ಅರಗ ಜ್ಞಾನೇಂದ್ರ ಮತ್ತು ಸುನೀಲ್ ಕುಮಾರ್ ಖಾತೆ ಅದಲು-ಬದಲು??

homeminister

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ(NewDelhi) ತೆರಳಿದ್ದ ಮುಖ್ಯಮಂತ್ರಿ(ChiefMinister) ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಇನ್ನು ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ.

ಈ ಸಂಬಂಧ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದೇನೆ. ಆದರೆ ಅಂತಿಮ ತೀರ್ಮಾನವನ್ನು ನಮ್ಮ ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಲುಸಾಲು ಚುನಾವಣೆಗಳು ಎದುರಾಗಲಿವೆ. ರಾಜ್ಯಸಭೆ, ಬಿಬಿಎಂಪಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಈ ಎಲ್ಲ ಚುನಾವಣೆಗಳನ್ನು ಎದುರಿಸುವ ದೃಷ್ಟಿಯಿಂದ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದೇನೆ. ರಾಜ್ಯದ ರಾಜಕೀಯ ಸ್ಥಿತಿಗತಿಗಳ ವಿವರವನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಆದರೆ ಈ ನಡುವೆ ಸಿಎಂ ಬೊಮ್ಮಾಯಿ ಅವರು ಖಾತೆ ಬದಲಾವಣೆ ಕುರಿತು ವರಿಷ್ಠರೊಂದಿಗೆ ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಗೃಹ ಸಚಿವರಾಗಿರುವ(HomeMinister) ಅರಗ ಜ್ಞಾನೇಂದ್ರ(Araga Jnanendra) ಅವರ ಖಾತೆಯನ್ನು ಬದಲಾಯಿಸುವ ಕುರಿತು ವರಿಷ್ಠರ ಸಲಹೆ ಕೇಳಿದ್ದಾರೆ. ಇನ್ನು ಮುಂದಿನ ವಾರ ಸಂಪುಟ ಪುನರ್ ರಚನೆಯಾದರೆ ಐವರು ಸಚಿವರನ್ನು ಕೈಬಿಡುವ ಸಾಧ್ಯತೆ ಇದ್ದು, ಡಾ.ಕೆ.ಸುಧಾಕರ್, ಆರ್ ಅಶೋಕ, ಎಂಟಿಬಿ ನಾಗರಾಜ್, ಶಶಿಕಲಾ ಜೊಲ್ಲೆ ಅವರ ಹೆಸರು ಕೇಳಿಬರುತ್ತಿದೆ.

ಅರವಿಂದ್ ಬೆಲ್ಲದ್, ತಿಪ್ಪಾರೆಡ್ಡಿ, ರಾಜುಗೌಡ, ಪ್ರೀತಂ ಗೌಡ, ಎನ್ ಮಹೇಶ್, ದತ್ತಾತ್ರೇಯ ರೇವೂರ್ ಮತ್ತು ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬೊಮ್ಮಾಯಿ ಒಲವು ತೋರಿದ್ದಾರೆ ಎನ್ನಲಾಗಿದೆ. ಇನ್ನು ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಇಂಧನ ಸಚಿವ ಸುನೀಲ್ ಕುಮಾರ್ ಅವರ ಖಾತೆಗಳು ಅದಲು ಬದಲಾಗುವ ಸಾಧ್ಯತೆಯಿದೆ.

Exit mobile version