ತುಳು ಭಾಷೆಯಲ್ಲಿ ಕಾಂತಾರ ; ಸಂತಸಪಟ್ಟ ತುಳುನಾಡ ಜನತೆ

Bangalore : ಕಾಂತಾರ (kantara tulu language) ಸಿನಿಮಾ ಈಗಾಗಲೇ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಭರ್ಜರಿ ಸದ್ದು ಮಾಡಿದೆ. ಈಗಲೂ ಬಾಲಿವುಡ್ನಲ್ಲಿ ಕೆಲ ಥಿಯೇಟರ್ ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಇದುವರೆಗೂ ಕನ್ನಡ ,ಹಿಂದಿ, ತೆಲುಗು, ತಮಿಳು, ಮಲಯಾಳಂ ಐದು (kantara tulu language) ಭಾಷೆಗಳು ಸ್ಯಾಂಡಲ್ ವುಡ್ ನ ಪ್ಯಾನ್ ಇಂಡಿಯಾ ಸಿನಿಮವಾಗಿತ್ತು.

ಆದರೆ ಇದೀಗ ಹೊಸದಾಗಿ ರಿಷಬ್ ಶೆಟ್ಟಿಯವರು (Rishab shetty) ಕಾಂತಾರ ಸಿನಿಮಾವನ್ನು ತುಳು ಭಾಷೆಯಲ್ಲೂ ಡಬ್ ಮಾಡಿ ಒಟ್ಟು ಆರು ಭಾಷೆಯನ್ನು ಫ್ಯಾನ್ ಇಂಡಿಯಾ ಸಿನಿಮಾವನ್ನಾಗಿಸಿದ ಹೆಗ್ಗಳಿಕೆ ಕನ್ನಡ ಚಿತ್ರರಂಗಕ್ಕೆ ಇದೆ.

ತುಳುನಾಡಿನ ಜನರು ತಮ್ಮ ಸಂಸ್ಕೃತಿ ಹಾಗೂ ಆಚರಣೆಯ ಜೊತೆಗೆ ಭೂತಾರಾದೆನೆಗೆ ಮೇಲು ಪಂಕ್ತಿಯಲ್ಲಿ ಉನ್ನತ ಮಟ್ಟದ ಸ್ಥಾನವನ್ನು ಕೊಟ್ಟಿದ್ದಾರೆ.

ಆದ್ದರಿಂದ ಕಾಂತಾರ ಸಿನಿಮಾವನ್ನು ತುಳುನಾಡಿನ ಜನರು ತಮ್ಮ ನಾಡಿನ ಸಂಸ್ಕೃತಿಯನ್ನು ತಮ್ಮದೇ ಆದ ಭಾಷೆಯಲ್ಲಿ ಸಿನಿಮಾ ನೋಡಲು ಆತುರದಿಂದ ಕಾಯುತ್ತಿದ್ದಾರೆ.

ಹೊಂಬಾಳೆ ಫಿಲ್ಮ್ಸ್(Hombale films) ತಂಡ ಕಾಂತಾರದ ಮೂಲಕ ತುಳು ನಾಡಿನ ದೈವಕೋಲದ ಆಚರಣೆಯ ಬಗ್ಗೆ ವಿಶ್ವಾದ್ಯಂತ ಜನರಿಗೆ ಇನ್ನಷ್ಟು ಬಗ್ಗೆ ತಿಳಿಸಿಕೊಟ್ಟಿದೆ.

ಇದನ್ನೂ ಓದಿ : https://vijayatimes.com/cctv-cameras-are-safety/

ಮಂಗಳೂರು, ಉಡುಪಿ, ಮೈಸೂರು, ಚಿಕ್ಕಮಂಗಳೂರು, ಉತ್ತರ ಕನ್ನಡ ಜಿಲ್ಲೆ ಹಾಗೂ ಬೆಂಗಳೂರು ಸೇರಿದಂತೆ ಒಟ್ಟು 54 ಥಿಯೇಟರ್ ಗಳಲ್ಲಿ ತುಳು ಭಾಷೆಯಲ್ಲಿ ಕಾಂತಾರ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಕಾಂತಾರ ಸಿನಿಮಾ ದೈವದ ಶಕ್ತಿಯಿಂದಲೇ ಇಷ್ಟೊಂದು ಯಶಸ್ವಿ ಆಗಲು ಸಾಧ್ಯ.

ದೈವವನ್ನು ನಂಬದೇ ಇರುವವರು ಯಾರು ತಪ್ಪಾಗಿ ಪ್ರಶ್ನೆಗಳನ್ನು ಎಂದಿಗೂ ಮಾಡಬೇಡಿ ಎಂದು ರಿಷಬ್ ಶೆಟ್ಟಿ ಈಗಾಗಲೇ ಹೇಳಿಕೊಂಡಿದ್ದಾರೆ.

ಕಾಂತಾರಾ ಸಿನಿಮಾ ದೇಶ ವಿದೇಶದಲ್ಲೂ ಸಂಚಲನ ಸೃಷ್ಟಿಸಿರುವುದರ ಜೊತೆಗೆ ಪರಭಾಷೆಯಲ್ಲೂ ಮೋಡಿ ಮಾಡಿದ ಈ ಎಲ್ಲಾ ಹೆಗ್ಗಳಿಕೆ ಕನ್ನಡ ಸಿನಿಮಾ ರಂಗಕ್ಕಿದೆ.

ತುಳು ನಾಡಿನ ಜನರು ತಮ್ಮ ಭಾಷೆಯಲ್ಲಿ ಈ ಸಿನಿಮಾ ನೋಡಲು ಆಪೇಕ್ಷ ಪಟ್ಟಿದ್ದರಿಂದ ನಿರ್ಮಾಪಕರಾದ ವಿಜಯ್ ಕಿರಂಗದೂರ್ (Vijay kiragandur) ಕಾಂತಾರ ಚಿತ್ರವನ್ನು ತುಳು ಭಾಷೆಗೆ ಡಬ್ ಮಾಡಿ ತೆರೆಗೆ ತರುತ್ತಿದ್ದಾರೆ.

ಕೆಲವು ದಿನಗಳ ಬಳಿಕ ಇಂಗ್ಲಿಷ್ ಭಾಷೆಯಲ್ಲೂ ಡಬ್ ಮಾಡುವ ಸಾಧ್ಯತೆ ದಟ್ಟವಾಗಿದೆ.

Exit mobile version