗಾಗಲೇ ಕಾಂತಾರ ಚಿತ್ರತಂಡಕ್ಕೆ ವಾರ್ನಿಂಗ್ ನೀಡಿದೆ.

ಆ ಬಳಿಕ ಚಿತ್ರತಂಡ ವಿಡಿಯೋ ಒಂದನ್ನು ತೆಗೆದು ಹಾಕಿದೆ. ಆದರೆ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಚಾನಲ್‌ನಲ್ಲಿ ಮತ್ತೊಂದು ವೀಡಿಯೊ ಇನ್ನೂ ಸಕ್ರಿಯವಾಗಿದೆ.

ಅದರಲ್ಲಿ ಅವರು ಕೆಲ ಕಾಮೆಂಟ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂತಾರ ಬಿಡುಗಡೆಗೂ ಮುನ್ನ ನಮ್ಮ ಜೊತೆ ಮಾತನಾಡಿ ನಮ್ಮ ಬ್ಯಾಂಡ್‌ಗೆ ಕ್ರೆಡಿಟ್ ಕೊಟ್ಟಿದ್ದರೆ ನಾವು ಅವರನ್ನು ಪ್ರಶ್ನಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

Exit mobile version