ಸರ್ಕಾರಿ ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿ ವೇಳೆ ಎಂ.ಪಿ, ಎಂ.ಎಲ್.ಎ ಫ್ಲೆಕ್ಸ್ ಫೋಟೋ ಹಾಕಿದ್ರೆ ಎಫ್.ಐ.ಆರ್ ಪಕ್ಕಾ: ಹೈಕೋರ್ಟ್

ಸರ್ಕಾರೀ ಯೋಜನೆಗಳಲ್ಲಿ ಅನುದಾನ ನೀಡಿದ ಎಂ.ಪಿ, ಎಂ.ಎಲ್.ಎ (MP, MLA) ಸಹಿತ ಜನಪ್ರತಿನಿಧಿಗಳ ಫೋಟೋ ಫ್ಲೆಕ್ಸ್ ಹಾಕಿದ್ರೆ ಎಫ್.ಐ.ಆರ್ ಹಾಕಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.

ಇನ್ನುಮುಂದೆ ಸರ್ಕಾರಿ ವೆಚ್ಚದಲ್ಲಿ ಅಥವಾ ಸರ್ಕಾರದ ನೆರವಿನಿಂದ ಕೈಗೊಳ್ಳುವ ಯಾವುದೇ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದರೆ ತಪ್ಪಿತಸ್ಥರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಹೈಕೋರ್ಟ್ (Highcourt) ಸೂಚನೆ ನೀಡಿದೆ.

ಈಗಾಗಲೇ ಈ ರೀತಿಯ ಫ್ಲೆಕ್ಸ್ಗಳನ್ನು ಅಳವಡಿಸಿದ್ದರೆ ತಕ್ಷಣ ತೆರವುಗೊಳಿಸಿ ಎಂದು ಸೂಚಿಸಿರುವ ನ್ಯಾಯಪೀಠ, ಇಂತಹ ಫ್ಲೆಕ್ಸ್ಗಳು ಅಭಿನಂದನಾ ಫೋಟೋಗಳು (Flex, Photos) ಕಂಡುಬಂದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸುವಂತೆ ಖಡಕ್ ಸೂಚನೆ ಕೊಟ್ಟಿದೆ.

ಸಾರ್ವಜನಿಕರು ನೀಡಿದ ತೆರಿಗೆ ಹಣದಿಂದ ಸರ್ಕಾರಿ ಕಾಮಗಾರಿಗಳು ನಡೆಯುತ್ತವೆ. ಅದನ್ನು ಈ ರಾಜಕಾರಣಿಗಳು (Politicians) ತಾವೇ ತಮ್ಮ ಕೈಯಿಂದ ಖರ್ಚು ಮಾಡಿದಂತೆ ಕಾಮಗಾರಿಯನ್ನು ನಾವೇ ನಡೆಸಿದ್ದೇವೆ ಎಂಬಂತೆ ಪೋಸ್ ನೀಡುತ್ತಿದ್ದಾರೆ. ಇನ್ನು ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಇಂತಹ ವರಸೆಗಳು ಎಗ್ಗಿಲ್ಲದೆ ನಡೆಯುತ್ತದೆ. ಇದಕ್ಕೀಗ ಬ್ರೇಕ್ ಬಿದ್ದಿದೆ.

Exit mobile version