ಮತದಾನದ ದಿನ ಖಾಸಗಿ ಕಂಪನಿಗಳು ರಜೆ ನೀಡದಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟ ಮುಖ್ಯ ಚುನಾವಣಾಧಿಕಾರಿ.

Bengaluru: ಈಗಾಗಲೇ ಎಲ್ಲರಿಗೂ ತಿಳಿದ ಹಾಗೆ ಕರ್ನಾಟಕ (Karnataka) ರಾಜ್ಯದಲ್ಲಿ ಏಪ್ರಿಲ್​ 26 ಮತ್ತು ಮೇ 7 ರಂದು ಮತದಾನ ನಡೆಯಲಿದ್ದು ಎರಡು ಹಂತದಲ್ಲಿ ಮತದಾನ (Voting) ನಡೆಯುತ್ತದೆ. ಹಾಗಾಗಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಎರಡೂ ದಿನ ಸರ್ಕಾರ ರಜೆ (Holiday) ಘೋಷಣೆ ಮಾಡಿದೆ.

ಈ ಎರಡು ದಿನದಂದು ರಜೆ ನೀಡದ ಖಾಸಗಿ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್​ ಕುಮಾರ್​ ಮೀನಾ (Manoj Kumar Meena) ಹೇಳಿದ್ದಾರೆ. ಮತದಾನದ ಮಹತ್ವದ ಕುರಿತು ಬೆಂಗಳೂರಿನಲ್ಲಿ (Bengaluru) ಸುದ್ದಿ ಗೋಷ್ಠಿ ನಡೆಸಿ ನಾವು ಐಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಿದ್ದು, ಅಲ್ಲಿನ ಸಿಇಒ (CEO) ಮತ್ತು ಮ್ಯಾನೇಜ್​ಮೆಂಟ್​ಗಳನ್ನು ಭೇಟಿಯಾಗಿ ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ಹಾಗೂ ಮತದಾನದ ದಿನ ರಜೆ ಘೋಷಣೆ ಹೇಳಿದ್ದೇವೆ

ಸಾಧ್ಯವಾದರೆ ಅವರಿಗೆ ಮತಗಟ್ಟೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದೇವೆ. ವರ್ಕ್​ ಫ್ರಾಮ್​ ಹೋಮ್ (Work from Home) ಮಾಡುವಂತೆ ಕಂಪನಿಗಳು ಸಿಬ್ಬಂದಿಗೆ ಹೇಳುವಂತಿಲ್ಲ. ಕಡ್ಡಾಯವಾಗಿ ರಜೆ ನೀಡಲೇಬೇಕು. ಒಂದು ವೇಳೆ ರಜೆ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದಿನ ಚುನಾವಣೆಗಳಲ್ಲಿ ಶೇ35 ಅಥವಾ ಇದಕ್ಕಿಂತ ಕಡಿಮೆ ಮತದಾನವಾಗಿರುವ ಬಿಬಿಎಂಪಿ (BBMP) ವ್ಯಾಪ್ತಿಯ 1800 ಮತ್ತು ರಾಜ್ಯದ 5000 ಮತಗಟ್ಟೆಗಳನ್ನು ಗುರುತಿಸಿದ್ದೇವೆ. ಅಂತಹ ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಹಾಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು (Apartment Association) ಮತ್ತು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್‌ಗಳನ್ನು ಸಂಪರ್ಕಿಸಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಏಪ್ರಿಲ್ (April) 26 ಶುಕ್ರವಾರ ಆಗಿದ್ದು, ಮೊದಲು ಮತದಾನ ಮಾಡಿ ನಂತರ ಟ್ರಿಪ್ ಮಾಡಿ ಅದರ ಹೊರತು ವೋಟ್ ಮಾಡದೆ ಬೇರೆ ಜಾಗಗಳಿಗೆ ಪ್ರವಾಸ ಕೈಗೊಳ್ಳಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

Exit mobile version