ಕನ್ನಡ ಬಾವುಟವನ್ನು ನಿರ್ಮಿಸಿದವರಾರು ಹಾಗೂ ಕೆಂಪು ಮತ್ತು ಹಳದಿ ಬಣ್ಣದ ಸಂಕೇತವೇನು? ಇಲ್ಲಿದೆ ಮಾಹಿತಿ!

ಕನ್ನಡಿಗರ ಹೋರಾಟದಲ್ಲಿ ಕಂಗೊಳಿಸುವ ಹಳದಿ, ಕೆಂಪು ಬಣ್ಣದ ಧ್ವಜವನ್ನು ರಚಿಸಿದ್ದು ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿಯವರು(M. Ramamurthy)

ಅರಿಶಿಣ(Yellow) ಮತ್ತು ಕೆಂಪು(Red) ಬಣ್ಣದ ನಾಡಧ್ವಜವನ್ನು(State Flag) 1965ರಲ್ಲಿ ಶ್ರೀ ಎಂ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ರಚನೆ ಮಾಡಲಾಯಿತು. ಈ ಧ್ವಜವನ್ನು ಕನ್ನಡ ರಾಜ್ಯೋತ್ಸವದ(Kannada Rajyotsava) ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಸಮಾವೇಶಗಳಲ್ಲಿ, ಕನ್ನಡ ಸಂಸ್ಕೃತಿ(Kannada Culture) ಸಮ್ಮೇಳನಗಳಲ್ಲಿ, ಮತ್ತು ಎಲ್ಲೆಂದರಲ್ಲಿ ಹಾರಿಸಿದರೂ ಕೂಡ, ಅದಕ್ಕೊಂದು ವಿಶೇಷ ಗೌರವವಿದೆ. ರಾಷ್ಟ್ರಧ್ವಜಕ್ಕೆ ಇರುವಷ್ಟು ಮಾನ್ಯತೆ ಕರ್ನಾಟಕದಲ್ಲಿ ಕನ್ನಡ ಧ್ವಜಕ್ಕೂ ಇದೆ.

ಗೋಕಾಕ್ ಚಳುವಳಿಯಲ್ಲಿ ಕನ್ನಡಿಗರ ಐಕ್ಯತೆಯ ಸಂಕೇತವಾಗಿ ಈ ಧ್ವಜವನ್ನು ಬಳಸಲಾಗಿತ್ತು. 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿತ್ತು. ಆದರೆ, ಕಾನೂನು(Law) ಅಡಚಣೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ, ಕನ್ನಡ ರಾಜ್ಯೋತ್ಸವದಂದು ಎಲ್ಲ ಸರಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜವನ್ನು ಹಾರಿಸಬೇಕೆಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಕರ್ನಾಟಕ ಹೈಕೋರ್ಟ್ ಇದನ್ನು ಪ್ರಶ್ನಿಸಿದ್ದರಿಂದ ಆದೇಶವನ್ನು ಹಿಂಪಡೆಯಬೇಕಾಗಿತ್ತು.

ಜಮ್ಮು- ಕಾಶ್ಮೀರ ಮತ್ತು ಕರ್ನಾಟಕವನ್ನು ಹೊರತುಪಡಿಸಿದರೆ ಯಾವ ರಾಜ್ಯದಲ್ಲೂ ಅಧಿಕೃತವಾಗಿ ರಾಜ್ಯಧ್ವಜವಿಲ್ಲ. ಕನ್ನಡ ಬಾವುಟದ ಹಳದಿ ಬಣ್ಣ ಕನ್ನಡಿಗರ ಸ್ವಾಭಿಮಾನ, ಶಾಂತಿ, ರಕ್ಷಣೆಯ ಪ್ರತೀಕ. ಜತೆಗೆ ಕನ್ನಡ ನಾಡು ಚಿನ್ನದ ಬೀಡು ಎಂಬುದನ್ನು ಪ್ರತಿಪಾದಿಸುತ್ತದೆ. ಕೆಂಪು ಬಣ್ಣ, ಕನ್ನಡಿಗರ ಕ್ಷಾತ್ರತೇಜ, ತ್ಯಾಗ ಮತ್ತು ಕ್ರಾಂತಿಯ ಪ್ರತೀಕ ಎಂದು ಮ.ರಾಮಮೂರ್ತಿಯವರೇ ಧ್ವಜ ರಚನೆಯಾದ ನಂತರ ನಡೆದ ಸಮಾವೇಶದಲ್ಲಿ ಹೇಳಿದ್ದರು.

Exit mobile version