ರಾಜಕಾರಣಿಯಾದವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು ಎಂದ ಸಿದ್ದರಾಮಯ್ಯ

Mysuru: ಬಿಜೆಪಿ – ಆರ್ ಎಸ್ ಎಸ್ (RSS) ಕಡೆ ತಲೆ ಹಾಕಬೇಡಿ . ನನ್ನನ್ನು ರಾಷ್ಟ್ರಪತಿ , ಪ್ರಧಾನಮಂತ್ರಿ ಮಾಡುತ್ತೇನೆ ಎಂದರೂ ನಾನು ಬಿಜೆಪಿ ಕಡೆ ನೋಡುವುದಿಲ್ಲ. ಸೈದ್ಧಾಂತಿಕ ಸ್ಪಷ್ಟತೆ ಇದ್ದಾಗ ಮಾತ್ರ ರಾಜಕಾರಣ ಮಾಡುವ ಶಕ್ತಿ ಬರುತ್ತದೆ ಇಲ್ಲವಾದರೆ ರಾಜಕಾರಣ ಮಾಡುವುದು ಸುಲಭವಲ್ಲ ಎಂದಿದ್ದಾರೆ. ಆರ್ ಎಸ್ ಎಸ್ ಅವರ ಸಿದ್ಧಾಂತವೇ ಬೇರೆ ಅಲ್ಲಿ ಶೂದ್ರರಿಗೆ ದಲಿತರಿಗೆ ಮಹಿಳೆಯರಿಗೆ ಗರ್ಭಗುಡಿಯೊಳಗೆ ಪ್ರವೇಶವಿಲ್ಲ . ಸಮಾಜಿಕ ನ್ಯಾಯ ವಿರೋಧಿ ಕಾನೂನು ಪಾಲಿಸುತ್ತವೆ.

ಮೋದಿ (Modi) ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದಿದ್ದ ದೇವೇಗೌಡರು‌ (Devegowda) ಈಗ ಮೋದಿಗೂ‌ ತಮಗೂ‌ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. ರಾಜಕಾರಣಿಯಾದವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು ಅದನ್ನು ಬಿಟ್ಟು ಕ್ಷಣಕ್ಕೊಂದು ಮಾತನಾಡುವುದಲ್ಲ.

ಬಿಜೆಪಿ (BJP) ಮೀಸಲಾತಿ ನೀಡಲು ಇಷ್ಟ ಪಡುವುದಿಲ್ಲ. ಅದರಲ್ಲೂ ಕೆಲ ಮಂತ್ರಿಗಳು ಶಾಸಕರು ಸಂವಿಧಾನವನ್ನೇ ಬದಲಿಸಲು ಹೊರಟಿದ್ದಾರೆ. ಅಷ್ಟಕ್ಕೂ ಮೀಸಲಾತಿ ಬಿಕ್ಷೆಯಲ್ಲ. ಶೋಷಿತ ವರ್ಗದ ಜನರ ಹಕ್ಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಜಾರಿಯಲ್ಲಿರುತ್ತದೆಯೊ ಅಲ್ಲಿಯವರೆಗೆ ಮೀಸಲಾತಿ ಇರಲೇಬೇಕು. ಎಲ್ಲರೂ ಒಟ್ಟಾಗಿ ಸೇರಿ ಬೆಳೆಯಬೇಕು. ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ (Budget) ಹಣವನ್ನು ಮೀಸಲಿಡುವ ಕಾನೂನನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ.

ಹಿಂದುಳಿದ ವರ್ಗದ ಅಭಿವೃದ್ಧಿಗೆಂದು ಶೇ24.1% ಹಣ ಮೀಸಲಿಡಬೇಕು ಎನ್ನುವ ಕಾನೂನನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರ. ಈ ಪ್ರಗತಿಪರ ಕಾನೂನನ್ನು ಇಡಿ ದೇಶದಲ್ಲಿ ಯಾವ ಸರ್ಕಾರ ಕೂಡಾ ಜಾರಿ ಮಾಡಿಲ್ಲ. ಮಾಡಿರುವುದು ನಮ್ಮ ಕಾಂಗ್ರೆಸ್ (Congress) ಸರ್ಕಾರ ಮಾತ್ರ. ಇದನ್ನೆಲ್ಲಾ ಜನ ಸಮುದಾಯ ತಿಳಿದುಕೊಳ್ಳಬೇಕು. ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ತಂದಿದ್ದೇವೆ.ಮಂಡಲ್ ವರದಿಯನ್ನು ವಿರೋಧಿಸಿ SCP/ TSP ಕಾಯ್ದೆಯನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಹೀಗಾಗಿ ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸಿ, ನಿಮ್ಮ ಬದುಕಿಗೆ ಕೊಳ್ಳಿ ಇಡುವವರ ಜತೆ ಸೇರದೆ, ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ .

Exit mobile version